ಮೌನ ತರುವ ಲಾಭ

ಮಾತು ಬೆಳ್ಳಿ, ಮೌನ ಬಂಗಾರ ಇದು ಜನಪ್ರಿಯ ಗಾದೆ ಮಾತು. ಮಾತನಾಡಿ ಕಳೆದುಕೊಂಡವಗಿಂತ, ಮೌನವಾಗಿ ಗಳಿಸಿಕೊಂಡವರೆ ಜಾಣರು. ಸಾಮಾನ್ಯವಾಗಿ 4 ಜನರು ಒಟ್ಟಾಗಿ ಸೇರಿದಾಗ ಒಂದೇ ಸಮನೆ ಹರಟುವವರೆ ಹೆಚ್ಚು. ಒಬ್ಬ ವ್ಯಕ್ತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ಆ ವ್ಯಕ್ತಿಯ ಮಾತನ್ನು ಗಮನವಿಟ್ಟು ಕೇಳಿಸಿಕೊಳ್ಳಿ. ಸಾಕಷ್ಟು ಜನ “ನಾನು ಅವರನ್ನು ನಂಬಿ ಮೋಸ ಹೋದೆ, ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ” ಅನ್ನೋ ಪಶ್ಚಾತ್ತಾಪದ ಮಾತುಗಳು ಆಡುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಮುಖ್ಯ ಕಾರಣ ನಾವು ಆ ವ್ಯಕ್ತಿಯ ಬಳಿ ಕೇಳಿಸಿಕೊಂಡಿರುವುದಕ್ಕಿಂತ, ಹೇಳಿರುವುದೇ ಹೆಚ್ಚಾಗಿ ಇರುತ್ತದೆ.

ಹೆಚ್ಚು ಮೌನವಾಗಿ ಇರುವವರು ಸೂಕ್ಷ್ಮಗ್ರಾಹಿಗಳಾಗಿ ಇರುತ್ತಾರೆ. ಅವರು ಮೌನಾಗಿ ಎಲ್ಲವನ್ನೂ, ಎಲ್ಲರನ್ನೂ ಗಮನಿಸುತ್ತಾರೆ. ಇಂಥವರು ಹೆಚ್ಚು ಸ್ವಯಂ ವಿಮರ್ಶಕರಾಗಿರುತ್ತಾರೆ.

ಮೌನಿಗಳು ಹೆಚ್ಚು ಬುದ್ಧಿವಂತರು ಹೌದು. ಸಂದರ್ಭ ಹಾಗೂ ಸನ್ನಿವೇಶ ನೋಡಿ ಮಾತ್ರ ಮಾತನಾಡುವ ಇವರು ಬೇರೆಯವರಿಂದ ಮೋಸ ಹೋಗುವ ಪ್ರಮೇಯ ಕಡಿಮೆ. ಸದಾ ಎಚ್ಚರಿಕೆಯ ನಡೆ ಇವರದ್ದಾಗಿರುವುದರಿಂದ ಎಂಥಹ ಸಂದರ್ಭವನ್ನು ಇವರು ನಿಭಾಯಿಸಬಲ್ಲರು. ಅದಕ್ಕೆ ಮಾತಿಗಿಂತ ಮೌನಕ್ಕೆ ಹೆಚ್ಚು ಬೆಲೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read