ರಾಶಿಗನುಗುಣವಾಗಿ ‘ರುದ್ರಾಕ್ಷಿ’ ಧರಿಸಿದ್ರೆ ಹೆಚ್ಚುತ್ತೆ ಶೋಭೆ

ರುದ್ರಾಕ್ಷಿ ಧರಿಸಿದ್ರೆ ಶಿವನ ಕೃಪೆ ಭಕ್ತನ ಮೇಲಿರುತ್ತದೆಯಂತೆ. ರುದ್ರಾಕ್ಷಿ ವ್ಯಕ್ತಿಯ ಶೋಭೆಯನ್ನು ಹೆಚ್ಚಿಸುತ್ತದೆ. ರುದ್ರಾಕ್ಷಿ ಧರಿಸಲೂ ವಿಧಾನವಿದೆ. ರಾಶಿಗೆ ತಕ್ಕಂತೆ ರುದ್ರಾಕ್ಷಿ ಧರಿಸಿದ್ರೆ ಒಳ್ಳೆಯದು.

ಮೇಷ : ಮೇಷ ರಾಶಿಯವರು ಮೂರು ಮುಖವುಳ್ಳ ರುದ್ರಾಕ್ಷಿಯನ್ನು ಧರಿಸಬೇಕು.

ವೃಷಭ : ಈ ರಾಶಿಯವರು ಆರು ಮುಖವುಳ್ಳ ರುದ್ರಾಕ್ಷಿ ಧರಿಸಬೇಕು.

ಮಿಥುನ : ನಾಲ್ಕು ಮುಖವುಳ್ಳ ರುದ್ರಾಕ್ಷಿ ಧಾರಣೆ ಒಳ್ಳೆಯದು.

ಕರ್ಕ : ಎರಡು ಮುಖವುಳ್ಳ ರುದ್ರಾಕ್ಷಿ ಧರಿಸಬೇಕು.

ಸಿಂಹ : ಸಿಂಹ ರಾಶಿಯವರು ಹನ್ನೆರಡು ಮುಖವುಳ್ಳ ರುದ್ರಾಕ್ಷಿಯನ್ನು ಧಾರಣೆ ಮಾಡಬೇಕು.

ಕನ್ಯಾ : ಕನ್ಯಾ ರಾಶಿಯವರು ಗೌರಿಶಂಕರ ರುದ್ರಾಕ್ಷಿಯನ್ನು ಧರಿಸಬೇಕು.

ತುಲಾ : ಈ ರಾಶಿಯವರು ಏಳು ಮುಖವುಳ್ಳ ರುದ್ರಾಕ್ಷಿಯನ್ನು ಧಾರಣೆ ಮಾಡಬೇಕು.

ವೃಶ್ಚಿಕ : ಈ ರಾಶಿಯವರು ಕೂಡ ಮೂರು ಮುಖವುಳ್ಳ ರುದ್ರಾಕ್ಷಿಯನ್ನು ಧರಿಸಬೇಕು. ರಾಶಿಯವರ ಆರ್ಥಿಕ ಸಂಕಷ್ಟವನ್ನು ಇದು ದೂರ ಮಾಡುತ್ತದೆ.

ಧನು : ಧನು ರಾಶಿಯವರು ಪಂಚಮುಖಿ ರುದ್ರಾಕ್ಷಿಯನ್ನು ಧರಿಸಬೇಕು. ಮನೆಯಲ್ಲಿ ಸುಖ-ಶಾಂತಿ ಮನೆ ಮಾಡುವ ಜೊತೆಗೆ ಯಶಸ್ಸು ಪ್ರಾಪ್ತಿಯಾಗುತ್ತದೆ.

ಮಕರ : ಈ ರಾಶಿಯವರು ಏಳು ಮುಖವುಳ್ಳ ರುದ್ರಾಕ್ಷಿಯನ್ನು ಧರಿಸಬೇಕು. ಶಿವನ ಕೃಪೆ ಈ ರಾಶಿಯವರ ಮೇಲಿರುತ್ತದೆ.

ಕುಂಭ : ಈ ರಾಶಿಯವರು ಮೂರು ಮುಖವುಳ್ಳ ರುದ್ರಾಕ್ಷಿ ಧರಿಸಬೇಕು.

ಮೀನ : ಪಂಚಮುಖಿ ರುದ್ರಾಕ್ಷಿ ಧರಿಸಿದ್ರೆ ಈ ರಾಶಿಯವರಿಗೆ ಸಾಕಷ್ಟು ಲಾಭವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read