ಮಾವಿನ ಸೀಸನ್ ಮುಗಿದ ನಂತರವೂ ಸವಿಯಿರಿ ‘ಮ್ಯಾಂಗೋ ಸ್ಕ್ಯಾಷ್’

It might be peak mango season, but you should not pick up the ...ಈಗ ಮಾವಿನ ಹಣ್ಣಿನ ಸುಗ್ಗಿ. ಎಲ್ಲೆಲ್ಲೂ ಮಾವಿನ ಹಣ್ಣು. ಹಣ್ಣಿನ ರಾಜ ಮಾವು ಎಲ್ಲಾ ಹಣ್ಣುಗಳನ್ನು ಹಿಂದಿಕ್ಕಿ ಮಾರುಕಟ್ಟೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.

ಆದರೆ ಈ ಹಣ್ಣು ವರ್ಷ ಪೂರ್ತಿ ಸಿಗುವುದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಸೀಸನ್ ಅಂತ್ಯವಾಗುತ್ತದೆ. ಮಳೆ ಬಿದ್ದ ಬಳಿಕ ಮಾವನ್ನು ಕೇಳುವವರಿಲ್ಲದಂತಾಗುತ್ತದೆ.

ಆದ್ದರಿಂದ ಮಾವಿನ ಹಣ್ಣಿನ ಸುಗ್ಗಿಯಲ್ಲಿ ತಯಾರಿಸಿಟ್ಟ ಸ್ಕ್ಯಾಷ್, ಸುಗ್ಗಿ ಮುಗಿದ ನಂತರವೂ ಬಳಸಬಹುದು. ಅದಕ್ಕೆ ಮಾಡಬೇಕಾದದ್ದು ಇಷ್ಟೇ.

ಒಳ್ಳೆಯ ಗುಣಮಟ್ಟದ ಮಾವಿನ ಹಣ್ಣನ್ನು ಸಿಪ್ಪೆ ತೆಗೆದು ಕತ್ತರಿಸಿ ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಮಾಡಿಕೊಂಡು ಅದನ್ನು ನೀರು ಹಾಕದೆ ಮಿಕ್ಸಿಯಲ್ಲಿ ಹಾಕಿ ರಸಾಯನ ಮಾಡಿಕೊಳ್ಳಬೇಕು. 1 ಕೆ.ಜಿ. ರಸಾಯನಕ್ಕೆ 1 ಕೆ.ಜಿ. ಸಕ್ಕರೆ ಬೇಕು. ಒಂದು ಪಾತ್ರೆಯಲ್ಲಿ 8 ಕಪ್ ನೀರಿಗೆ ಸಕ್ಕರೆ ಹಾಕಿ ಒಲೆಯ ಮೇಲಿಡಬೇಕು. ಸಕ್ಕರೆಯೆಲ್ಲಾ ಕರಗಿದ ಮೇಲೆ ಪಾತ್ರೆಯನ್ನು ಕೆಳಗಿಳಿಸಿ. ಅದಕ್ಕೆ ಸಿಟ್ರಿಕ್ ಆಸಿಡ್, ಅರಿಶಿನ ಕಲರ್ ರಸಾಯನ ಹಾಕಿ ಕಲೆಸಿ ಬಾಟಲಿಯಲ್ಲಿ ತುಂಬಿಡಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read