ರಾಜೇಶ್ ಖನ್ನಾ ಅಳಿಯನಾಗಲು ಪ್ರೀತಿಸಿದವಳನ್ನೇ ದೂರ ಮಾಡಿದ್ದ ನಟ; ಮೋಸ ಹೋಗಿದ್ದ ಶಿಲ್ಪಾ ಶೆಟ್ಟಿ ಮಾಡಿದ್ದೇನು….?

ಬಾಲಿವುಡ್‌ನ ಖಿಲಾಡಿ ಅಕ್ಷಯ್ ಕುಮಾರ್ ಒಂದು ರೀತಿ ಆಲ್‌ರೌಂಡರ್. ಸಿನೆಮಾಗಳ ಜೊತೆಗೆ ಸಮಾಜ ಸೇವೆಯ ಮೂಲಕ, ಫಿಟ್ನೆಸ್‌ ಮೂಲಕ ಜನರನ್ನು ಸೆಳೆದಿದ್ದಾರೆ. ಆದರೆ ಅಕ್ಕಿಯ ವೈಯಕ್ತಿಕ ಬದುಕು ಅಂದುಕೊಂಡಷ್ಟು ಸರಳವಾಗಿರಲಿಲ್ಲ. ಅನೇಕ ನಟಿಯರ ಜೊತೆಗೆ ಅಕ್ಷಯ್‌ ಹೆಸರು ಥಳುಕು ಹಾಕಿಕೊಂಡಿತ್ತು. ರವೀನಾ ಟಂಡನ್‌, ಶಿಲ್ಪಾ ಶೆಟ್ಟಿ ಸೇರಿದಂತೆ ಅನೇಕ ನಟಿಯರ ಜೊತೆ ಅಕ್ಷಯ್‌ ಡೇಟಿಂಗ್‌ ಮಾಡಿದ್ದರು ಅನ್ನೋ ಗಾಸಿಪ್‌ ಹೊಸದೇನಲ್ಲ. ಆದರೆ ಹೆಸರಾಂತ ನಟ ರಾಜೇಶ್‌ ಖನ್ನಾ ಅವರ ಅಳಿಯನಾಗಬೇಕೆಂಬ ಹಂಬಲದಲ್ಲಿ ಅಕ್ಷಯ್‌ ಕುಮಾರ್‌ ತಾನು ಪ್ರೀತಿಸಿದಾಕೆಗೆ ಮೋಸ ಮಾಡಿದ್ದಾರೆ ಅನ್ನೋ ಆರೋಪವೂ ಇದೆ.

2001 ರಲ್ಲಿ ಅಕ್ಷಯ್ ಕುಮಾರ್, ಟ್ವಿಂಕಲ್ ಖನ್ನಾರನ್ನು ಮದುವೆಯಾದ್ರು, ಅಕ್ಕಿಯ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದ ನಟಿ ಶಿಲ್ಪಾ ಶೆಟ್ಟಿ ಹೃದಯ ಒಡೆದು ಹೋಗಿತ್ತು. ಅಕ್ಷಯ್‌ ಕುಮಾರ್‌ ಹಾಗೂ ಶಿಲ್ಪಾ ಶೆಟ್ಟಿ ಡೇಟಿಂಗ್‌ ಮಾಡುತ್ತಿದ್ದರು. ಮೈ ಖಿಲಾಡಿ ತೂ ಅನಾಡಿ, ಜಾನ್ವರ್, ಇನ್ಸಾಫ್, ಧಡ್ಕನ್ ಮುಂತಾದ ಚಿತ್ರಗಳಲ್ಲಿ ಇವರಿಬ್ಬರ ಜೋಡಿ ತುಂಬಾ ಸ್ಟ್ರಾಂಗ್ ಆಗಿತ್ತು. ರೀಲ್‌ನಲ್ಲಿ ಮಾತ್ರವಲ್ಲ ರಿಯಲ್‌ ಆಗಿಯೂ ಈ ಜೋಡಿ ಪ್ರೀತಿಯಲ್ಲಿ ಬಿದ್ದಿತ್ತು. ಸದ್ಯದಲ್ಲೇ ಅಕ್ಷಯ್‌ ಹಾಗೂ ಶಿಲ್ಪಾ ಮದುವೆಯಾಗಲಿದ್ದಾರೆ ಅನ್ನೋ ಸುದ್ದಿಯಿತ್ತು. ಆದ್ರೆ ಟ್ವಿಂಕಲ್‌ ಖನ್ನಾ ಜೊತೆ ಹಸೆಮಣೆ ಏರಿದ ಅಕ್ಷಯ್‌, ಶಿಲ್ಪಾಗೆ ಶಾಕ್‌ ಕೊಟ್ಟಿದ್ದರು.

ಸುಂದರ ದಾಂಪತ್ಯ ಜೀವನದ ಕನಸುಗಳನ್ನು ಹೆಣೆಯುತ್ತಿದ್ದ ಶಿಲ್ಪಾ ಶೆಟ್ಟಿ, ಮೋಸ ಹೋಗಿದ್ದರು. ಬಿಕ್ಕಿ ಬಿಕ್ಕಿ ಅತ್ತಿದ್ದ ಆಕೆ, ಸಂದರ್ಶನವೊಂದರಲ್ಲಿ ಅಕ್ಷಯ್ ತನಗೆ ಪ್ರೀತಿಯ ಭರವಸೆ ನೀಡಿದ್ದನೆಂದು ಸ್ಪಷ್ಟವಾಗಿ ಹೇಳಿದ್ದರು. ಅಚ್ಚರಿಯ ವಿಷಯವೆಂದರೆ ಶಿಲ್ಪಾ ಮತ್ತು ಟ್ವಿಂಕಲ್ ಉತ್ತಮ ಸ್ನೇಹವನ್ನು ಹೊಂದಿದ್ದರು. ಅಕ್ಷಯ್‌ ಆಕೆಯನ್ನು ಮದುವೆಯಾಗಿದ್ದಕ್ಕೆ ಶಿಲ್ಪಾ ಶೆಟ್ಟಿ, ಟ್ವಿಂಕಲ್ ಖನ್ನಾರನ್ನು  ದೂಷಿಸಲಿಲ್ಲ. ಸದ್ಯ ಅಕ್ಷಯ್ ಮತ್ತು ಟ್ವಿಂಕಲ್ ಖನ್ನಾ ದಾಂಪತ್ಯ 22 ವರ್ಷಗಳನ್ನು ಪೂರೈಸಿದೆ. ಇಬ್ಬರೂ ಆನಿವರ್ಸರಿಯನ್ನು ಆಚರಿಸಿಕೊಂಡಿದ್ದಾರೆ. ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ಆಗಿದ್ದ ರಾಜೇಶ್ ಖನ್ನಾ ಅವರ ಮಗಳು ಟ್ವಿಂಕಲ್. ಹೀಗಿರುವಾಗ ಖನ್ನಾ ಕುಟುಂಬದ ಅಳಿಯನಾಗುವ ಅವಕಾಶವನ್ನು ಕೈಬಿಡಲು ಅಕ್ಷಯ್ ಬಯಸಲಿಲ್ಲ. ಆದಾಗ್ಯೂ ಮದುವೆಯ ನಂತರ ಪ್ರಿಯಾಂಕಾ ಚೋಪ್ರಾ ಜೊತೆಗೆ ಅಕ್ಷಯ್‌ ಹೆಸರು ಥಳುಕು ಹಾಕಿಕೊಂಡಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read