ಮೊಡವೆ ಸಮಸ್ಯೆ ನಿವಾರಣೆ ಈಗ ಬಲು ಸುಲಭ

ಮೊಡವೆ ನಿವಾರಣೆಗೆ ಎಲ್ಲಾ ಪ್ರಯತ್ನಗಳನ್ನು ಮಾಡಿ ಸೋತು ಕೈ ಚೆಲ್ಲಿದ್ದೀರಾ? ಕೆಲವು ಅಭ್ಯಾಸಗಳನ್ನು ಕೈಬಿಡುವ ಮೂಲಕ ಮೊಡವೆ ಸಮಸ್ಯೆಯಿಂದ ದೂರವಿರಬಹುದು.

ಮುಖವನ್ನು ಅತಿಯಾಗಿ ಉಜ್ಜಿ ತೊಳೆಯುವುದರಿಂದ, ಕ್ಲೆನ್ಸಿಂಗ್ ಬ್ರಷ್ ಅನ್ನು ಅತಿಯಾಗಿ ಬಳಕೆ ಮಾಡುವುದರಿಂದ ಮೊಡವೆ ಸಮಸ್ಯೆ ಹೆಚ್ಚಾಗುತ್ತದೆ. ರಂಧ್ರಗಳಲ್ಲಿ ಉರಿಯೂತ ಕಾಣಿಸಿಕೊಳ್ಳುವ ಅಪಾಯ ಇರುತ್ತದೆ. ವಾರಕ್ಕೆ ಎರಡು ಬಾರಿ ಮಾತ್ರ ಮುಖಕ್ಕೆ ಸ್ಕ್ರಬ್ ಮಾಡಿ.

ಮೊಡವೆ ಇರುವವರು ಎಲ್ಲಾ ಬಗೆಯ ಕ್ಲೆನ್ಸರ್ ಮತ್ತು ಚಿಕಿತ್ಸಾ ಉತ್ಪನ್ನಗಳನ್ನು ಬಳಸಬಾರದು. ಏಕೆಂದರೆ ನಿಮ್ಮ ಚರ್ಮಕ್ಕೆ ಅದು ಹೊಂದಿಕೆ ಆಗದೆ ಇರಬಹುದು. ತಜ್ಞರ ಸಲಹೆ ಮೇರೆಗೆ ಸೌಂದರ್ಯ ಉತ್ಪನ್ನಗಳನ್ನು ಬಳಸುವುದು ಉಚಿತ.

ಮೊಡವೆ ಎದ್ದಿದೆ ಎಂದಾಕ್ಷಣ ಕಿವುಚಿ ರಕ್ತ ಹೊರ ಬರಿಸುವುದರಿಂದ ಮುಖದ ಕಲೆ ಶಾಶ್ವತವಾಗಿ ಉಳಿಯುತ್ತದೆ. ಅಲ್ಲದೆ ನಿಮ್ಮ ಕೈ ಬೆರಳುಗಳಲ್ಲಿ ಇರುವ ಬ್ಯಾಕ್ಟೀರಿಯಾ ಮೊಡವೆ ಗಾಯದೊಂದಿಗೆ ಸೇರಿಕೊಳ್ಳುತ್ತದೆ.

ಪದೇ ಪದೇ ಮುಖವನ್ನು ಮುಟ್ಟಿ ಕೊಳ್ಳುವುದನ್ನು ಬಿಟ್ಟು ಬಿಡಿ. ನಿಮ್ಮ ಕೈ ಎಷ್ಟೇ ಸ್ವಚ್ಚವಾಗಿ ಇದ್ದರೂ ಬ್ಯಾಕ್ಟೀರಿಯಾಗಳು ಬಲು ಬೇಗ ಹರಡುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read