ಮಾರುತಿ ಸುಜುಕಿ ಜಿಮ್ನಿ ಪ್ರಿ-ಬುಕಿಂಗ್‌‌ ಗೆ ಸಖತ್‌ ರೆಸ್ಪಾನ್ಸ್‌; ಸದ್ಯದಲ್ಲೇ ರಸ್ತೆಗಿಳಿಯಲಿದೆ SUV

ಆಫ್‌ ರೋಡ್‌ ವೆಹಿಕಲ್‌ಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಸೆಕೆಂಡ್‌ ಜನರೇಶನ್‌  ಮಹೀಂದ್ರ ಥಾರ್‌ ಬೆನ್ನಲ್ಲೇ ಮಾರುತಿ ಸುಜುಕಿ ಕೂಡ ಹೊಸ ಕಾರನ್ನು ರಸ್ತೆಗಿಳಿಸಲು ಸಜ್ಜಾಗಿದೆ. ಸದ್ಯದಲ್ಲೇ ಹೊಸ ಮಾರುತಿ ಸುಜುಕಿ ಜಿಮ್ನಿ ಲಾಂಚ್‌ ಆಗಲಿದೆ. 5 ಡೋರ್‌ಗಳುಳ್ಳ ಈ SUVಯನ್ನು 2023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿದೆ. ಕಂಪನಿ ಎಸ್‌ಯುವಿಯನ್ನು ಅನಾವರಣ ಮಾಡಿದ ಬೆನ್ನಲ್ಲೇ ಜಿಮ್ನಿಗಾಗಿ ಬುಕ್ಕಿಂಗ್‌ ಕೂಡ ಪ್ರಾರಂಭಿಸಿದೆ. ಈಗಾಗ್ಲೇ 15,000 ಕ್ಕೂ ಹೆಚ್ಚು ಆರ್ಡರ್‌ಗಳನ್ನು ಪಡೆದುಕೊಂಡಿದೆ.

ದಿನವೊಂದಕ್ಕೆ ಸಾವಿರಕ್ಕೂ ಹೆಚ್ಚು ಆರ್ಡರ್‌ ಗಳು ಬರುತ್ತಿವೆ. ಸಣ್ಣ ಗ್ರಾಹಕರ ನೆಲೆಯನ್ನು ಗುರಿಯಾಗಿಸಿಕೊಂಡ ಕಾರಿಗೆ ಸಖತ್‌ ರೆಸ್ಪಾನ್ಸ್‌ ಸಿಗುತ್ತಿದೆ. ಜಿಮ್ನಿ ಕೇವಲ ಎರಡು ರೂಪಾಂತರಗಳಲ್ಲಿ ಮಾರಾಟವಾಗಲಿದೆ – ಝೀಟಾ ಮತ್ತು ಆಲ್ಫಾ. ಮೊದಲನೆಯದು ಉಕ್ಕಿನ ರಿಮ್‌ಗಳನ್ನು ಹೊಂದಿದ್ದರೆ, ಎರಡನೆಯದು ಮಿಶ್ರಲೋಹದ ಚಕ್ರಗಳನ್ನು ಹೊಂದಿರುತ್ತದೆ. ಝೀಟಾ ರೂಪಾಂತರವು ಚಿಕ್ಕದಾದ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್ ಅನ್ನು ಪಡೆಯುತ್ತದೆ, ಆದರೆ ಟಾಪ್-ಸ್ಪೆಕ್ ಟ್ರಿಮ್ 9 ಇಂಚಿನ ಡಿಸ್‌ಪ್ಲೇ ಹೊಂದಿರುತ್ತದೆ.

ಎರಡು ಟ್ರಿಮ್ ಆಯ್ಕೆಗಳ ನಡುವಿನ ಮತ್ತೊಂದು ಪ್ರಮುಖ ವ್ಯತ್ಯಾಸವೆಂದರೆ ಎಲ್ಇಡಿ ಹೆಡ್‌ ಲ್ಯಾಂಪ್‌ ಗಳು. ಹೆಡ್‌ಲ್ಯಾಂಪ್ ವಾಷರ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳ ಲಭ್ಯತೆ. ಈ ಎಲ್ಲಾ ವೈಶಿಷ್ಟ್ಯಗಳು ಆಲ್ಫಾ ಟ್ರಿಮ್‌ನಲ್ಲಿ ಮಾತ್ರ ಇರುತ್ತವೆ. Zeta ರೂಪಾಂತರದಲ್ಲಿ ಇವು ಲಭ್ಯವಿಲ್ಲ. ಇದು ಸಾಮಾನ್ಯ ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಜಿಮ್ನಿ 5 ಡೋರ್‌ಗಳ ವಿನ್ಯಾಸ ಹೊಂದಿದೆ. ಹಾಗಾಗಿ ಎರಡನೇ ಸಾಲಿನ ಸೀಟುಗಳಿಗೂ ಸುಲಭವಾಗಿ ಪ್ರವೇಶಿಸಬಹುದು.

ವಿದೇಶದಲ್ಲಿ ಮಾರಾಟವಾಗ್ತಿರೋ 3 ಬಾಗಿಲಿನ ಎಸ್‌ಯುವಿಗಿಂತ ಇದು ಹೆಚ್ಚಿನ ಬೂಟ್ ಸ್ಥಳವನ್ನು ಹೊಂದಿದೆ. ಕಾಯಿಲ್ ಸ್ಪ್ರಿಂಗ್‌ಗಳೊಂದಿಗೆ ಎರಡೂ ತುದಿಗಳಲ್ಲಿ ಘನ ಆಕ್ಸಲ್‌ಗಳು, ಕಡಿಮೆ-ಶ್ರೇಣಿಯ ವರ್ಗಾವಣೆ ಕೇಸ್‌ಗೆ ಜೋಡಿಸಲಾದ 1.5L ಪೆಟ್ರೋಲ್ ಎಂಜಿನ್, 5-ಸ್ಪೀಡ್ MT ಮತ್ತು 4-ಸ್ಪೀಡ್ AT, 3-ಡೋರ್ ಜಿಮ್ನಿಯಂತೆಯೇ ಇವೆ. ಮಾರುತಿ ಸುಜುಕಿ ಜಿಮ್ನಿ ಈ ವರ್ಷದ ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಭಾರತೀಯ ಮಾರುಕಟ್ಟೆಗೆ ಬರಬಹುದು. ಬೆಲೆ 10 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read