ಮುಂಬೈ: ಮುಂಬೈ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಸಭ್ಯವಾಗಿ ವರ್ತಿಸಿದ ಯುವತಿ ಮತ್ತು ಯುವಕನಿಗೆ ಸರಿಯಾದ ಶಿಕ್ಷೆ ನೀಡುವಂತೆ ಆಗ್ರಹ ವ್ಯಕ್ತವಾಗುತ್ತಿದೆ. ಯುವತಿಯ ಅಸಭ್ಯ ವರ್ತನೆಯ ವಿಡಿಯೋ ವೈರಲ್ ಆಗಿದೆ.
ಮುಂಬೈ ಮೂಲದ ಫೋಟೋ ಜರ್ನಲಿಸ್ಟ್ ಪ್ರಶಾಂತ್ ಅವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಯುವತಿಯೊಬ್ಬಳು ತನ್ನ ಎದುರಿನ ಸೀಟಿನ ಮೇಲೆ ತನ್ನ ಕಾಲುಗಳನ್ನು ವಿಶ್ರಾಂತಿ ಮಾಡಿದ್ದಳು. ಪ್ರಶಾಂತ್ ಆಕೆಯ ಕಾಲುಗಳನ್ನು ತೆಗೆಯುವಂತೆ ಹೇಳಿದಾಗ ಯುವತಿ ವಾಗ್ವಾದಕ್ಕೆ ಇಳಿದಿದ್ದಾಳೆ.
ಪ್ರಶಾಂತ್ ಅವರು ಇದರ ವಿಡಿಯೋ ಮಾಡಿ, ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಮುಂಬೈ ಪೊಲೀಸ್ ಮತ್ತು ರೈಲ್ವೆ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದಾರೆ. ಮುಂಬೈ ಪೊಲೀಸರು ಇದನ್ನು ಗಮನಿಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ, ಪ್ರಶಾಂತ್ ಎದುರು ಒಬ್ಬ ಪುರುಷ ಮತ್ತು ಯುವತಿ ಇರುವುದನ್ನು ನೋಡಬಹುದು. ಯುವತಿ ತನ್ನ ಕಾಲುಗಳನ್ನು ಮುಂದಕ್ಕೆ ಚಾಚಿ ಕುಳಿತುಕೊಂಡಿದ್ದು ಕಾಲು ತೆಗೆಯುವುದಿಲ್ಲ, ಏನು ಬೇಕಾದರೂ ಮಾಡಿಕೋ ಎನ್ನುವುದನ್ನು ಕೇಳಬಹುದು.
ಇದರ ವಿಡಿಯೋ ವೈರಲ್ ಆಗುತ್ತಲೇ, ಯುವತಿಗೆ ಸರಿಯಾದ ಶಿಕ್ಷೆ ನೀಡುವಂತೆ ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.
@MumbaiPolice @Central_Railway @CPMumbaiPolice these people supposed to be lawyers and sitting in the train like this pic.twitter.com/W3dYwtGnSr
— prashantwaydande (@prashantwaydan3) February 1, 2023