ಪಕ್ಷಿಯೊಂದು ಸುತ್ತ ನೆರೆದಿರುವ ಹಸಿದ ಮೊಸಳೆಗಳ ಹತ್ತಿರ ಬಂದ್ರೆ ಏನಾಗಬಹುದು ? ಖಂಡಿತಾ ಹಕ್ಕಿ ದುರಂತ ಅಂತ್ಯ ಕಾಣೋದು ಗ್ಯಾರಂಟಿ. ಆದರೆ, ಹಣೆಬರಹ ಗಟ್ಟಿಯಿದ್ರೆ ಮೊಸಳೆಗಳನ್ನು ದಾಟಿ ಬಚಾವ್ ಆಗ್ಬೋದು ಅನ್ನೋದಕ್ಕೆ ಈ ವಿಡಿಯೋ ಉದಾಹರಣೆಯಾಗಿದೆ.
ಹೌದು, ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮೊಸಳೆಗಳು ತುಂಬಿರುವ ಸ್ಥಳದಲ್ಲಿ ಕೋಳಿಯೊಂದು ಕಾಣಿಸಿಕೊಂಡಿದೆ. ಕೋಳಿಯು ಎಲ್ಲಾ ಮೊಸಳೆಗಳನ್ನು ದಾಟಿ ಹೋದಾಗಲೂ, ಸರೀಸೃಪಗಳು ಕೋಳಿಯನ್ನು ಕಚ್ಚಲು ಪ್ರಯತ್ನಿಸಿದೆ. ಆದರೆ, ಕೋಳಿ ಮಾತ್ರ ಚಾಣಾಕ್ಷತೆಯಿಂದ ಎಲ್ಲಾ ಮೊಸಳೆಗಳನ್ನು ದಾಟಿ ಬಚಾವ್ ಆಗಿದೆ.
ಮೊಸಳೆಗಳ ಮೇಲೆಯೇ ಕೋಳಿ ಹಾರಿದೆ. ಈ ವೇಳೆ ಮೊಸಳೆ ಕಚ್ಚಲು ಪ್ರಯತ್ನಿಸಿದ್ರೆ ಕೋಳಿ ಇನ್ನೊಂದು ಮೊಸಳೆಯ ಮೇಲೆ ಹಾರಿದೆ. ಹೀಗೆ ಮೊಸಳೆಗಳ ಮೇಲೆಯೇ ಹಾರುತ್ತಾ ತನ್ನ ಪ್ರಾಣವನ್ನು ರಕ್ಷಿಸಿಕೊಂಡಿದೆ. ಈ ವಿಡಿಯೋ ನೋಡಲು ಉಲ್ಲಾಸದಾಯಕವಾಗಿದೆ. ಅಪಾಯದ ಸ್ಥಳದಲ್ಲೂ ಕೋಳಿ ಹೇಗೆ ತನ್ನ ಪ್ರಾಣ ಕಾಪಾಡಿಕೊಂಡಿತು ಎಂಬುದನ್ನು ವಿಡಿಯೋದಲ್ಲಿ ನೋಡಬಹುದು.
ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಭಾರಿ ವೈರಲ್ ಆಗಿದೆ. ಸದ್ಯ, ಈ ವಿಡಿಯೋ ನೆಟ್ಟಿಗರನ್ನು ರಂಜಿಸಿದೆ.
https://twitter.com/TheFigen_/status/1679883711666323457?ref_src=twsrc%5Etfw%7Ctwcamp%5Etweetembed%7Ctwterm%5E1679883711666323457%7Ctwgr%5Edb65e719ae7ba66a37da20307f0cd35a4ebe87ae%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fnews18-epaper-dh523feb6a21f54358acc1d5d04a629da5%2Fwatchchickenescapesdeathbycleverlydodgingagroupofhungrycrocodiles-newsid-n518671452