ಲಾಟರಿಯಲ್ಲಿ ಭರ್ಜರಿ ಬಂಪರ್: ಅದೃಷ್ಟಶಾಲಿಗೆ ಒಲಿದಿದೆ ದಾಖಲೆಯ 8206 ಕೋಟಿ ರೂಪಾಯಿ…!

ಲಾಟರಿಯಲ್ಲಿ ಕೋಟಿಗಟ್ಟಲೆ ಗೆದ್ದ ಸುದ್ದಿಯನ್ನು ಈ ಹಿಂದೆ ಅನೇಕ ಬಾರಿ ನಾವೆಲ್ಲ ಕೇಳಿದ್ದೇವೆ. ಆದರೆ ಅಮೆರಿಕದಲ್ಲಿ ಅದೃಷ್ಟಶಾಲಿಯೊಬ್ಬರು ದಾಖಲೆಯ ಮೊತ್ತದ ಲಾಟರಿಯನ್ನು ಗೆದ್ದಿದ್ದಾರೆ. 1 ಬಿಲಿಯನ್ ಡಾಲರ್ ಅಂದರೆ 8206 ಕೋಟಿ ರೂಪಾಯಿಯನ್ನು ತಮ್ಮದಾಗಿಸಿಕೊಂಡಿದ್ದಾರೆ ಇವರು. ಈ ವ್ಯಕ್ತಿ ಲಾಸ್ ಏಂಜಲೀಸ್ ಮೂಲದವರು. ಲಾಟರಿ ಉದ್ಯಮದಲ್ಲಿ ಬಹು ದೊಡ್ಡ ಹೆಸರು ಮಾಡಿರೋ ಕ್ಯಾಲಿಫೋರ್ನಿಯಾದ ಪವರ್ ಬಾಲ್‌ನಿಂದ ಈ ಮೊತ್ತ ಬಂದಿದೆ. ಈ ಮೊತ್ತವು ಪವರ್‌ಬಾಲ್ ಮತ್ತು ಲಾಟರಿ ಇತಿಹಾಸದಲ್ಲಿ ಅತ್ಯಧಿಕ.

ಲಾಸ್ ಏಂಜಲೀಸ್ ಡೌನ್‌ಟೌನ್‌ನಲ್ಲಿರುವ ಲಾಸ್ ಪಾಲ್ಮಿಟಾಸ್ ಮಿನಿ ಮಾರ್ಕೆಟ್‌ನ ವ್ಯಕ್ತಿಯೊಬ್ಬರು ಜುಲೈ 19 ರಂದು ಲಾಟರಿ ಗೆದ್ದಿದ್ದಾರೆ. ಈ ವ್ಯಕ್ತಿಯ ಅದೃಷ್ಟ ಸಂಖ್ಯೆ 7-10-11-13-24 ಮತ್ತು ಪವರ್‌ಬಾಲ್ ಸಂಖ್ಯೆ 24 ಆಗಿತ್ತು. 292.2 ಮಿಲಿಯನ್ ಜನರಲ್ಲಿ ಒಬ್ಬರು ಈ ಪವರ್‌ ಬಾಲ್‌ ಜಾಕ್‌ಪಾಟ್‌ ಗೆಲ್ಲುತ್ತಾರೆ. ಪವರ್‌ಬಾಲ್ ಜಾಕ್‌ಪಾಟ್‌ನ ಆರಂಭಿಕ ಅಂಕಿಅಂಶಗಳ ಪ್ರಕಾರ  ಅದರ ಮೊತ್ತವು 1 ಬಿಲಿಯನ್ ಡಾಲರ್‌ ಆಗಿತ್ತು. ಡ್ರಾ ಸಮಯದಲ್ಲಿ ಇದು 1.08 ಶತಕೋಟಿ ಡಾಲರ್‌ಗೆ ತಲುಪಿದೆ.

ವಿಜೇತರಿಗೆ 4,582 ಕೋಟಿ ರೂಪಾಯಿ ಕೈಗೆ ಸಿಗುತ್ತದೆ. ಪವರ್‌ಬಾಲ್ ಲಾಟರಿಯ ಇತಿಹಾಸದಲ್ಲಿ ಮೂರನೇ ಬಾರಿಗೆ ಜಾಕ್‌ಪಾಟ್ ಮೊತ್ತವು 1 ಬಿಲಿಯನ್ ಡಾಲರ್‌ ಗಡಿ ದಾಟಿದೆ. ಈ ಹಿಂದೆ ನವೆಂಬರ್‌ 2022ರಲ್ಲಿ 2.04 ಬಿಲಿಯನ್ ಡಾಲರ್‌ ಅಂದರೆ 16,886 ಕೋಟಿ ರೂಪಾಯಿಯಷ್ಟು ಲಾಟರಿ ಹೊಡೆದಿತ್ತು. ಪವರ್‌ಬಾಲ್‌ನ ನಿಯಮಗಳನ್ನು 2015 ರಲ್ಲಿ ಬದಲಾಯಿಸಲಾಗಿದ್ದು, ಜಾಕ್‌ಪಾಟ್ ಗೆಲ್ಲುವುದು ಅಸಾಮಾನ್ಯವೆನಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read