ಮುಖದ ಮೇಲೆ ಬಿಳಿ ಕೂದಲ ಸಮಸ್ಯೆ ನಿವಾರಣೆಗೆ ಇಲ್ಲಿದೆ ಸುಲಭ ಉಪಾಯ….!

ಚಿಕ್ಕ ವಯಸ್ಸಿನಲ್ಲಿ ತಲೆಕೂದಲು ಬೆಳ್ಳಗಾಗಲಾರಂಭಿಸಿದರೆ ಅದು ಟೆನ್ಷನ್‌ಗೆ ಕಾರಣವಾಗುತ್ತದೆ. ಅದೇ ರೀತಿ ಮಹಿಳೆಯರ ಮುಖದಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಮುಖದ ಕೂದಲು ಮೆಲನಿನ್ ಕೊರತೆಯಿಂದ ಬಿಳಿಯಾಗಲು ಪ್ರಾರಂಭಿಸುತ್ತದೆ.

ಆದಾಗ್ಯೂ, ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಗಳು ಸಹ ಪ್ರಮುಖ ಕಾರಣವಾಗಿರಬಹುದು. ಇದರಿಂದ ಅನೇಕ ಮಹಿಳೆಯರು ಖಿನ್ನತೆಗೆ ಒಳಗಾಗುತ್ತಾರೆ. ಆದರೆ ಈ ರೀತಿ ಒತ್ತಡಕ್ಕೆ ಒಳಗಾಗುವ ಬದಲು ಕೆಲವೊಂದು ಸುಲಭ ಮಾರ್ಗಗಳನ್ನು ಅನುಸರಿಸಿ ಮುಖದ ಮೇಲಿನ ಬಿಳಿ ಕೂದಲನ್ನು ನಿವಾರಿಸಬಹುದು.

ಜೇನುತುಪ್ಪ : ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಒಂದು ಚಮಚ ಜೇನುತುಪ್ಪಕ್ಕೆ ಸಕ್ಕರೆಯನ್ನು ಬೆರೆಸಿ ಸ್ವಲ್ಪ ಬಿಸಿ ಮಾಡಬೇಕು. ನಂತರ ಅದಕ್ಕೆ ನಿಂಬೆ ರಸವನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ಅರ್ಧಗಂಟೆ ಬಿಟ್ಟು ತೊಳೆಯಿರಿ. ಈ ರೀತಿ ಮಾಡುವುದರಿಂದ ಮುಖದ ಮೇಲಿನ ಅನಗತ್ಯ ಬಿಳಿ ಕೂದಲನ್ನು ತೊಡೆದುಹಾಕಬಹುದು.

ಫೇಶಿಯಲ್‌ ರೇಜರ್‌: ಮಾರುಕಟ್ಟೆಯಲ್ಲಿ ಹಲವು ವಿಧದ ಫೇಶಿಯಲ್ ರೇಜರ್ ಲಭ್ಯವಿದೆ. ಇದನ್ನು ಬಳಸಿ ಕೂಡ ಮುಖದ ಮೇಲಿನ ಬಿಳಿ ಕೂದಲನ್ನು ನಿವಾರಿಸಬಹುದು. ಮೊದಲು ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಮುಖ ಒದ್ದೆಯಿದ್ದಾಗಲೇ ರೇಜರ್‌ ಬಳಸಬೇಕು. ಮುಖ ಒಣಗಿದರೆ ದದ್ದುಗಳು ಬರಬಹುದು ಅಥವಾ ಚರ್ಮವು ಸಿಪ್ಪೆ ಸುಲಿಯಬಹುದು.

ಅಪ್ಲಿಕೇಟರ್‌: ಈ ಟೂಲ್‌ ಸಹಾಯದಿಂದ ಕೂಡ ಮುಖದ ಮೇಲಿರುವ ಬಿಳಿ ಕೂದಲನ್ನು ತೆಗೆಯಬಹುದು. ಈ ಪ್ರಕ್ರಿಯೆಯಲ್ಲಿ ನಿಮಗೆ ನೋವಾಗುವುದಿಲ್ಲ.

ಲೇಸರ್‌ ಬಳಕೆ : ಲೇಸರ್ ಹೇರ್ ರಿಮೂವಲ್ ಟೆಕ್ನಿಕ್, ಮುಖದ ಬಿಳಿ ಕೂದಲು ತೆಗೆಯಲು ತುಂಬಾ ಪರಿಣಾಮಕಾರಿ. ಆದರೆ ಈ ಕೆಲಸವನ್ನು ಉತ್ತಮ ವೃತ್ತಿಪರ ಪಾರ್ಲರ್ ಅಥವಾ ತಜ್ಞರಿಂದ ಮಾತ್ರ ಮಾಡಿಸಿಕೊಳ್ಳಿ. ಇಲ್ಲದಿದ್ದರೆ ಲಾಭದ ಬದಲು ನಷ್ಟವಾಗಬಹುದು.

ಥ್ರೆಡಿಂಗ್: ಇದೊಂದು ಸಾಮಾನ್ಯ ಪ್ರಕ್ರಿಯೆ. ಬಹುತೇಕ ಎಲ್ಲಾ ಬ್ಯೂಟಿ ಪಾರ್ಲರ್‌ಗಳಲ್ಲೂ ಲಭ್ಯವಿದೆ. ಥ್ರೆಡ್ಡಿಂಗ್‌ ಮೂಲಕ ಮುಖದ ಮೇಲಿನ ಬಿಳಿ ಕೂದಲನ್ನು ತೆಗೆದು ಹಾಕಬಹುದು. ದಾರದಲ್ಲಿ ಕೂದಲು ತೆಗೆಯುವುದು ಸುಲಭವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read