ರೋಸ್ ವಾಟರ್ ಬಳಕೆಯಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನ…..!

ಗುಲಾಬಿ ಜಲ ಅಥವಾ ಪನ್ನೀರು ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದೆ. ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.

ಇದು ಉರಿಯೂತದ ಕಿರಿಕಿರಿಯನ್ನು ಶಮನಗೊಳಿಸುತ್ತದೆ. ಇದು ಮೊಡವೆ, ಚರ್ಮದ ಮೇಲಿನ ಗುಳ್ಳೆ ಹಾಗೂ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸುಕ್ಕು ಮತ್ತು ಗೆರೆಗಳನ್ನು ಕಡಿಮೆ ಮಾಡುತ್ತದೆ. ಒತ್ತಡ, ತಲೆನೋವು ಮತ್ತು ಮೈಗ್ರೇನ್ ನಂಥ ಕಾಯಿಲೆಗಳಿವೆ ಔಷಧಿಯಾಗಿ ಇದನ್ನು ಬಳಸಲಾಗುತ್ತದೆ.

ಅರೋಮಾಥೆರಪಿಯಲ್ಲಿ ತಲೆನೋವಿಗೆ ಚಿಕಿತ್ಸೆ ಕೊಡಲು ಇದನ್ನು ಬಳಸುತ್ತಾರೆ. ಬಟ್ಟೆಯನ್ನು ರೋಸ್ ವಾಟರ್ ನಿಂದ ಒದ್ದೆ ಮಾಡಿ ಹಣೆಯ ಮೇಲೆ ಇಡಬಹುದು. ಬುದ್ದಿಮಾಂದ್ಯತೆ ಮತ್ತು ಮರೆವಿನ ಕಾಯಿಲೆಗಳ ಚಿಕಿತ್ಸೆಗೂ ಇದು ಪ್ರಯೋಜನಕಾರಿ.

ನಂಜು ನಿರೋಧಕ ಗುಣ ಹೊಂದಿರುವ ಇದನ್ನು ಯಾವುದೇ ಸೋಂಕು ಗುಣಪಡಿಸಲು ನೈಸರ್ಗಿಕ ಔಷಧಿಯಾಗಿ, ಚಿಕಿತ್ಸೆಗಳಿಗಾಗಿ ಬಳಸಲಾಗುತ್ತದೆ. ಗುಣಮಟ್ಟದ, ಶುದ್ಧವಾದ ರೋಸ್ ವಾಟರ್ ಖರೀದಿಸಲು ಮಾತ್ರ ಮರೆಯದಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read