ಮೂರು ತಿಂಗಳ ಅಂತರದಲ್ಲಿಯೇ ರಾಮ್ ರಹೀಂ ಗೆ 2ನೇ ಬಾರಿ ಮತ್ತೆ ಪೆರೋಲ್

ತನ್ನ ಆಶ್ರಮದಲ್ಲಿಯೇ ಶಿಷ್ಯರ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸ್ವಯಂ ಘೋಷಿತ ದೇವಮಾನವ ಡೇರಾ ಸಚ್ಚಾಸೌಧದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂಗೆ ಮತ್ತೊಮ್ಮೆ ಪೆರೋಲ್ ನೀಡಲಾಗಿದೆ.

ಮೂರು ತಿಂಗಳ ಹಿಂದಷ್ಟೇ ಅಂದರೆ ಕಳೆದ ವರ್ಷದ ಅಕ್ಟೋಬರ್ ನಲ್ಲಿ 20 ದಿನಗಳ ಕಾಲ ಗುರ್ಮಿತ್ ರಾಮ್ ರಹೀಂ ಪೆರೋಲ್ ಮೇಲೆ ಹೊರಬಂದಿದ್ದು, ಇದೀಗ ವೈಯಕ್ತಿಕ ಕೆಲಸದ ಕಾರಣಕ್ಕೆ 40 ದಿನಗಳ ಕಾಲ ಮತ್ತೊಮ್ಮೆ ಪೆರೋಲ್ ನೀಡಲಾಗಿದೆ.

ಹರಿಯಾಣದ ರೋಹ್ಟಕ್ ಜೈಲಿನಿಂದ ಶನಿವಾರ ಆತ ಬಿಡುಗಡೆಗೊಂಡಿದ್ದು, ಅಲ್ಲಿಂದ ನೇರವಾಗಿ ಉತ್ತರ ಪ್ರದೇಶದ ಬಾಗ್ಪತ್ ನಲ್ಲಿರುವ ತನ್ನ ಆಶ್ರಮಕ್ಕೆ ಗುರ್ಮಿತ್ ರಾಮ್ ರಹೀಂ ತೆರಳಿದ್ದಾನೆ. ಕೇವಲ ಮೂರು ತಿಂಗಳ ಅಂತರದಲ್ಲಿ ಅತ್ಯಾಚಾರ ಪ್ರಕರಣದ ಅಪರಾಧಿಗೆ ಎರಡು ಬಾರಿ ಪೆರೋಲ್ ನೀಡಿರುವುದು ಈಗ ಚರ್ಚೆಗೆ ಕಾರಣವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read