ವಿಧಾನಸಭಾ ಚುನಾವಣೆ; ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದ ಆಮ್ ಆದ್ಮಿ ಪಕ್ಷ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.

ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ದಿಯವರು 60 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ 11 ಮಹಿಳೆಯರಿಗೆ ಹಾಗೂ 14 ಜನ ರೈತರಿಗೆ ಹಾಗೂ ಬಿಎಂಟಿಸಿಯ ಮಾಜಿ ಕಂಡಕ್ಟರ್ ಓರ್ವರಿಗೆ ಟಿಕೆಟ್ ನೀಡಲಾಗಿದೆ.

ಶ್ರೀಕಾಂತ್ ಪಾಟೀಲ್-ಚಿಕ್ಕೊಡಿ ಸದಲಗಾ, ಇಜಾಜ್ ಅಹ್ಮದ್ -ಅರಭಾವಿ, ಜಾನ್ಸ್ ಕುಮಾರ್ ಎಂ ಕರೆಪ್ಪಗೋಳ-ಗೋಕಾಕ್, ಆನಂದ ಹಂಪಣ್ಣವರ್- ಕಿತ್ತೂರ್, ಹಾಶಿಂಪೀರ್ ವಾಲಿಕಾರ್- ವಿಜಯಪುರ ನಗರ, ವಿಶ್ವನಾಥ ರೆಡ್ಡಿ-ಜೇವರ್ಗಿ, ಅಜರುದ್ದೀನ್ ರಾಣಾ- ಯಾದಗಿರಿ, ಅನಿಲ್ ಕುಮಾರ್ ಆರ್-ಕನಕಗಿರಿ, ನಿರಂಜನಯ್ಯ-ಕುಂದಗೋಳ, ರೂಪಾ ನಾಯಕ್-ಕುಮಟಾ, ಸಾಯಿಕುಮಾರ್-ಹಾನಗಲ್, ಯರಿಸ್ವಾಮಿ-ಬಳ್ಳಾರಿ ಶಹರ, ಚಂದ್ರಶೇಖರ್-ಸೊರಬ, ಪ್ರಭಾಕರ ಪೂಜಾರಿ-ಉಡುಪಿ, ದಿನೇಶ್ ಕುಮಾರ್-ತುಮಕೂರು, ಡಾ.ವೈ.ವಿ. ವೆಂಕಟಾಚಲ-ಶ್ರೀನಿವಾಸಪುರ ಸೇರಿದಂತೆ ಒಟ್ಟು 60 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read