ರಾತ್ರಿ ಸ್ವೆಟರ್‌ ಧರಿಸಿಯೇ ಮಲಗುವ ಅಭ್ಯಾಸವಿದ್ದರೆ ಇವತ್ತೇ ಅದನ್ನು ಬದಲಾಯಿಸಿಕೊಳ್ಳಿ; ಇಲ್ಲದಿದ್ದರೆ ಅಪಾಯ ಖಚಿತ….!

ವಿಪರೀತ ಚಳಿಯಿದ್ದಾಗ ರಾತ್ರಿ ನಿದ್ದೆ ಮಾಡುವುದು ಕೂಡ ಕಷ್ಟ. ದೇಹ ಬೆಚ್ಚಗಿಲ್ಲದೇ ಇದ್ದರೆ ನಿದ್ದೆಯೇ ಬರುವುದಿಲ್ಲ. ಹಾಗಾಗಿಯೇ ಎಷ್ಟೋ ಮಂದಿ ರಾತ್ರಿ ಸ್ವೆಟರ್‌ ಮತ್ತು ಸಾಕ್ಸ್‌, ಟೋಪಿ ಧರಿಸಿ ಮಲಗುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಸ್ವೆಟರ್ ಹಾಕಿಕೊಂಡೇ ಮಲಗಿದ್ರೆ ದೇಹವು ಬೆಚ್ಚಗಿರುತ್ತದೆ. ಆದ್ರೆ ಇದರಿಂದ ಕೆಲವೊಂದು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಕಡಿಮೆ ರಕ್ತದೊತ್ತಡದ ಸಮಸ್ಯೆ ಎದುರಾಗಬಹುದು, ದಿನವಿಡೀ ಸೋಮಾರಿತನ ಮತ್ತು ಆಲಸ್ಯ ಹೀಗೆ ಅನೇಕ ಬಗೆಯ ಅನಾನುಕೂಲಗಳಾಗುತ್ತವೆ. ಅವುಗಳನ್ನು ಒಂದೊಂದಾಗಿಯೇ ನೋಡೋಣ.

ಕಡಿಮೆ ರಕ್ತದೊತ್ತಡ ಸಮಸ್ಯೆ: ಚಳಿಗಾಲದಲ್ಲಿ ರಾತ್ರಿ ಸ್ವೆಟರ್ ಹಾಕಿಕೊಂಡು ಮಲಗಿದರೆ ದೇಹ ಸಾಮಾನ್ಯಕ್ಕಿಂತ ಹೆಚ್ಚು ಬೆವರುತ್ತದೆ. ಪ್ರತಿಬಾರಿ ನೀವು ತಿರುಗಿ ಮಲಗಿದಾಗಲೂ ಈ ರೀತಿ ಬೆವರುತ್ತದೆ. ಈ ಚಲನೆಗಳು ಕಡಿಮೆ ರಕ್ತದೊತ್ತಡಕ್ಕೆ ಕಾರಣವಾಗುತ್ತವೆ.

ರಕ್ತ ಪರಿಚಲನೆಗೆ ಅಡಚಣೆ: ಹೆಚ್ಚಿನ ಸ್ವೆಟರ್‌ಗಳು ದಪ್ಪವಾಗಿದ್ದು ದೇಹಕ್ಕೆ ಅಂಟಿಕೊಂಡಿರುತ್ತವೆ. ರಾತ್ರಿ ಸ್ವೆಟರ್ ಧರಿಸಿ ಮಲಗಿದರೆ ಅದು ನಿಮ್ಮ ದೇಹದ ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಅದಕ್ಕಾಗಿಯೇ ಚಳಿಗಾಲದಲ್ಲಿ ಬೆಚ್ಚಗಿನ ಆದರೆ ಹಗುರವಾದ ಮತ್ತು ಸಡಿಲವಾದ ಬಟ್ಟೆಗಳನ್ನು ಧರಿಸಿ ಮಲಗಬೇಕು.

ಚರ್ಮದ ಅಲರ್ಜಿ ಸಮಸ್ಯೆ: ರಾತ್ರಿ ಸ್ವೆಟರ್ ಧರಿಸಿ ಮಲಗಿದರೆ ಅದು ನಿಮ್ಮ ಚರ್ಮವನ್ನು ಅಗತ್ಯಕ್ಕಿಂತ ಹೆಚ್ಚು ಒಣಗಿಸಬಹುದು. ಶುಷ್ಕತೆ ಹೆಚ್ಚಾಗಿ ಚರ್ಮದಲ್ಲಿ ಸೋಂಕು ಕಾಣೀಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಸ್ವೆಟರ್ ಧರಿಸಿ ಮಲಗಿದರೆ ಉಂಟಾಗುವ ಸಮಸ್ಯೆಗಳಲ್ಲಿ ಎಸ್ಜಿಮಾ ಕೂಡ ಒಂದು. ಎಸ್ಜಿಮಾದಿಂದಾಗಿ ಚರ್ಮದಲ್ಲಿ ಶುಷ್ಕತೆ ಮತ್ತು ತುರಿಕೆ ಉಂಟಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read