ಮುಖದ ಮೇಲಿರುವ ಬೇಡದ ಕೂದಲನ್ನು ನಿವಾರಿಸುತ್ತೆ ಈ ಸುಲಭದ ಮನೆ ಮದ್ದು….!

ಪ್ರತಿಯೊಬ್ಬರೂ ಸ್ವಚ್ಛ ಮತ್ತು ಸುಂದರವಾದ ಚರ್ಮಕ್ಕಾಗಿ ಹಾತೊರೆಯುತ್ತಾರೆ. ಆದರೆ ಮುಖದ ಮೇಲೆ ವಿಪರೀತ ಕೂದಲು ಇದ್ದರೆ ಅದು ನಮ್ಮ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಅನಗತ್ಯ ಮುಖದ ಕೂದಲನ್ನು ತೊಡೆದುಹಾಕಲು ಮಹಿಳೆಯರು ಬ್ಲೀಚ್, ಥ್ರೆಡಿಂಗ್ ಅಥವಾ ವ್ಯಾಕ್ಸ್ ಅನ್ನು ಆಶ್ರಯಿಸುತ್ತಾರೆ. ನೋವಿನ ಜೊತೆಗೆ ಈ ವಿಧಾನಗಳಿಂದ ಮುಖಕ್ಕೆ ಹಾನಿಯಾಗಬಹುದು. ಮತ್ತೆ ಮತ್ತೆ ಈ ಚಿಕಿತ್ಸೆಗಳನ್ನು ಮಾಡುವುದರಿಂದ ಮುಖದ ಬಣ್ಣವೂ ಕಳೆಗುಂದುತ್ತದೆ.  ಮುಖದ ಕೂದಲನ್ನು ನಿವಾರಿಸಿಕೊಳ್ಳಲು ಮನೆಯಲ್ಲೇ ಸುಲಭದ ಮಾಸ್ಕ್‌ ಅನ್ನು ನೀವು ತಯಾರಿಸಿಕೊಳ್ಳಬಹುದು.

ಈ ಮನೆಮದ್ದು ಮುಖದ ಮೇಲಿನ ಅನಗತ್ಯ ಕೂದಲನ್ನು ತೆಗೆದು ಹಾಕುವುದು ಮಾತ್ರವಲ್ಲ, ಸುಂದರ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಸಹಾಯ ಮಾಡುತ್ತದೆ. ಫೇಸ್‌ ಮಾಸ್ಕ್‌ ತಯಾರಿಸಲು ಮೊಟ್ಟೆ, ಜೋಳದ ಹಿಟ್ಟು ಮತ್ತು ಸಕ್ಕರೆಯನ್ನು ತೆಗೆದುಕೊಳ್ಳಿ. ಮೊಟ್ಟೆಯನ್ನು ಒಡೆದು ಅದರ ಬಿಳಿ ಭಾಗವನ್ನು ಮಾತ್ರ ಒಂದು ಬೌಲ್‌ಗೆ ಹಾಕಿ. ಅದಕ್ಕೆ ಸ್ವಲ್ಪ ಜೋಳದ ಹಿಟ್ಟು ಮತ್ತು ಸಕ್ಕರೆಯನ್ನು ಹಾಕಿ. ಈ ಎಲ್ಲಾ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ, ಪೇಸ್ಟ್ ರೆಡಿ ಮಾಡಿಕೊಳ್ಳಿ.

ಮೊದಲು ಮುಖವನ್ನು ಸ್ವಚ್ಛವಾಗಿ ತೊಳೆದುಕೊಂಡು ನಂತರ ಸಿದ್ಧಪಡಿಸಿರುವ ಫೇಸ್ಕ್‌ ಮಾಸ್ಕ್‌ ಅನ್ನು ಹಚ್ಚಿಕೊಳ್ಳಿ. ಸುಮಾರು 20 ನಿಮಿಷಗಳ ಕಾಲ ಅದನ್ನು ಒಣಗಲು ಬಿಡಿ. ನಂತರ ಮುಖವನ್ನು ಸ್ವಚ್ಛವಾದ ನೀರಿನಿಂದ ತೊಳೆಯಿರಿ. ವಾರಕ್ಕೆ 2 ಬಾರಿ ಈ ರೀತಿ ಮಾಡುವುದರಿಂದ ಮುಖದ ಮೇಲಿನ ಕೂದಲು ನಿವಾರಣೆಯಾಗುತ್ತದೆ. ಮುಖದಲ್ಲಿ ಮೊಡವೆ, ತುರಿಕೆ ಅಥವಾ ಇನ್ನಿತರ ಸಮಸ್ಯೆ ಇರುವವರು ಇದನ್ನು ಪ್ರಯತ್ನಿಸದೇ ಇರುವುದು ಉತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read