ನಮ್ಮ ಜೀವನದಲ್ಲಿ ಆಹಾರವು ತುಂಬಾ ವಿಶೇಷ ಮತ್ತು ಮಹತ್ವಪೂರ್ಣವಾಗಿದೆ. ರುಚಿ-ರುಚಿಯಾದ ಖಾದ್ಯ ನೋಡಿದ್ರೆ ಸಾಕು ಆಹಾರ ಪ್ರಿಯರ ಬಾಯಲ್ಲಿ ನೀರೂರುತ್ತೆ. ಇಂತಹ ಅನೇಕ ಖಾದ್ಯಗಳನ್ನು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವುದನ್ನು ನೀವು ನೋಡಿರಬಹುದು. ಇದೀಗ ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ರಾಜ್ಯದ ಜನಪ್ರಿಯ ಖಾದ್ಯದ ಪಾಕವಿಧಾನವನ್ನು ಹಂಚಿಕೊಂಡಿದ್ದಾರೆ.
ಟೆಮ್ಜೆನ್ ಇಮ್ನಾ ಅಲಾಂಗ್ ಅವರು ತಮ್ಮ ತಾಯಿಯ ಅಡುಗೆಯ ಬಗೆಗಿನ ಒಲವನ್ನು ವ್ಯಕ್ತಪಡಿಸಿದ್ದಾರೆ. ಪಾಕ ವಿಧಾನವು ತಮ್ಮ ತಾಯಿಯ ಭಕ್ಷ್ಯವನ್ನು ನೆನಪಿಸುತ್ತದೆ ಎಂದು ಹೇಳಿದ್ದಾರೆ. ಅವರು ತಮ್ಮ ಮನೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ರು. ಅಲ್ಲದೆ ಸಚಿವರು ಇನ್‌ಸ್ಟಾಗ್ರಾಮ್ ಖಾತೆ ನಾಗಾ ಫುಡ್ ಟ್ರೈಬ್‌ಗೆ ವಿಡಿಯೋಗಾಗಿ ಕ್ರೆಡಿಟ್ ನೀಡಿದ್ದಾರೆ.
ಸಚಿವರು ತಮ್ಮ ತಾಯಿಯ ಅಡುಗೆ ಮತ್ತು ಸಾಂಪ್ರದಾಯಿಕ ತಿನಿಸುಗಳ ಮೇಲಿನ ಪ್ರೀತಿಯನ್ನು ಹಂಚಿಕೊಂಡಿದ್ದಾರೆ. ಸಚಿವರ ಟ್ವೀಟ್ ಬಳಕೆದಾರರಿಂದ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ. ನಾಗಾ ಆಹಾರವು ಅತ್ಯಂತ ಕಡಿಮೆ ದರದ ಆಹಾರವಾಗಿದೆ. ನಾಗಾ ಆಹಾರವನ್ನು ಪ್ರಚಾರ ಮಾಡಲು ದೆಹಲಿಯಲ್ಲಿ ನಾಗಾ ಆಹಾರ ಸಭೆಯನ್ನು ಮಾಡಿ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಈ ರೀತಿಯ ಟ್ವೀಟ್‌ಗಳು ಖಂಡಿತವಾಗಿಯೂ ನಾಗಾಲ್ಯಾಂಡ್ ಪ್ರವಾಸೋದ್ಯಮವನ್ನು ಹೆಚ್ಚಿಸುತ್ತವೆ ಎಂದು ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://twitter.com/AlongImna/status/1651496801567113217?ref_src=twsrc%5Etfw%7Ctwcamp%5Etweetembed%7Ctwterm%5E1651496801567113217%7Ctwgr%5Ebf28a4e7a79db1a5a80d1142010e170e75f9d8e4%7Ctwcon%5Es1_&ref_url=https%3A%2F%2Fwww.news18.com%2Fbuzz%2Fthis-recipe-reminds-nagaland-minister-of-his-mom-no-we-are-not-crying-you-are-7669159.html
https://twitter.com/AlongImna/status/1651496801567113217?ref_src=twsrc%5Etfw%7Ctwcamp%5Etweetembed%7Ctwterm%5E1651497378879520768%7Ctwgr%5Ebf28a4e7a79db1a5a80d1142010e170e75f9d8e4%7Ctwcon%5Es2_&ref_url=https%3A%2F%2Fwww.news18.com%2Fbuzz%2Fthis-recipe-reminds-nagaland-minister-of-his-mom-no-we-are-not-crying-you-are-7669159.html
https://twitter.com/AlongImna/status/1651496801567113217?ref_src=twsrc%5Etfw%7Ctwcamp%5Etweetembed%7Ctwterm%5E1651499721352151040%7Ctwgr%5Ebf28a4e7a79db1a5a80d1142010e170e75f9d8e4%7Ctwcon%5Es2_&ref_url=https%3A%2F%2Fwww.news18.com%2Fbuzz%2Fthis-recipe-reminds-nagaland-minister-of-his-mom-no-we-are-not-crying-you-are-7669159.html
https://twitter.com/AlongImna/status/1651496801567113217?ref_src=twsrc%5Etfw%7Ctwcamp%5Etweetembed%7Ctwterm%5E1651610651020894211%7Ctwgr%5Ebf28a4e7a79db1a5a80d1142010e170e75f9d8e4%7Ctwcon%5Es2_&ref_url=https%3A%2F%2Fwww.news18.com%2Fbuzz%2Fthis-recipe-reminds-nagaland-minister-of-his-mom-no-we-are-not-crying-you-are-7669159.html
https://twitter.com/AlongImna/status/1651496801567113217?ref_src=twsrc%5Etfw%7Ctwcamp%5Etweetembed%7Ctwterm%5E1651499296934510593%7Ctwgr%5Ebf28a4e7a79db1a5a80d1142010e170e75f9d8e4%7Ctwcon%5Es2_&ref_url=https%3A%2F%2Fwww.news18.com%2Fbuzz%2Fthis-recipe-reminds-nagaland-minister-of-his-mom-no-we-are-not-crying-you-are-7669159.html