ರಾತ್ರಿ ಮಲಗುವ ಮುನ್ನ ಪಾದಗಳನ್ನು ತೊಳೆಯಿರಿ, ಇದರಿಂದ ಸಿಗುತ್ತೆ ಅದ್ಭುತ ಪ್ರಯೋಜನ

ಸಾಮಾನ್ಯವಾಗಿ ಎಲ್ಲರೂ ರಾತ್ರಿ ಮಲಗುವ ಮುನ್ನ ಕಾಲುಗಳನ್ನು ತೊಳೆಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇಡೀ ದಿನದ ದಣಿವಿನ ನಂತರ ಪಾದಗಳನ್ನು ತೊಳೆದು ಮಲಗುವುದು ಹಿತವೆನಿಸುತ್ತದೆ. ಪಾದಗಳನ್ನು ತೊಳೆಯದೆ ಮಲಗುವುದು ನಿಮ್ಮನ್ನು ಚಂಚಲಗೊಳಿಸುತ್ತದೆ ಮತ್ತು ಸರಿಯಾಗಿ ನಿದ್ರೆ ಬರುವುದಿಲ್ಲ. ಹಾಗಾಗಿ ರಾತ್ರಿ ಮಲಗುವ ಮುನ್ನ ಕಡ್ಡಾಯವಾಗಿ ಪಾದಗಳನ್ನು ತೊಳೆಯಿರಿ. ಈ ರೀತಿ ಮಾಡದಿದ್ದರೆ ಅನೇಕ ಬಗೆಯ  ರೋಗಗಳು ಮತ್ತು ಸೋಂಕುಗಳು ಸಹ ನಿಮ್ಮೊಂದಿಗೆ ಮಲಗುತ್ತವೆ.

ಮಲಗುವ ಮುನ್ನ ಪಾದಗಳನ್ನೇಕೆ ತೊಳೆಯಬೇಕು?

ಚರ್ಮ ಮೃದುವಾಗುತ್ತದೆ: ಅನೇಕರಿಗೆ ಪಾದಗಳ ಚರ್ಮ ಒಣಗಿರುತ್ತದೆ ಮತ್ತು ಬಿರುಕು ಬಿಟ್ಟಿರುತ್ತದೆ. ಹೊರಗೆ ಕೆಲಸ ಮಾಡುವಾಗ ಬೆವರುವುದರಿಂದ ಪಾದಗಳಲ್ಲಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಈ ಕಾರಣದಿಂದಾಗಿ ಕೆಟ್ಟ ವಾಸನೆ ಮತ್ತು ಸೋಂಕು ಉಂಟಾಗಬಹುದು. ಇದನ್ನು ತಪ್ಪಿಸಲು ಪಾದಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆದ ನಂತರ ಮಲಗಲು ಹೋಗಿ. ಇದು ಚರ್ಮದ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ.

ದೇಹದ ಉಷ್ಣತೆ ನಿಯಂತ್ರಣ: ಕೆಲಸ ಮುಗಿಸಿಕೊಂಡು ಹೊರಗಿನಿಂದ ಬಂದ ನಂತರ ಸ್ನಾನ ಮಾಡಲು ಸಾಧ್ಯವಾಗದಿದ್ದರೆ, ಪಾದಗಳನ್ನು ತೊಳೆಯುವ ಮೂಲಕ  ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಬಹುದು. ಇದರಿಂದ ಮನಸ್ಸಿಗೆ ಕೂಡ ನೆಮ್ಮದಿ ದೊರೆಯುತ್ತದೆ. ಪಾದಗಳನ್ನು ತೊಳೆಯುವುದರಿಂದ ಒತ್ತಡ ನಿವಾರಣೆಯಾಗಿ ಮನಸ್ಥಿತಿಯನ್ನು ಸುಧಾರಿಸುತ್ತದೆ.

ನೋವು ನಿವಾರಕ: ಇಡೀ ದಿನದ ಕೆಲಸದ ನಂತರ ಪಾದಗಳನ್ನು ತೊಳೆಯುವುದರಿಂದ ತೀವ್ರವಾದ ನೋವಿನಿಂದ ಪರಿಹಾರ ಸಿಗುತ್ತದೆ. ಎಪ್ಸಮ್ ಸಾಲ್ಟ್ ಅನ್ನು ಅರ್ಧ ಬಕೆಟ್ ನೀರಿಗೆ ಹಾಕಿ ಅದರಲ್ಲಿ ಪಾದಗಳನ್ನು ಅದ್ದಿಕೊಂಡು ಸ್ವಲ್ಪ ಹೊತ್ತು ಕುಳಿತುಕೊಳ್ಳಿ. ಇದು ದೇಹಕ್ಕೆ ಸಾಕಷ್ಟು ಅನುಕೂಲ ಮಾಡಿಕೊಡುತ್ತದೆ.

ನೋವಿಗೆ ಪರಿಹಾರ: ಪಾದಗಳನ್ನು ತೊಳೆದುಕೊಂಡು ಮಲಗುವುದರಿಂದ ನೋವು, ಸೆಳೆತ ಮತ್ತು ಬಿಗಿತ ಕಡಿಮೆಯಾಗುತ್ತದೆ. ಅರ್ಧ ಬಕೆಟ್ ಉಗುರುಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ಅದ್ದಿಕೊಂಡು ಕುಳಿತುಕೊಳ್ಳುವುದರಿಂದ ಸ್ನಾಯುಗಳು ಸಡಿಲಗೊಳ್ಳುತ್ತವೆ. ಇದು ಪಾದಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.

ವಾಸನೆ ನಿವಾರಣೆ: ಬೇಸಿಗೆಯಲ್ಲಿ ದೀರ್ಘಕಾಲ ಶೂಗಳನ್ನು ಧರಿಸುವುದರಿಂದ ಪಾದಗಳಿಂದ ವಾಸನೆ ಬರುತ್ತದೆ.  ಪಾದಗಳಲ್ಲಿ ತುರಿಕೆ ಸಮಸ್ಯೆಯೂ ಉಂಟಾಗುತ್ತದೆ. ಇದನ್ನು ತಪ್ಪಿಸಲು ಪಾದಗಳನ್ನು ಚೆನ್ನಾಗಿ ತೊಳೆಯಿರಿ ಮತ್ತು ಅವುಗಳನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಿಕೊಂಡು ನಂತರ ಮಾತ್ರ ಮಲಗಲು ಹೋಗಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read