ಮಾಜಿ ಶಿಕ್ಷಕಿ ಈಗ 102 ಕೋಟಿ ರೂಪಾಯಿ ವಹಿವಾಟಿನ ಕಂಪನಿ ಒಡತಿ; ಇಲ್ಲಿದೆ ತ್ರಿಣಾ ದಾಸ್ ಯಶಸ್ಸಿನ ಕಥೆ

ಪಶ್ಚಿಮ ಬಂಗಾಳದ ತ್ರಿಣಾ ದಾಸ್ ತಮ್ಮ ಇಂಜಿನಿಯರಿಂಗ್ ವ್ಯಾಸಂಗ ಮುಗಿದ ಬಳಿಕ ತಮ್ಮ ತಂದೆಯ ಸಲಹೆಯಂತೆ ವಿದ್ಯಾರ್ಥಿಗಳಿಗೆ ಸಣ್ಣ ಮಟ್ಟದಲ್ಲಿ ಆರಂಭಿಸಿದ ಟ್ಯೂಷನ್ ತರಗತಿ ಇಂದು ಅವರನ್ನು 102 ಕೋಟಿ ರೂಪಾಯಿಗಳ ವಹಿವಾಟು ನಡೆಸುವ ಕಂಪನಿಯೊಂದರ ಒಡತಿಯಾಗುವ ಹಂತಕ್ಕೆ ಬಂದು ತಲುಪಿಸಿದೆ. ಅವರ ಯಶಸ್ಸಿನ ಕಥೆ ಇಲ್ಲಿದೆ.

ತ್ರಿಣಾ ದಾಸ್ ಆರಂಭಿಕ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವಾರಾಂತ್ಯದಲ್ಲಿ ಗಣಿತ ಮತ್ತು ವಿಜ್ಞಾನದ ಟ್ಯೂಷನ್ ನೀಡಲು ಆರಂಭಿಸಿದ್ದರು ಇದಕ್ಕಾಗಿ ಅವರು 400 ರೂಪಾಯಿ ಶುಲ್ಕ ನಿಗದಿಪಡಿಸಿದ್ದು, ಮೊದಲಿಗೆ ಕೇವಲ 16 ವಿದ್ಯಾರ್ಥಿಗಳಿಂದ ಶುರುವಾದ ಈ ಯಾನ ವರ್ಷ ಕಳೆಯುವಷ್ಟರಲ್ಲಿ 1800 ವಿದ್ಯಾರ್ಥಿಗಳ ಸೇರ್ಪಡೆಯಾಗುವ ಮಟ್ಟಿಗೆ ಬೆಳೆದಿತ್ತು. ತಮ್ಮ ಈ ತರಗತಿಗೆ B – Genius ಎಂದು ಹೆಸರಿಟ್ಟಿದ್ದು, ಸರ್ಕಾರಿ ಶಾಲೆಗಳಲ್ಲಿ ಟ್ಯೂಷನ್ ತರಗತಿಗಳನ್ನು ನಡೆಸುತ್ತಿದ್ದರು.

ತ್ರಿಣಾ ದಾಸ್ ತಮ್ಮೊಂದಿಗೆ ಇನ್ನೂ ಹಲವು ಶಿಕ್ಷಕ – ಶಿಕ್ಷಕಯರನ್ನು ನೇಮಿಸಿಕೊಂಡಿದ್ದು, ಟ್ಯೂಷನ್ ತರಗತಿಗಳಿಂದಲೇ ವರ್ಷಕ್ಕೆ 8 ರಿಂದ 10 ಲಕ್ಷ ರೂಪಾಯಿ ಗಳಿಸುತ್ತಿದ್ದರು. ನಂತರ ಇದನ್ನು 86 ಕೇಂದ್ರಗಳನ್ನಾಗಿ ವಿಸ್ತರಿಸಿದ್ದು, 2014-15 ರಲ್ಲಿ ವಹಿವಾಟು 5 ಕೋಟಿ ರೂಪಾಯಿಗಳಾಗಿತ್ತು. ಬಳಿಕ ಇದನ್ನು ಮಾರಾಟ ಮಾಡಿದ ಅವರು ಮತ್ತೊಂದು ಸಾಹಸಕ್ಕೆ ಮುಂದಾದರು.

2017ರಲ್ಲಿ ಇಬ್ಬರು ಪಾಲುದಾರರೊಂದಿಗೆ ಸೇರಿ ಟ್ಯಾಲೆಂಟ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಆರಂಭಿಸಿದ್ದು, ಕಂಪನಿಗಳಿಗೆ ಉದ್ಯೋಗಿಗಳನ್ನು ಒದಗಿಸಲು ಒತ್ತು ನೀಡಿದರು. ಕೊರೋನಾ ಸಂದರ್ಭದಲ್ಲಿ ಈ ಉದ್ಯಮ ಭಾರಿ ಯಶಸ್ಸು ಕಂಡಿದ್ದು 20 ಕೋಟಿ ರೂಪಾಯಿಗಳ ವಹಿವಾಟು ನಡೆಸಿದ್ದರು. ದೆಹಲಿ ಎನ್ಸಿಆರ್, ಗುರುಗ್ರಾಮದಲ್ಲಿ ಇವರ ಕಂಪನಿ ಕಾರ್ಯಾರಂಭ ಮಾಡುತ್ತಿತ್ತು.

ತಾವು ಕಾಲಿಟ್ಟಲೆಲ್ಲ ಯಶಸ್ಸು ಕಾಣುತ್ತಿದ್ದ ತ್ರಿಣಾ ದಾಸ್ ಇದೀಗ ಮತ್ತೊಂದು ಕಂಪನಿ Gigchain ಆರಂಭಿಸಿದ್ದು ಇದರ ವಹಿವಾಟು ಈಗ 102 ಕೋಟಿ ರೂಪಾಯಿಗಳು ತಲುಪಿದೆ. ಈಗ ಅಮೆಜಾನ್, ಐಸಿಐಸಿಐ, ಹ್ಯಾವೆಲ್ಸ್, ಪೇಟಿಎಂ ಮೊದಲಾದ ಘಟಾನುಘಟಿ ಕಂಪನಿಗಳು ಸಹ ತ್ರಿಣಾ ದಾಸ್ ಅವರ ಕಂಪನಿಯ ಸೇವೆಯನ್ನು ಬಳಸಿಕೊಳ್ಳುತ್ತಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read