ವಿಮಾನ ನಿಲ್ದಾಣದ ಉದ್ಘಾಟನೆ ವೇಳೆ ಸಾರ್ವಜನಿಕರನ್ನು ಕರೆ ತರಲು ಸಾವಿರಾರು ಬಸ್ ಬಳಕೆ; KSRTC ಗೆ ಬರೋಬ್ಬರಿ 3.93 ಕೋಟಿ ರೂ. ಪಾವತಿ; RTI ಅರ್ಜಿಯಲ್ಲಿ ಬಹಿರಂಗ

ನೂತನವಾಗಿ ನಿರ್ಮಾಣವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 27ರಂದು ಉದ್ಘಾಟಿಸಿದ್ದರು. ವಿಶೇಷ ವಿಮಾನದಲ್ಲಿ ಆಗಮಿಸಿದ್ದ ಮೋದಿಯವರ ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಸಾವಿರಾರು ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಸಾರ್ವಜನಿಕರನ್ನು ಕರೆತರಲಾಗಿತ್ತು.

ಈ ಹಿನ್ನೆಲೆಯಲ್ಲಿ ಕಾನೂನು ವಿದ್ಯಾರ್ಥಿ ಆಕಾಶ್ ಪಾಟೀಲ್ ಎಂಬುವರು ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿಯೊಂದನ್ನು ಸಲ್ಲಿಸಿದ್ದು, ಈ ಕಾರ್ಯಕ್ರಮಕ್ಕೆ ಎಷ್ಟು ಬಸ್ಸುಗಳನ್ನು ಬಳಸಿಕೊಳ್ಳಲಾಗಿತ್ತು ಹಾಗೂ ಇದರ ವೆಚ್ಚವನ್ನು ಪಾವತಿಸಿದವರು ಯಾರು ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಈಗ ಕೆ ಎಸ್ ಆರ್ ಟಿ ಸಿ ಶಿವಮೊಗ್ಗ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ವಿವಿಧೆಡೆಯಿಂದ ವಿಮಾನ ನಿಲ್ದಾಣಕ್ಕೆ ಸಾರ್ವಜನಿಕರನ್ನು ಕರೆತರಲು 1,600 ಕೆಎಸ್ಆರ್ಟಿಸಿ ಬಸ್ಸುಗಳನ್ನು ಪಡೆಯಲಾಗಿತ್ತು ಎಂದು ಆರ್‌.ಟಿ.ಐ. ಅರ್ಜಿಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದ್ದು, ಇದರ ಬಾಡಿಗೆ ಮೊತ್ತ 3,93,92,565 ರೂಪಾಯಿಗಳನ್ನು ಕಾರ್ಯಪಾಲಕ ಎಂಜಿನಿಯರ್ ಅವರು ಪಾವತಿಸಿದ್ದಾರೆ ಎಂದು ತಿಳಿಸಲಾಗಿದೆ. ಅಂದ ಹಾಗೆ ಇದು ಸರ್ಕಾರಿ ಬಸ್ಸುಗಳ ಬಳಕೆಯ ಮಾಹಿತಿ ಮಾತ್ರವಾಗಿದ್ದು ಖಾಸಗಿ ಬಸ್ಸುಗಳು ಮತ್ತು ಇತರೆ ವಾಹನಗಳ ಮಾಹಿತಿ ಇದರಲ್ಲಿಲ್ಲ.‌

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read