ಹೊಳೆಯುವ ಮುಖ ಪಡೆಯಲು ಮನೆಯಲ್ಲಿಯೇ ಪೀಲ್ ಆಫ್ ಪ್ಯಾಕ್ ತಯಾರಿಸಿ ಬಳಸಿ

ಹೊಳೆಯುವ ಹಾಗೂ ತಾರುಣ್ಯವಾದ ಚರ್ಮವನ್ನು ಹೊಂದುವ ಆಸೆ ಹಲವರಿಗಿರುತ್ತದೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಪೀಲ್ ಆಫ್ ಫೇಸ್ ಪ್ಯಾಕ್ ಗಳನ್ನು ಬಳಸಿ ಮುಖದ ಅಂದ ಕೆಡಿಸಿಕೊಳ್ಳುತ್ತಾರೆ. ಹಾಗಾಗಿ ಮನೆಯಲ್ಲಿಯೇ ಸಿಗುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಮುಖಕ್ಕೆ ಪೀಲ್ ಆಫ್ ಮಾಡಿಕೊಂಡು ಮುಖದ ಕಾಂತಿ ಹೆಚ್ಚಿಸಿ.

*ಹಣ್ಣುಗಳಲ್ಲಿರುವ ಆಮ್ಲಗಳು ಚರ್ಮದ ಮೇಲ್ಮೈಯಿರುವ ಸತ್ತ ಜೀವಕೋಶಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ 6-7 ಹಣ್ಣಾದ ದ್ರಾಕ್ಷಿ ಗೆ 1 ಸ್ಟ್ರಾಬೆರಿ, 1 ಚಮಚ ಜೇನುತುಪ್ಪ, ಮೊಸರನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ 20 ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.

*ಕಿತ್ತಳೆ ಹಣ್ಣಿನ ಸಿಪ್ಪೆ ಚರ್ಮದ ಮೇಲಿನ ಕಲೆ, ಕಲ್ಮಶಗಳನ್ನು ತೆಗೆದು ಹಾಕಿ ಚರ್ಮವನ್ನು ಶುದ್ಧೀಕರಿಸುತ್ತದೆ. ಹಾಗಾಗಿ 2 ಚಮಚ ಕಿತ್ತಳೆ ಸಿಪ್ಪೆ ಪುಡಿಗೆ 1 ಚಮಚ ಹಾಲು ಮತ್ತು ½ ಚಮಚ ರೋಸ್ ವಾಟರ್ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read