ರೋಗ ನಿರೋಧಕ ಶಕ್ತಿ ವೃದ್ಧಿಸಲು ಬೇಕು ತುಳಸಿ ಎಲೆ

ತುಳಸಿಯಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ ಎಂದು ಪುರಾಣಗಳು ಹೇಳಿವೆ. ತುಳಸಿ ಗಿಡವನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಸಿಕೊಳ್ಳಲಾಗಿದೆ.

ತುಳಸಿ ಎಲೆಯನ್ನು ಸೇವಿಸುವ ಅಥವಾ ತುಳಸಿ ಹಾಕಿದ ನೀರನ್ನು ಕುಡಿಯುವ ಮುಖಾಂತರ ದೇಹದ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸಬಹುದು. ತುಳಸಿ ಎಲೆಯಲ್ಲಿ ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿದ್ದು ಇದು ಸೋಂಕಿನ ವಿರುದ್ಧ ಹೋರಾಡುತ್ತದೆ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ತುಳಸಿ ಎಲೆಯಲ್ಲಿರುವ ಆಡಾಪ್ಟಾ ಜೆನ್ ಅಂಶವು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ನರ ವ್ಯವಸ್ಥೆ ಆರಾಮವಾಗಿರಲು ಇದು ನೆರವಾಗುತ್ತದೆ. ರಕ್ತ ಸಂಚಾರವೂ ಸುಧಾರಿಸುತ್ತದೆ. 2 ದಿನಕೊಮ್ಮೆ 5 ತುಳಸಿ ಎಲೆಯನ್ನು ಸೇವನೆ ಮಾಡಿದರೆ ಒಳ್ಳೆಯದು. ಶೀತದ ಸಮಸ್ಯೆ ಬೇಗ ನಿವಾರಣೆಯಾಗುತ್ತವೆ.

ಈ ಎಲೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿರುವುದರಿಂದ ಇದು ಬಾಯಿಯ ದುರ್ವಾಸನೆಯನ್ನು ನಿವಾರಣೆ ಮಾಡುತ್ತದೆ. ತುಳಸಿ ಎಲೆಗಳನ್ನು ಟೂತ್ ಪೇಸ್ಟ್ ಗಳಲ್ಲೂ ಜಾಸ್ತಿ ಬಳಸಲಾಗುತ್ತದೆ.

ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಉಂಟು ಮಾಡುವ ಹಾನಿಕಾರಕ ರೋಗಗಳ ವಿರುದ್ಧ ಇದು ಹೊರಡುತ್ತದೆ. ಕಿಡ್ನಿಯ ಕಲ್ಲುಗಳು ಕೂಡ ನಿವಾರಣೆಯಾಗುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read