ಮಾರ್ಕರ್ ಪೆನ್ನು ಬಳಸುತ್ತಿರಾ ? ಹಾಗಾದ್ರೆ ಈ ವಿಚಾರ ನಿಮಗೆ ತಿಳಿದಿರಲಿ

ಸಾಮಾನ್ಯವಾಗಿ ಮಾರ್ಕರ್ ಪೆನ್ನುಗಳನ್ನು ಲೋಹ, ಪಿಂಗಾಣಿ, ರಟ್ಟುಗಳು, ಮರದ ಹಲಗೆಗಳ ಮೇಲೆ ಯಾವುದೇ ಗುರುತು ಅಥವಾ ಸಂವಹನ ಸೂಚಕ ಬರವಣಿಗೆಗೆ ಬಳಸಲಾಗುತ್ತದೆ. ಸೂಚನಾ ಫಲಕದ ಮೇಲೂ ಎಲ್ಲರ ಗಮನ ಸೆಳೆಯುವ ಹಾಗೆ ದಪ್ಪ ಅಕ್ಷರಗಳನ್ನು ಮೂಡಿಸಲು ಮಾರ್ಕರ್ ಗಳ ಅಗತ್ಯವಿದೆ.

ಇತ್ತೀಚೆಗೆ ಮಾರ್ಕರ್ ಪೆನ್ನುಗಳ ಬಳಕೆಯೂ ಸಾಕಷ್ಟು ಹೆಚ್ಚಾಗಿದೆ. ಈ ಪೆನ್ನುಗಳು ಹೆಚ್ಚು ಬಾಳಿಕೆ ಬರಬೇಕೆಂದರೆ ಕೆಲವು ಟಿಪ್ ಗಳನ್ನು ಅನುಸರಿಸುವುದು ಒಳಿತು. ಕೆಂಪು, ಕಪ್ಪು, ನೀಲಿ ಗಾಢ ಬಣ್ಣಗಳಲ್ಲಿ ದೊರೆಯುವ ಮಾರ್ಕರ್ ಪೆನ್ನುಗಳ ದೀರ್ಘ ಬಾಳಿಕೆ ಬೇಕೆಂದರೆ ಇವುಗಳ ಕ್ಯಾಪ್ ಗಳನ್ನು ಬರೆದ ನಂತರ ಮರೆಯದೆ ಮುಚ್ಚಿಡಿ. ಮುಚ್ಚಳ ಮುಚ್ಚದ ಮಾರ್ಕರ್ ಪೆನ್ನುಗಳು ಗಾಳಿಗೆ ತೆರೆದಿಟ್ಟಾಗ ಅವುಗಳ ಕ್ಷಮತೆ ಕಡಿಮೆಯಾಗಬಹುದು.

ಮಾರ್ಕರ್ ಪೆನ್ನುಗಳನ್ನು ಬರೆದು ಮುಗಿಸಿದ ನಂತರ ಅದರ ನಿಬ್ ಕೆಳಗೆ ಬರುವಂತೆ ನಿಲ್ಲಿಸಿಡಿ. ಇದರಿಂದ ಮಾರ್ಕರ್ ಪೆನ್ನಿನ ಇಂಕ್ ನಿಬ್ಬಿನ ಕಡೆಯೇ ಹೆಚ್ಚಾಗಿ ಉಳಿಯುವುದರಿಂದ ಇನ್ನೊಮ್ಮೆ ಬರೆಯಲು ಬಳಸುವಾಗ ಗಾಢ ಅಕ್ಷರಗಳನ್ನು ಮೂಡಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read