ಮುಖದ ಸೌಂದರ್ಯ ದುಪ್ಪಟ್ಟುಗೊಳಿಸುತ್ತೆ ತಣ್ಣೀರು

ನಿದ್ರೆಯಿಂದ ಎದ್ದ ತಕ್ಷಣ ಮುಖದ ಚರ್ಮ ಸೌಂದರ್ಯ ಕಳೆದುಕೊಂಡಿರುತ್ತದೆ. ಮುಖದ ಮೇಲೆ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಒತ್ತಡ, ಸರಿಯಾಗಿ ನಿದ್ರೆ ಬರದಿರುವುದು, ಆಹಾರದ ಅಲರ್ಜಿ ಎಲ್ಲವೂ ಈ ಗುಳ್ಳೆಗೆ ಕಾರಣವಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಮುಖಕ್ಕೆ ತಣ್ಣೀರನ್ನು ಸಿಂಪಡಿಸಿದ್ರೆ ಚರ್ಮದ ಸಮಸ್ಯೆ ಕಡಿಮೆಯಾಗಿ ಮುಖದ ಚರ್ಮ ಮತ್ತೆ ಹೊಳಪು ಪಡೆಯುತ್ತದೆ.

ಮುಖಕ್ಕೆ ಐಸ್ ಕ್ಯೂಬ್ ಇಡುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಹಾಗೆ ಬೆಳಿಗ್ಗೆ ತಣ್ಣೀರಿನಿಂದ ಮುಖ ತೊಳೆಯುವುದ್ರಿಂದಲೂ ಪ್ರಯೋಜನವಿದೆ. ಚರ್ಮದ ಸುಕ್ಕನ್ನು ತಡೆದು ವಯಸ್ಸನ್ನು ಮರೆಮಾಚುತ್ತದೆ.

ತಣ್ಣೀರಿನಿಂದ ಮುಖವನ್ನು ತೊಳೆಯುವುದ್ರಿಂದ ಚರ್ಮ ತಾಜಾಗೊಳ್ಳುತ್ತದೆ. ಸ್ವಲ್ಪ ತಣ್ಣೀರು ನಿಮ್ಮ ಚರ್ಮದ ಬಣ್ಣ ಬದಲಿಸುತ್ತದೆ. ತಣ್ಣೀರಿನಿಂದ ರಕ್ತ ಪರಿಚಲನೆ ತೀವ್ರಗೊಳ್ಳುತ್ತದೆ. ಇದು ಮುಖವನ್ನು ಹೊಳೆಯುವಂತೆ ಮಾಡುತ್ತದೆ.

ತಣ್ಣೀರಿನಿಂದ ಮುಖ ತೊಳೆಯುವುದ್ರಿಂದ ತೆರೆದ ರಂಧ್ರ ಮುಚ್ಚುತ್ತದೆ. ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆದ ನಂತರ, ಆ ರಂಧ್ರಗಳನ್ನು ಮುಚ್ಚಲು ಅದರ ಮೇಲೆ ಸ್ವಲ್ಪ ತಣ್ಣೀರನ್ನು ಸಿಂಪಡಿಸಿ. ಕಣ್ಣುಗಳನ್ನು ತಣ್ಣೀರಿನಿಂದ ತೊಳೆದ್ರೆ ಹಿತವೆನಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read