ವಕೀಲರು ಲಭ್ಯ ಇಲ್ಲದೆ ಬಾಕಿ ಉಳಿದುಕೊಂಡ ಕೇಸ್ ಎಷ್ಟು ಗೊತ್ತಾ….?

ಹೈದರಾಬಾದ್- ವಕೀಲರು ಹಾಗೂ ಸರಿಯಾದ ದಾಖಲೆಗಳು ಇಲ್ಲದೇ ಎಷ್ಟೋ ಕೇಸ್ ಹಾಗೆ ಪೆಂಡಿಂಗ್ ಇದ್ದಾವೆ. ಇಂಥಹದೊಂದು ವಿವರವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು ತಿಳಿಸಿದ್ದಾರೆ. ದೇಶಾದ್ಯಂತ ಕೋರ್ಟ್‌ಗಳಲ್ಲಿ 63 ಲಕ್ಷಕ್ಕೂ ಅಧಿಕ ಪ್ರಕರಣಗಳ ಇವೆಯಂತೆ. ಜೊತೆಗೆ ಕೆಲವು ದಾಖಲೆಗಳ ಕೊರತೆಯಿಂದಾಗಿ 14 ಲಕ್ಷಕ್ಕೂ ಹೆಚ್ಚು ವ್ಯಾಜ್ಯಗಳ ವಿಚಾರಣೆಯಲ್ಲೇ ಇವೆಯಂತೆ‌.

ಆಂಧ್ರಪ್ರದೇಶ ನ್ಯಾಯಾಂಗ ಅಕಾಡೆಮಿ ಉದ್ಘಾಟನಾ ಸಮಾರಂಭದಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಅವರು ಮಾತನಾಡಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ನ್ಯಾಯಾಂಗದಲ್ಲಿ ಜಿಲ್ಲಾ ಕೋರ್ಟ್‌ಗಳು ಅಧೀನ ನ್ಯಾಯಾಲಯಗಳು ಎಂಬ ವಸಾಹತುಶಾಹಿ ಮನಸ್ಥಿತಿ ಇದೆ. ಈ ಮನಸ್ಥಿತಿಯಿಂದ ನಾವು ಮೊದಲು ಹೊರ ಬರಬೇಕು ಎಂಬ ಮಾತು ಹೇಳಿದ್ದಾರೆ.

ಜಿಲ್ಲಾ ಕೋರ್ಟ್‌ಗಳು ನ್ಯಾಯಾಂಗ ವ್ಯವಸ್ಥಗೆ ಮಾತ್ರ ಸೀಮಿತವಲ್ಲ ಎಂದಿದ್ದಾರೆ. ಇನ್ನು ವಿಚಾರಣಾಧೀನ ಕೈದಿಗಳ ಕುರಿತು ವಿಷಾದ ವ್ಯಕ್ತಪಡಿಸಿದ ಅವರು, ಜಾಮೀನು ಹೊರತು ಬಂಧನವಲ್ಲ ಎಂಬ ಮಾತು ಕ್ರಿಮಿನಲ್‌ ನ್ಯಾಯಾಂಗ ವ್ಯವಸ್ಥೆಯ ಮೂಲಭೂತ ನಿಯಮ. ಆದರೆ, ಈ ನಿಯಮಕ್ಕೆ ವಿರೋಧಾಭಾಸ ಎಂಬಂತೆ ಇಂದಿಗೂ ಅನೇಕ ಮಂದಿ ವಿಚಾರಾಣಾಧೀನ ಕೈದಿಗಳು ಜೈಲುಗಳಲ್ಲಿ ಇದ್ದಾರೆ ಎಂದರು. ಬಡವರ ಸಂಕಷ್ಟಗಳನ್ನು ಆಯಾಯ ವ್ಯಾಪ್ತಿಯ ಕೋರ್ಟ್ ಗಳು ಬಗೆಹರಿಸಬೇಕು ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read