ರೋಡಿಗಿಳಿದಿದೆ ಅದ್ಭುತ ಫೀಚರ್‌ಗಳುಳ್ಳ ಹೊಸ Hero Xpulse 200 4V ಬೈಕ್‌

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿ ಹೀರೋ ಮೋಟೋ ಕಾರ್ಪ್‌, ನವೀಕರಿಸಿದ Xpulse 200 4V ಬೈಕ್‌ ಅನ್ನು ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ 1.44 ಲಕ್ಷ ರೂಪಾಯಿ. ಈ ಸಾಹಸಿ ಮೋಟಾರ್‌ಸೈಕಲ್ ಎರಡು ರೂಪಾಂತರಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಹೊಸ ವೈಶಿಷ್ಟ್ಯಗಳೊಂದಿಗೆ ನವೀಕರಿಸಿದ ಎಂಜಿನ್ ಇದರ ವಿಶೇಷತೆ.  XPulse 200 4V ವಿನ್ಯಾಸ ಕೂಡ ಅದ್ಭುತವಾಗಿದೆ.

ಹೊಸ 60 mm ಉದ್ದದ ವಿಸರ್, ನವೀಕರಿಸಿದ ಸ್ವಿಚ್ ಗೇರ್, H- ಆಕಾರದ LED DRL ಗಳೊಂದಿಗೆ ಎಲ್ಲಾ-LED ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ. ಹಿಂದಿನದಕ್ಕೆ ಹೋಲಿಸಿದರೆ ರೈಡರ್ ತ್ರಿಕೋನದಲ್ಲೂ ಬದಲಾವಣೆ ಇದೆ.ವಾಸ್ತವವಾಗಿ ಸವಾರನ ಅನುಕೂಲಕ್ಕಾಗಿ ಪಾದದ ಪೆಗ್‌ನ ಸ್ಥಳವನ್ನು ಬದಲಾಯಿಸಲಾಗಿದೆ. Hero XPulse 200 4V ಈಗ ಬಹು ABS ಮೋಡ್‌ಗಳನ್ನು ಪಡೆಯುತ್ತದೆ. ಸಾಮಾನ್ಯವಾದ ರಸ್ತೆಗಳಲ್ಲಿ ಇದನ್ನು ಚಲಾಯಿಸಬಹುದು. ಆಫ್-ರೋಡ್ ಮತ್ತು ರ್ಯಾಲಿಗೂ ಇದು ಹೇಳಿ ಮಾಡಿಸಿದಂತಿದೆ.

ಹೊಸ Xpulse 200 4V ಅದೇ 199.6cc, ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್, ಫೋರ್-ಸ್ಟ್ರೋಕ್, ಫೋರ್-ವಾಲ್ವ್ ಎಂಜಿನ್‌ನಿಂದ ಚಾಲಿತವಾಗಿದೆ. ಇದು E20 ಇಂಧನದಲ್ಲಿಯೂ ಕಾರ್ಯನಿರ್ವಹಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಹೊಂದಿಕೆಯಾಗುತ್ತದೆ. 2023 Hero XPulse 200 4V ಅನ್ನು ಎರಡು ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ – ಸ್ಟ್ಯಾಂಡರ್ಡ್ ಮತ್ತು ಪ್ರೊ.

ಇದರ ಸ್ಟ್ಯಾಂಡರ್ಡ್ ವೇರಿಯಂಟ್ ಬೆಲೆ 1.44 ಲಕ್ಷ ರೂಪಾಯಿ ಆಗಿದ್ದರೆ ಪ್ರೊ ವೇರಿಯಂಟ್ ಬೆಲೆ 1.51 ಲಕ್ಷ ರೂಪಾಯಿ. Xpulse 200 4V ನ ಪ್ರೊ ರೂಪಾಂತರವು ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸಸ್ಪೆನ್ಶನ್ ಅನ್ನು ಪಡೆಯುತ್ತದೆ. ಹಿಂಭಾಗದಲ್ಲಿ 10-ಹಂತದ ಹೊಂದಾಣಿಕೆ ಮಾಡಬಹುದಾದ ಸಸ್ಪೆನ್ಷನ್‌ ಇದೆ. ಉತ್ತಮ ಆಫ್-ರೋಡ್ ಅನುಭವಕ್ಕಾಗಿ ಉದ್ದದ ಸೀಟ್, ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಎತ್ತರದ ಹ್ಯಾಂಡಲ್‌ಬಾರ್ ಅನ್ನು ಅಳವಡಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read