ಯಾವಾಗ್ಲೂ ನಿದ್ರೆ ಮಾಡ್ತಿರ್ತಾಳೆಂದು ಪತ್ನಿ ವಿರುದ್ದ ಪತಿ ದೂರು….!

ಬೆಂಗಳೂರು: ಅಪರೂಪದ ಪ್ರಕರಣವೊಂದರಲ್ಲಿ ಬೆಂಗಳೂರಿನ ಪೊಲೀಸ್​ ಠಾಣೆಯಲ್ಲಿ ಪತ್ನಿಯ ವಿರುದ್ಧ ಪತಿ ದೂರು ದಾಖಲಿಸಿದ್ದಾರೆ. ಇದು ಅಪರೂಪದ ಪ್ರಕರಣ ಏಕೆಂದರೆ, ಪತ್ನಿ ಬೆಳಗ್ಗೆ ಬೇಗ ಏಳಲ್ಲ. ಅಡುಗೆ ಸಹ ಮಾಡಲ್ಲ. ಮದುವೆಯಾಗಿ ಐದು ವರ್ಷ ಕಳೆದರೂ ತಮ್ಮ ತಾಯಿಯೇ ಅಡುಗೆ ಮಾಡಬೇಕಾದ ಸ್ಥಿತಿ ಇದೆ ಎನ್ನುವ ಕಾರಣಕ್ಕೆ ದೂರು ದಾಖಲಾಗಿದೆ.

ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಗಿದೆ. ಬೆಂಗಳೂರಿನ ಕಮ್ರಾನ್ ಖಾನ್ ಎಂಬವರು ಪತ್ನಿ ಆಯೇಷಾ ಖಾನ್ ವಿರುದ್ಧ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಪತ್ನಿ ರಾತ್ರಿ ಮಲಗಿದರೆ, ಮರುದಿನ ಮಧ್ಯಾಹ್ನ 12.30ರ ವೇಳೆಗೆ ಏಳುತ್ತಾಳೆ. ನಂತರ ಸಂಜೆ 5.30ಕ್ಕೆ ಪುನಃ ಮಲಗುತ್ತಾಳೆ, ರಾತ್ರಿ 9.30ಕ್ಕೆ ಎದ್ದೇಳುತ್ತಾಳೆ. ಕಳೆದ 5 ವರ್ಷಗಳಿಂದ ಹೀಗೆ ಮಾಡುತ್ತಿದ್ದಾಳೆ ಎಂದು ದೂರಿನಲ್ಲಿ ಕಮ್ರಾನ್ ಖಾನ್ ಹೇಳಿದ್ದಾರೆ. ಮದುವೆಯಾಗಿ ಐದು ವರ್ಷವಾದರೂ ಸುಮ್ಮನಿದ್ದೆ. ಈಗ ನಮ್ಮ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಅವರು ದೂರಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read