ಮತ್ತೊಂದು ಹಿಟ್ & ಡ್ರ್ಯಾಗ್ ಪ್ರಕರಣ ಲಖ್ನೋದಲ್ಲಿ ಬೆಳಕಿಗೆ ಬಂದಿದೆ. ರಿಕ್ಷಾ ಚಾಲಕನಿಗೆ ಎಸ್‌ಯುವಿ ಡಿಕ್ಕಿ ಹೊಡೆದಿದ್ದು, ಹಲವಾರು ಕಿಲೋಮೀಟರ್‌ಗಳಷ್ಟು ದೂರ ಎಳೆದೊಯ್ದಿದೆ. ಈ ಭೀಕರ ಅಪಘಾತದಲ್ಲಿ ರಿಕ್ಷಾ ಚಾಲಕ ಮೃತಪಟ್ಟಿದ್ದಾನೆ. ಸಿಸಿ ಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ.
ಮೃತನನ್ನು ಜಿತು ಸಿಂಗ್ ಎಂದು ಗುರುತಿಸಲಾಗಿದ್ದು, ಎಸ್‌ಯುವಿ ಚಾಲಕ ಪರಾರಿಯಾಗಿದ್ದಾನೆ. ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ, ಆದರೆ ಆರೋಪಿ ತಲೆಮರೆಸಿಕೊಂಡಿದ್ದಾನೆ. ಪರಿವರ್ತನ್ ಚೌಕ್ ಪ್ರದೇಶದಲ್ಲಿ ನಡೆದಿರೋ ಘಟನೆ ಇದು. ಎಸ್‌ಯುವಿ, ರಿಕ್ಷಾ ಚಾಲಕನನ್ನು ಎಳೆದೊಯ್ಯುತ್ತಿರುವ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪಿಯೂಶ್ ರೈ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದೀಚೆಗೆ ದೇಶದ ಹಲವಾರು ಭಾಗಗಳಲ್ಲಿ ಹಲವಾರು ಹಿಟ್ & ಡ್ರ್ಯಾಗ್ ಪ್ರಕರಣಗಳು ವರದಿಯಾಗಿವೆ. ಹೊಸ ವರ್ಷದಂದು ರಾತ್ರಿ ದೆಹಲಿಯಲ್ಲಿ ನಡೆದ ಘಟನೆಯಲ್ಲಿ ಯುವತಿ ಮೃತಪಟ್ಟಿದ್ದಳು.
https://twitter.com/Benarasiyaa/status/1627956563192471557?ref_src=twsrc%5Etfw%7Ctwcamp%5Etweetembed%7Ctwterm%5E1627956563192471557%7Ctwgr%5E59dc5ce170e38d722fd10d86b75650deb8256119%7Ctwcon%5Es1_&ref_url=https%3A%2F%2Fwww.india.com%2Futtar-pradesh%2Fvideo-lucknow-suv-drags-rickshaw-puller-for-several-kilometers-in-lucknow-driver-absconding-hit-and-drag-case-5908648%2F