ಮುಖದ ಸೌಂದರ್ಯ ಹೆಚ್ಚಿಸುತ್ತೆ ಕಲ್ಲಂಗಡಿ ಬೀಜಗಳ ಫೇಸ್‌ ಮಾಸ್ಕ್‌

ಕಲ್ಲಂಗಡಿ ಬೇಸಿಗೆಗೆ ಸೂಕ್ತವಾದ ರಸಭರಿತ ಹಣ್ಣು. ಇದರಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಇರುವುದರಿಂದ ಬೇಸಿಗೆಯಲ್ಲಿ ಸೇವಿಸಬೇಕು. ಕಲ್ಲಂಗಡಿ ತಿನ್ನುವುದರಿಂದ ಡಿಹೈಡ್ರೇಶನ್‌ನಿಂದ ಪಾರಾಗಬಹುದು.

ಕಲ್ಲಂಗಡಿ ಆರೋಗ್ಯಕ್ಕೆ ಮಾತ್ರವಲ್ಲ, ನಮ್ಮ ಸೌಂದರ್ಯಕ್ಕೂ ಅತ್ಯಂತ ಅವಶ್ಯಕ. ನಮ್ಮ ತ್ವಚೆಯನ್ನು ಇದು ಸುಧಾರಿಸಬಲ್ಲದು. ಕಲ್ಲಂಗಡಿ ಬೀಜಗಳು ಕೂಡ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ.

ಕಲ್ಲಂಗಡಿ ಬೀಜಗಳ ಫೇಸ್‌ ಮಾಸ್ಕ್‌ ಅತ್ಯಂತ ಪ್ರಯೋಜನಕಾರಿ. ಕಲ್ಲಂಗಡಿ ಬೀಜಗಳ ಮಾಸ್ಕ್‌ ಹಚ್ಚುವುದರಿಂದ ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ. ಬೇಸಿಗೆಯಲ್ಲಿ ಎಣ್ಣೆಯುಕ್ತ ತ್ವಚೆಯನ್ನು ಹೋಗಲಾಡಿಸುತ್ತದೆ. ಕಲ್ಲಂಗಡಿ ಬೀಜಗಳ ಫೇಸ್ ಮಾಸ್ಕ್ ಮುಖದ ವಯಸ್ಸಾದ ಲಕ್ಷಣಗಳನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಕಲ್ಲಂಗಡಿ ಬೀಜಗಳ ಫೇಸ್‌ ಮಾಸ್ಕ್‌ ತಯಾರಿಸಲು 1 ಚಮಚ ಕಲ್ಲಂಗಡಿ ಬೀಜಗಳು, 1 ಚಮಚ ಮುಲ್ತಾನಿ ಮಿಟ್ಟಿ, 1 ಚಮಚ ಮೊಸರು, 4-5 ಹನಿ ರೋಸ್‌ ವಾಟರ್‌, 2-3 ಹನಿ ಜೇನುತುಪ್ಪ ತೆಗೆದುಕೊಳ್ಳಿ.

ಮೊದಲು ಕಲ್ಲಂಗಡಿ ಬೀಜಗಳನ್ನು ಮಿಕ್ಸರ್ ಜಾರ್‌ನಲ್ಲಿ ನುಣ್ಣಗೆ ಪುಡಿ ಮಾಡಿ. ಅದನ್ನು ಒಂದು ಬೌಲ್‌ಗೆ ಹಾಕಿ. ನಂತರ ಉಳಿದೆಲ್ಲಾ ಪದಾರ್ಥಗಳನ್ನು ಇದಕ್ಕೆ ಸೇರಿಸಿ. ಎಲ್ಲಾ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ. ಕಲ್ಲಂಗಡಿ ಬೀಜಗಳ ಫೇಸ್ ಮಾಸ್ಕ್ ಅನ್ನು ಅನ್ವಯಿಸುವ ಮೊದಲು ಮುಖವನ್ನು ತೊಳೆಯಿರಿ. ನಂತರ ಅದನ್ನು ಮುಖಕ್ಕೆ ಚೆನ್ನಾಗಿ ಹಚ್ಚಿಕೊಳ್ಳಿ. ಸುಮಾರು 15 ನಿಮಿಷಗಳ ಕಾಲ ಅದನ್ನು ಒಣಗಲು ಬಿಡಿ. ನಂತರ ಮುಖವನ್ನು ಸಾಮಾನ್ಯ ನೀರಿನಿಂದ ತೊಳೆದು ಸ್ವಚ್ಛಗೊಳಿಸಿ. ನಿಯಮಿತವಾಗಿ ಈ ಮಾಸ್ಕ್‌ ಹಚ್ಚುತ್ತಾ ಬಂದರೆ ತ್ವಚೆಯ ಸಮಸ್ಯೆಗಳನ್ನು ನಿವಾರಿಸಿ ಹೊಳೆಯುವಂತೆ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read