ವಾಹನ ಖರೀದಿಸುವವರಿಗೆ ಬೆಸ್ಟ್‌ ಆಯ್ಕೆಗಳಿವು…! ಇಲ್ಲಿದೆ ಅತಿ ಹೆಚ್ಚು ಮಾರಾಟವಾದ ಮೋಟಾರ್‌ ಸೈಕಲ್‌ಗಳ ಪಟ್ಟಿ

ಕಳೆದ ತಿಂಗಳು ಮೋಟಾರ್‌ಸೈಕಲ್ ಮಾರಾಟದಲ್ಲಿ ಜಿಗಿತ ಕಂಡು ಬಂದಿದೆ. ಜನವರಿ 2023 ರಲ್ಲಿ, ಬೈಕ್ ಮಾರಾಟವು ಶೇಕಡಾ 11.63 ರಷ್ಟು ಏರಿಕೆಯಾಗಿದ್ದು 6,56,474 ಯುನಿಟ್‌ಗಳು ಬಿಕರಿಯಾಗಿವೆ.

ವರ್ಷದ ಹಿಂದೆ ಅಂದರೆ 2022ರ ಜನವರಿಯಲ್ಲಿ 5,88,105 ಬೈಕ್‌ಗಳು ಮಾರಾಟವಾಗಿವೆ. ಹೊಸ ಬೈಕ್‌ ಖರೀದಿಸುವ ಯೋಚನೆಯಲ್ಲಿರುವವರು ಈ ಪಟ್ಟಿಯನ್ನು ಗಮನಿಸಬಹುದು. ಕಳೆದ ತಿಂಗಳು ಅತಿ ಹೆಚ್ಚು ಮಾರಾಟವಾದ ಟಾಪ್ 5 ಹೆಚ್ಚು ಮೋಟಾರ್‌ಸೈಕಲ್‌ಗಳ ವಿವರ ಇಲ್ಲಿದೆ. ಗ್ರಾಹಕರ ನೆಚ್ಚಿನ ಬೈಕ್‌ಗಳಿವು.

ಅತಿ ಹೆಚ್ಚು ಮಾರಾಟವಾದ ಬೈಕ್‌

ಹೀರೋ ಸ್ಪ್ಲೆಂಡರ್ : ಅತಿ ಹೆಚ್ಚು ಮಾರಾಟವಾದ ಮೋಟಾರ್ ಸೈಕಲ್‌ಗಳ ಪಟ್ಟಿಯಲ್ಲಿ ಹೀರೋ ಸ್ಪ್ಲೆಂಡರ್‌ ಅಗ್ರಸ್ಥಾನದಲ್ಲಿದೆ. ಕಳೆದ ತಿಂಗಳು 2,61,833 ಯುನಿಟ್‌ಗಳನ್ನು ಹೀರೋ ಮಾರಾಟ ಮಾಡಿದೆ. ಜನವರಿ 2022ಕ್ಕೆ ಹೋಲಿಸಿದರೆ, ಸ್ಪ್ಲೆಂಡರ್ ಮಾರಾಟವು 25.72 ಪ್ರತಿಶತ ಹೆಚ್ಚಾಗಿದೆ.

ಹೋಂಡಾ ಸಿಬಿ ಶೈನ್: ಅತಿ ಹೆಚ್ಚು ಮಾರಾಟವಾದ ಬೈಕ್‌ಗಳ ಪಟ್ಟಿಯಲ್ಲಿ ಹೋಂಡಾ ಸಿಬಿ ಶೈನ್‌ 2ನೇ ಸ್ಥಾನದಲ್ಲಿದೆ. ಕಳೆದ ತಿಂಗಳು 99,878 ಯುನಿಟ್‌ಗಳು ಮಾರಾಟವಾಗಿವೆ. ಜನವರಿ 2022ಕ್ಕೆ ಹೋಲಿಸಿದರೆ ಹೋಂಡಾ CB ಶೈನ್ ಮಾರಾಟವು 5 ಪ್ರತಿಶತದಷ್ಟು ಕಡಿಮೆಯಾಗಿದೆ.

ಬಜಾಜ್‌ ಪಲ್ಸರ್‌: ಕಳೆದ ತಿಂಗಳು ಪಲ್ಸರ್ ಮಾರಾಟವು ಶೇ.26.09 ರಷ್ಟು ಏರಿಕೆಯಾಗಿ 84,279 ಯುನಿಟ್‌ಗಳಿಗೆ ತಲುಪಿದೆ. ಕಂಪನಿಯು ಇತ್ತೀಚೆಗೆ ಹೊಸ ಪಲ್ಸರ್ 220F ಬುಕ್ಕಿಂಗ್ ಅನ್ನು ಪುನರಾರಂಭಿಸಿದೆ.

ಹೀರೋ HF ಡಿಲಕ್ಸ್: ಅತಿ ಹೆಚ್ಚು ಮಾರಾಟವಾದ ಬೈಕ್‌ಗಳ ಪಟ್ಟಿಯಲ್ಲಿ ಹೀರೋ ಎಚ್‌ಎಫ್‌ ಡಿಲಕ್ಸ್‌ 4ನೇ ಸ್ಥಾನದಲ್ಲಿದೆ. 47,840 ಯುನಿಟ್‌ಗಳು ಸೇಲ್‌ ಆಗಿದ್ದರೂ ಮಾರಾಟ ಪ್ರಮಾಣ ಶೇ.44.32 ರಷ್ಟು ಇಳಿಕೆಯಾಗಿದೆ.

ಬಜಾಜ್ ಪ್ಲಾಟಿನಾ: ಬಜಾಜ್‌ ಪ್ಲಾಟಿನಾ ಈ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ. ಅದರ ಮಾರಾಟವು ಕಳೆದ ತಿಂಗಳಲ್ಲಿ 41,873 ಯುನಿಟ್‌ಗಳಷ್ಟಿದ್ದರೂ 9.94 ಪ್ರತಿಶತ ಕಡಿಮೆಯಾಗಿದೆ.

ಅತಿ ಹೆಚ್ಚು ಮಾರಾಟವಾದ ಟಾಪ್ 5 ಬೈಕ್‌ಗಳ ಪಟ್ಟಿ

1. ಹೀರೋ ಸ್ಪ್ಲೆಂಡರ್ – 2,61,833

2. ಹೋಂಡಾ ಸಿಬಿ ಶೈನ್ – 99,878

3. ಬಜಾಜ್ ಪಲ್ಸರ್ – 84,279

4. ಹೀರೋ HF ಡಿಲಕ್ಸ್ – 47,840

5. ಬಜಾಜ್ ಪ್ಲಾಟಿನಾ – 41,873

 

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read