ಮುಟ್ಟಿನ ಸಮಯದಲ್ಲಿ ಬೆಸ್ಟ್ ಈ ‘ಯೋಗ’

ಮುಟ್ಟಿನ ಸಂದರ್ಭದಲ್ಲಿ ಯೋಗ ಮಾಡಬಹುದೇ ಎಂಬ ಗೊಂದಲ ಹಲವರಲ್ಲಿದೆ. ಮುಟ್ಟಿನ ಸಮಯದಲ್ಲಿ ಕೆಲವೊಂದು ಆಸನಗಳನ್ನು ಮಾಡಿದರೆ ಮುಟ್ಟಿನ ನೋವು ಕಡಿಮೆ ಆಗುತ್ತದೆ.

ಹಾಗಂತ ಎಲ್ಲಾ ಬಗೆಯ ಆಸನಗಳನ್ನು ಮುಟ್ಟಿನ ಸಮಯದಲ್ಲಿ ಮಾಡಲು ಸಾಧ್ಯವಿಲ್ಲ. ಯಾವ ಆಸನ ಮಾಡಬೇಕು ಮತ್ತು ಮಾಡಬಾರದು ಅನ್ನುವ ಮಾಹಿತಿ ಇಲ್ಲಿದೆ.

* ಸ್ಪೈನ್‌ ಟ್ವಿಸ್ಟ್ ಅಭ್ಯಾಸ ಮಾಡಿ. ಮೊದಲು ಅಂಗಾತ ಮಲಗಿ, ಎರಡೂ ಕೈಗಳನ್ನು ಭುಜದ ನೇರದಲ್ಲಿಟ್ಟು ಬಲ ಕಾಲನ್ನು ಎಡ ಭಾಗಕ್ಕೆ ಮಡಚಿ ಮೆಲ್ಲನೆ ಬಲಭಾಗಕ್ಕೆ ಕುತ್ತಿಗೆ ತಿರುಗಿಸಬೇಕು. ನಂತರ ಪುನಃ ಮೊದಲಿನ ಭಂಗಿಗೆ ಬಂದು ನಂತರ ಎಡಕಾಲನ್ನು ಬಲಭಾಗಕ್ಕೆ ಮಡಚಿ, ಕುತ್ತಿಗೆಯನ್ನು ಎಡಭಾಗಕ್ಕೆ ತಿರುಗಿಸಬೇಕು. ಈ ಭಂಗಿಯಲ್ಲಿ 20 ಸೆಕೆಂಡ್‌ ಇರಿ.

* ಬಾಲಾಸನ ಮಾಡುವುದು ಈ ಸಮಯದಲ್ಲಿ ಉತ್ತಮ. ಮ್ಯಾಟ್‌ ಮೇಲೆ ಹೊಟ್ಟೆ ಕೆಳಗಾಗುವಂತೆ ಮಲಗಿ ನಿಧಾನಕ್ಕೆ ಕಾಲುಗಳನ್ನು ಮಡಚಿ ಮಗುವಿನ ರೀತಿ ಮಲಗುವುದಕ್ಕೆ ಬಾಲಾಸನ ಎನ್ನಲಾಗುತ್ತದೆ.

* ನೇರವಾಗಿ ನಿಂತು ನಿಧಾನಕ್ಕೆ ಬಾಗಿ ಪಾದಗಳನ್ನು ಮುಟ್ಟುವುದಕ್ಕೆ ಪಾದಾಸನ ಎನ್ನಲಾಗುತ್ತದೆ. ಇದನ್ನು ಅಭ್ಯಾಸ ಮಾಡಬಹುದು.

* ಒಂದು ಕಾಲಿನಲ್ಲಿ ನಿಂತು ಎರಡು ಕೈಗಳನ್ನು ಮುಂದಕ್ಕೆ ಚಾಚಿದಾಗ ದೇಹವು ಅರ್ಧ ಚಂದ್ರಾಕೃತಿಯಲ್ಲಿ ಬಾಗಿದಂತೆ ಕಾಣಿಸುತ್ತದೆ. ಇದನ್ನು ಮಾಡಿದರೆ ನೋವು ನಿವಾರಣೆ ಆಗುತ್ತದೆ.

* ಇನ್ನೂ ಶಿರ್ಸಾಸನ, ವಿಪರೀತ ಕರಣಿ ಹೀಗೆ ಕಾಲುಗಳನ್ನು ಮೇಲಕ್ಕೆ ಎತ್ತಿ ಮಾಡುವ ವ್ಯಾಯಾಮ ಈ ಸಮಯದಲ್ಲಿ ಬೇಡ. ಅಲ್ಲದೆ ಉಸಿರಾಟದ ವ್ಯಾಯಾಮದಲ್ಲಿ ಭಸ್ತ್ರಿಕಾ, ಉಜ್ವೈನ್‌ ಪ್ರಾಣಾಯಾಮ ಅಭ್ಯಾಸ ಮಾಡಬಾರದು. ಪ್ರಾಣಾಯಾಮ, ಧ್ಯಾನ ಇವುಗಳನ್ನು ಅಭ್ಯಾಸ ಮಾಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read