ಮಾರುತಿ ಕಾರುಗಳ ಮೇಲೆ ಸಿಗ್ತಿದೆ ಭರ್ಜರಿ ಡಿಸ್ಕೌಂಟ್‌; ಜುಲೈನಲ್ಲಿ ಕಾರು ಖರೀಸುವವರಿಗೆ ಬಂಪರ್‌….!

ಕಾರು ಖರೀದಿಸುವಾಗ ಪ್ರತಿಯೊಬ್ಬರೂ ಒಳ್ಳೆಯ ಆಫರ್‌ ಮತ್ತು ಡಿಸ್ಕೌಂಟ್‌ ಬೇಕೆಂದು ಆಸೆಪಡ್ತಾರೆ. ಹೊಸ ಕಾರು ಖರೀದಿಸುವ ಮುನ್ನ ಶೋರೂಮ್‌ಗಳಿಗೆ ವಿಸಿಟ್‌ ಮಾಡಿ ಇಂತಹ ಕೊಡುಗೆಗಳ ತಿಳಿದುಕೊಳ್ಳಬೇಕು.

ಈ ತಿಂಗಳು ಮಾರುತಿ ಸುಜುಕಿ ಕಂಪನಿಯ ಕಾರು ಕೊಂಡುಕೊಳ್ಳುವವರಿಗೆ ಬಂಪರ್‌ ಆಫರ್‌ ಸಿಗ್ತಿದೆ. ಜುಲೈನಲ್ಲಿ ಮಾರುತಿ ಸುಜುಕಿ ತನ್ನ ಕೆಲವು ಕಾರುಗಳ ಮೇಲೆ ಕ್ಯಾಶ್‌ಬ್ಯಾಕ್ ಜೊತೆಗೆ ಕಾರ್ಪೊರೇಟ್ ಬೋನಸ್ ಮತ್ತು ವಿನಿಮಯ ಕೊಡುಗೆಯನ್ನು ನೀಡುತ್ತಿದೆ.

ಕಂಪನಿಯ WagonR, Swift, Dzire, Brezza, Celerio, S-Presso, Alto ಮತ್ತು Eeco ನಲ್ಲಿ ಆಫರ್‌ಗಳು ಲಭ್ಯವಿವೆ. ಮಾರುತಿ ಸುಜುಕಿ ಆಲ್ಟೊ ಕೆ10 ಮೇಲೆ ಕಂಪನಿ 40,000 ರೂಪಾಯಿ ಕ್ಯಾಶ್‌ಬ್ಯಾಕ್, 15,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಮತ್ತು 4,100 ರೂಪಾಯಿ ಕಾರ್ಪೊರೇಟ್ ರಿಯಾಯಿತಿಯನ್ನು ಕಂಪನಿ ಘೋಷಿಸಿದೆ. ಡಿಜೈರ್ ಸೆಡಾನ್‌ನಲ್ಲಿ ಕೇವಲ 15,000 ರೂಪಾಯಿಗಳ ವಿನಿಮಯ ಬೋನಸ್ ಲಭ್ಯವಿದೆ.

ಈ ತಿಂಗಳು ಮಾರುತಿ ಸುಜುಕಿ ಸೆಲೆರಿಯೊ ಕಾರು ಕೊಳ್ಳುವವರಿಗೆ 35 ಸಾವಿರ ರೂಪಾಯಿ ಕ್ಯಾಶ್‌ಬ್ಯಾಕ್,  15 ಸಾವಿರ ರೂಪಾಯಿ ಎಕ್ಸ್‌ಚೇಂಜ್‌ ಬೋನಸ್ ಮತ್ತು 4100 ರೂಪಾಯಿ ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗುತ್ತಿದೆ. ಎಸ್-ಪ್ರೆಸ್ಸೊ ಮೇಲೆ 39 ಸಾವಿರ ಕ್ಯಾಶ್‌ಬ್ಯಾಕ್, 15 ಸಾವಿರ ವಿನಿಮಯ ಬೋನಸ್ ಮತ್ತು  4100 ಕಾರ್ಪೊರೇಟ್ ರಿಯಾಯಿತಿ ಸಿಗಲಿದೆ.

WagonR ಗೂ ಇಂತಹ ಆಫರ್‌ ಲಭ್ಯವಿದೆ. 30,000 ರೂಪಾಯಿ ಕ್ಯಾಶ್‌ಬ್ಯಾಕ್, 20,000 ರೂಪಾಯಿ ಎಕ್ಸ್‌ಚೇಂಜ್‌ ಆಫರ್‌ ಹಾಗೂ 4,100 ಕಾರ್ಪೊರೇಟ್ ರಿಯಾಯಿತಿಯನ್ನು ಮಾರುತಿ ಸುಜುಕಿ ನೀಡುತ್ತಿದೆ.

ಇದಲ್ಲದೆ ಸ್ವಿಫ್ಟ್‌ ಕಾರು ಖರೀದಿಸುವವರಿಗೆ 25,000 ರೂಪಾಯಿಗಳ ನಗದು ರಿಯಾಯಿತಿ ಇದೆ. ಜೊತೆಗೆ 20,000 ರೂಪಾಯಿಗಳ ವಿನಿಮಯ ಬೋನಸ್ ಮತ್ತು 4,100 ರೂಪಾಯಿಗಳ ಕಾರ್ಪೊರೇಟ್ ರಿಯಾಯಿತಿ ಇದೆ. Eeco ನಲ್ಲಿ 20,000 ರೂಪಾಯಿ ಕ್ಯಾಶ್‌ಬ್ಯಾಕ್, 10,000 ರೂಪಾಯಿ ಎಕ್ಸ್‌ಚೇಂಜ್‌ ಬೋನಸ್ ಮತ್ತು 3,100 ರೂಪಾಯಿ ಕಾರ್ಪೊರೇಟ್ ಡಿಸ್ಕೌಂಟ್‌ ಅನ್ನು ಕಂಪನಿ ನೀಡುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read