ಲಘು ಹೃದಯಾಘಾತದ ಈ ಲಕ್ಷಣಗಳು ನಿಮಗೆ ತಿಳಿದಿರಲಿ

ಹೃದಯಾಘಾತ ಎಷ್ಟು ಮಾರಣಾಂತಿಕವಾಗಬಹುದು ಅನ್ನೋದು ಎಲ್ಲರಿಗೂ ತಿಳಿದಿದೆ. ಆದರೆ ಕೆಲವೊಮ್ಮೆ ಹೃದಯಾಘಾತದ  ರೋಗಲಕ್ಷಣಗಳು ಸ್ಪಷ್ಟವಾಗಿರುವುದಿಲ್ಲ. ಪರಿಣಾಮ ತಕ್ಷಣ ಅದನ್ನು ಗುರುತಿಸಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ವ್ಯಕ್ತಿ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಹೃದಯಾಘಾತದ ಲಕ್ಷಣಗಳು ಸೌಮ್ಯವಾಗಿದ್ದರೆ ಅದನ್ನು “ಸೌಮ್ಯ ಹೃದಯಾಘಾತ” ಅಥವಾ ಮೈಲ್ಡ್‌ ಹಾರ್ಟ್‌ ಅಟ್ಯಾಕ್‌ ಎಂದು ಕರೆಯಲಾಗುತ್ತದೆ.

ಇತ್ತೀಚೆಗೆ ‘ಯೇ ರಿಶ್ತಾ ಕ್ಯಾ ಕೆಹಲಾತಾ ಹೈ’ ಧಾರಾವಾಹಿ ಖ್ಯಾತಿಯ ನಟ ಮೊಹ್ಸಿನ್ ಖಾನ್ ಲಘು ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಈ ನಟನಿಗೆ ಕೇವಲ 32 ವರ್ಷ. ಇದನ್ನು ಮೊಹ್ಸಿನ್‌ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಲಘು ಹೃದಯಾಘಾತದ ಲಕ್ಷಣಗಳನ್ನು ತಿಳಿದುಕೊಳ್ಳೋಣ.

ಲಘು ಹೃದಯಾಘಾತದ ಲಕ್ಷಣಗಳು…

ದೆಯಲ್ಲಿ ಅಸ್ವಸ್ಥತೆ

ಲಘು ಹೃದಯಾಘಾಥ ಸಂಭವಿಸಿದಾಗ ಎದೆಯಲ್ಲಿ ಒಂದು ರೀತಿಯ ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ. ಎದೆ ಭಾರವಾದಂತೆ ಎನಿಸುವುದು ಅಥವಾ ಒತ್ತಡದ ಅನುಭವ ಕೂಡ ಇದರ ಲಕ್ಷಣಗಳಾಗಿವೆ. ಕೆಲವೊಮ್ಮೆ ಸುಡುವ ಸಂವೇದನೆ ಕೂಡ ಉಂಟಾಗುತ್ತದೆ. ಈ ರೋಗಲಕ್ಷಣವು ಸ್ವಲ್ಪ ಸಮಯದವರೆಗೆ ಇರುತ್ತದೆ. ಇವೆಲ್ಲ ದಿಢೀರನೆ ಅಥವಾ ಕ್ರಮೇಣ ಪ್ರಾರಂಭವಾಗಬಹುದು.

ಉಸಿರಾಟದ ತೊಂದರೆ

ಯಾವುದೇ ವಿಶೇಷ ದೈಹಿಕ ಶ್ರಮವಿಲ್ಲದೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ಅದು ಕೂಡ ಲಘು ಹೃದಯಾಘಾತದ ಸಂಕೇತವಾಗಿರಬಹುದು. ಉಸಿರಾಟಲೂ ಅಸಾಧ್ಯ ಎನಿಸುವುದು, ಎದೆಯಲ್ಲಿ ಒತ್ತಡ ಅಥವಾ ನೋವು ಸಹ ಕಾಣಿಸಿಕೊಳ್ಳುತ್ತದೆ.

ಶೀತ ಅಥವಾ ಶೀತದ ಭಾವನೆ

ಕೆಲವೊಮ್ಮೆ ಹಠಾತ್ತನೆ ವಿಪರೀತ ಚಳಿಯಾಗುವುದು ಅಥವಾ ದೇಹದ ವಿವಿಧ ಭಾಗಗಳಲ್ಲಿ ತೀವ್ರ ಬೆವರುವಿಕೆ ಕೂಡ ಲಘು ಹೃದಯಾಘಾತದ ಲಕ್ಷಣಗಳಾಗಿವೆ. ಈ ರೋಗಲಕ್ಷಣವು ವಿಶೇಷವಾಗಿ ರಾತ್ರಿಯಲ್ಲಿ ಅಥವಾ ವಿಶ್ರಾಂತಿ ಪಡೆಯುತ್ತಿರುವಾಗ ಕಾಣಿಸಿಕೊಳ್ಳುತ್ತವೆ.

ಅಸಾಮಾನ್ಯ ಆಯಾಸ

ಹಠಾತ್ ಅಥವಾ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಉಂಟಾಗುವ ತೀವ್ರ ಆಯಾಸವು ಸೌಮ್ಯ ಹೃದಯಾಘಾತದ ಲಕ್ಷಣವಾಗಿರಬಹುದು. ಈ ದಣಿವು ಸಾಮಾನ್ಯ ದೈಹಿಕ ಚಟುವಟಿಕೆಯ ಸಮಯದಲ್ಲಿಯೂ ಆಗುತ್ತದೆ.

ಕೈಕಾಲುಗಳಲ್ಲಿ ನೋವು

ಹೃದಯಾಘಾತದ ಲಕ್ಷಣಗಳು ತೋಳು, ಭುಜ ಅಥವಾ ಕುತ್ತಿಗೆಯಂತಹ ಬಾಹ್ಯ ಅಂಗಗಳಲ್ಲಿನ ನೋವನ್ನು ಸಹ ಒಳಗೊಂಡಿವೆ. ಈ ನೋವು ಸಾಮಾನ್ಯವಾಗಿರುವುದಿಲ್ಲ. ದೇಹದ ಒಂದೇ ಭಾಗದಲ್ಲಿರುಬಹುದು ಅಥವಾ ಹೆಚ್ಚಿನ ಭಾಗಗಳಿಗೆ ಹರಡಬಹುದು. ಕೆಲವೊಮ್ಮೆ ಈ ನೋವು ತುಂಬಾ ಸೌಮ್ಯವಾಗಿರುತ್ತದೆ.

ಲಘು ಹೃದಯಾಘಾತ ಎಷ್ಟು ಅಪಾಯಕಾರಿ?

ಲಘು ಹೃದಯಾಘಾತವು ಹೃದಯದ ಒಂದು ಸಣ್ಣ ಭಾಗದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇದನ್ನು ಕೂಡ ಗಂಭೀರವಾಗಿ ತೆಗೆದುಕೊಳ್ಳಬೇಕು. ಲಘು ಹೃದಯಾಘಾತ ಕೂಡ ಕೆಲವೊಮ್ಮೆ ಮಾರಣಾಂತಿಕವಾಗುವ ಸಾಧ್ಯತೆ ಇರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read