ವಾಹನ ಖರೀದಿದಾರರಿಗೆ ಗುಡ್ ನ್ಯೂಸ್ ನೀಡಿದ ‘ಏಥರ್’

ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಕಂಪನಿ ಏಥರ್ ವಾಹನ ಖರೀದಿದಾರರಿಗೆ ಗುಡ್ ನ್ಯೂಸ್ ನೀಡಿದೆ. ಸೀಮಿತ ಅವಧಿಗೆ ಈ ಅವಕಾಶ ಇರಲಿದ್ದು, ಜೊತೆಗೆ ಎರಡು ವರ್ಷಗಳ ಕಾಲ ಹೆಚ್ಚುವರಿ ವಾರೆಂಟ್ ಕೂಡ ಸಿಗಲಿದೆ.

ಏಥರ್ 450X ಈಗ ನಾಲ್ಕು ಹೊಚ್ಚಹೊಸ ಬಣ್ಣಗಳಲ್ಲಿ ಲಭ್ಯವಿದ್ದು, ಐದು ವರ್ಷಗಳ ಬ್ಯಾಟರಿ ವಾರೆಂಟ್ ಸಿಗಲಿದೆ. ಜೊತೆಗೆ ಸೀಟಿನ ವಿನ್ಯಾಸ ಬದಲಿಸಲಾಗಿದ್ದು, ಚಾಲಕರಿಗೆ ಪ್ರಯಾಣ ಮತ್ತಷ್ಟು ಸುಖಕರವಾಗಿರಲಿದೆ.

ಈ ವಾಹನದ ಎಕ್ಸ್ ಶೋರೂಮ್ ಬೆಲೆ (ಬೆಂಗಳೂರು) 1,35,452 ರೂಪಾಯಿಗಳಾಗಿದ್ದು ಹಳೆ ದ್ವಿಚಕ್ರ ವಾಹನಕ್ಕೆ ವಿನಿಮಯ ಮೌಲ್ಯ 42,000 ರೂಪಾಯಿ ಸಿಗುತ್ತದೆ. ಅಲ್ಲದೆ ವಿನಿಮಯ ಬೋನಸ್ 7,000 ರೂಪಾಯಿಗಳಾಗಿದ್ದು, ಜೊತೆಗೆ 1,500 ರೂಪಾಯಿ ಬ್ಯಾಂಕ್ ಕ್ಯಾಶ್ ಬ್ಯಾಕ್ ಸಿಗಲಿದೆ. ಹಾಗೂ ಆರಂಭಿಕ ವಿಶೇಷ ರಿಯಾಯಿತಿ 1,305 ರೂಪಾಯಿಗಳಾಗಿದ್ದು ಈ ಆಫರ್ ನಡಿ ವಾಹನ ಖರೀದಿಸುವವರಿಗೆ 83,647 ರೂಪಾಯಿಗಳಿಗೆ ಲಭ್ಯವಾಗಲಿದೆ. ಜನವರಿ 25ರ ವರೆಗೆ ಮಾತ್ರ ಈ ಕೊಡುಗೆ ಲಭ್ಯವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read