ರೈಲಿನಲ್ಲಿ ರಾಜಾರೋಷವಾಗಿ ಮದ್ಯ ಸೇವನೆ; ವಿಡಿಯೋ ವೈರಲ್

ಮುಂಬೈನಲ್ಲಿ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರೊಬ್ಬರು ಮದ್ಯ ಸೇವಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ.

ಟ್ವಿಟರ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಶೇರ್ ಮಾಡಿದ್ದು, ಮುಂಬೈ ಪೊಲೀಸರು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

“ಮುಂಬೈ ಪೋಲೀಸರೇ ಎರಡು ದಿನಗಳ ಹಿಂದೆ ನಾನು ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಈ ಘಟನೆಯು ಪನ್ವೇಲ್ ನಿಲ್ದಾಣಕ್ಕೆ ತೆರಳುವ ವಡಾಲಾ ರಸ್ತೆಯಲ್ಲಿ ಸಂಭವಿಸಿದೆ. ಸ್ಥಳೀಯ ರೈಲಿನಲ್ಲಿ ಕುಡಿಯಲು ಅನುಮತಿ ಇದೆಯೇ? ಮುಂಬೈ ಪೊಲೀಸರು ಏನು ಕ್ರಮ ತೆಗೆದುಕೊಳ್ಳುತ್ತಾರೆ?” ಎಂದು ಬರೆದಿದ್ದಾರೆ.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸರು, ಪ್ರಕರಣದ ತನಿಖೆ ನಡೆಸುವಂತೆ ಮುಂಬೈ ರೈಲ್ವೇ ಪೊಲೀಸರನ್ನು (ಜಿಆರ್‌ಪಿ) ಕೇಳಿದ್ದೇವೆ ಎಂದು ಹೇಳಿದ್ದಾರೆ.

ಪ್ರಸ್ತುತ, ರೈಲು ಸೇರಿದಂತೆ ರೈಲ್ವೆ ಆವರಣದಲ್ಲಿ ಧೂಮಪಾನ ಮತ್ತು ಮದ್ಯಪಾನ ಅಥವಾ ಯಾವುದೇ ಅಮಲು ಪದಾರ್ಥಗಳನ್ನು ಸೇವಿಸುವುದನ್ನು ನಿಷೇಧಿಸಲಾಗಿದೆ.

https://twitter.com/s_ndicate/status/1635297368890572803?ref_src=twsrc%5Etfw%7Ctwcamp%5Etweetembed%7Ctwterm%5E1635297368890572803%7Ctwgr%5E986708d222cf3d5e31994b8c3c1c0232b3973702%7Ctwcon%5Es1_&ref_url=https%3A%2F%2Fwww.ndtv.com%2Findia-news%2Fwatch-man-spotted-drinking-alcohol-aboard-mumbai-local-police-respond-3859891

https://twitter.com/s_ndicate/status/1635297368890572803?ref_src=twsrc%5Etfw%7Ctwcamp%5Etweetembed%7Ctwterm%5E1635300638417633282%7Ctwgr%5E986708d222cf3d5e31994b8c3c1c0232b3973702%7Ctwcon%5Es2_&ref_url=https%3A%2F%2Fwww.ndtv.com%2Findia-news%2Fwatch-man-spotted-drinking-alcohol-aboard-mumbai-local-police-respond-3859891

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read