ರಾಯಲ್‌ ಎನ್‌ಫೀಲ್ಡ್‌ ನಿದ್ದೆಗೆಡಿಸಲು ಬರ್ತಿದೆ ಬಜಾಜ್‌ನ ಹೊಸ 350 ಸಿಸಿ ಬೈಕ್‌…!

ರಾಯಲ್ ಎನ್‌ಫೀಲ್ಡ್ ತನ್ನ ಹೊಸ ಬೈಕ್ ಹಂಟರ್ 350 ಅನ್ನು ಕೆಲ  ಸಮಯದ ಹಿಂದಷ್ಟೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಂಟರ್‌ 350ಗೆ ಗ್ರಾಹಕರಿಂದ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಪ್ರಸ್ತುತ ರಾಯಲ್‌ ಎನ್‌ಫೀಲ್ಡ್‌ನ ಎರಡನೇ ಅತಿ ಹೆಚ್ಚು ಮಾರಾಟವಾದ ಬೈಕ್‌ ಎನಿಸಿಕೊಂಡಿದೆ. ಆದರೆ ಶೀಘ್ರದಲ್ಲೇ ಈ ಬೈಕ್‌ಗೆ ಟಕ್ಕರ್‌ ಕೊಡಲು  ಬಜಾಜ್ ಕಂಪನಿ ಸಜ್ಜಾಗಿದೆ. ಶೀಘ್ರವೇ ಭಾರತದಲ್ಲಿ ಬಜಾಜ್‌ನ 350 ಸಿಸಿ ಬೈಕ್ ಬಿಡುಗಡೆಯಾಗಬಹುದು.

ಬ್ರಿಟಿಷ್ ಕಂಪನಿ triumph ಕೈಗೆಟುಕುವ ದರದಲ್ಲಿ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಲು ಬಜಾಜ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಪಾಲುದಾರಿಕೆ ಅಡಿಯಲ್ಲಿ ಹಲವಾರು ಮಾದರಿಗಳನ್ನು ಬಿಡುಗಡೆ ಮಾಡಲಾಗುವುದು.  ಅವುಗಳಲ್ಲಿ ಒಂದನ್ನು ಇತ್ತೀಚೆಗೆ ಪುಣೆಯಲ್ಲಿ ಪರೀಕ್ಷೆ ನಡೆಸಲಾಯಿತು. ಬಜಾಜ್ ಮತ್ತು triumphನ 350 ಸಿಸಿ ಮೋಟಾರ್‌ಸೈಕಲ್‌ಗಳು ಈ ವರ್ಷದ ಅಂತ್ಯದ ವೇಳೆಗೆ ಬಿಡುಗಡೆಯಾಗಬಹುದು. ಇದರ ಬೆಲೆ 2 ಲಕ್ಷದಿಂದ 2.5 ಲಕ್ಷದವರೆಗೆ ಇರಬಹುದು ಎನ್ನಲಾಗ್ತಿದೆ.

350 cc ಮೋಟಾರ್‌ಸೈಕಲ್ ವಿಭಾಗದಲ್ಲಿ ಪ್ರಸ್ತುತ ರಾಯಲ್ ಎನ್‌ಫೀಲ್ಡ್ ಪ್ರಾಬಲ್ಯ ಹೊಂದಿದೆ ಮತ್ತು ಕಂಪನಿಯು 90 ಪ್ರತಿಶತ ಮಾರುಕಟ್ಟೆ ಪಾಲನ್ನು ಹೊಂದಿದೆ. ರಾಯಲ್ ಎನ್‌ಫೀಲ್ಡ್‌ನೊಂದಿಗೆ ಸ್ಪರ್ಧಿಸಲು ಬಜಾಜ್ ಈ ಹಿಂದೆ ಹಲವಾರು ಬಾರಿ ಪ್ರಯತ್ನಿಸಿದೆ. ಕಂಪನಿಯು ರಾಯಲ್ ಎನ್‌ಫೀಲ್ಡ್‌ಗೆ ನೇರ ಸ್ಪರ್ಧೆಯನ್ನು ನೀಡಲು ಬಜಾಜ್ ಡೊಮಿನಾರ್ ಮೋಟಾರ್‌ ಸೈಕಲ್ ಅನ್ನು ಮೊದಲು ಬಿಡುಗಡೆ ಮಾಡಿತ್ತು.

ಈ ಬಜಾಜ್- triumph ಮೋಟಾರ್‌ಸೈಕಲ್‌ಗೆ 2 ಎಂಜಿನ್ ಆಯ್ಕೆಗಳನ್ನು ನೀಡಬಹುದು. ಇದರಲ್ಲಿ ಒಂದು ಎಂಜಿನ್ 250 ಸಿಸಿಯದ್ದಾಗಿದ್ದರೆ ಇನ್ನೊಂದು ಎಂಜಿನ್ 350 ಸಿಸಿಯದ್ದಾಗಿದೆ.ವೈಶಿಷ್ಟ್ಯಗಳನ್ನು ನೋಡೋದಾದ್ರೆ ಇದರಲ್ಲಿ ಲಿಕ್ವಿಡ್ ಕೂಲಿಂಗ್, ಸ್ಲಿಪ್ಪರ್ ಕ್ಲಚ್, ಕ್ವಿಕ್ ಶಿಫ್ಟರ್ ಮತ್ತು ಎಬಿಎಸ್‌ನಂತಹ ವೈಶಿಷ್ಟ್ಯಗಳನ್ನು ನೀಡಬಹುದು. triumph ಭಾರತದಲ್ಲಿ 250 ಸಿಸಿ ಮಾದರಿಯನ್ನು ಮಾತ್ರ ಬಿಡುಗಡೆ ಮಾಡುವ ಸಾಧ್ಯತೆಯಿದೆ ಮತ್ತು 350 ಸಿಸಿ ಮಾದರಿಯನ್ನು ಜಾಗತಿಕ ಮಾರುಕಟ್ಟೆಗೆ ಮೀಸಲಾಗಿಡಬಹುದು. 250 ಸಿಸಿ ಎಂಜಿನ್ 30 ಬಿಎಚ್‌ಪಿ ಪವರ್ ನೀಡಿದರೆ, ದೊಡ್ಡ 350 ಸಿಸಿ ಎಂಜಿನ್ 40 ಬಿಎಸ್‌ಪಿ ಗರಿಷ್ಠ ಶಕ್ತಿಯನ್ನು ನೀಡುವ ಸಾಧ್ಯತೆಯಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read