ಮಹಿಳೆ ಖಾಸಗಿ ಅಂಗಾಂಗ ಚಿತ್ರೀಕರಿಸಿ ಬ್ಲಾಕ್ ಮೇಲ್; ಆರೋಪಿ ವಿರುದ್ಧ ದೂರು..!

ಬೆಂಗಳೂರು: ಮಹಿಳೆಯೊಂದಿಗೆ ಸಲುಗೆ ಬೆಳೆಸಿದ ವ್ಯಕ್ತಿಯೊಬ್ಬ ಆಕೆಯ ಖಾಸಗಿ ಅಂಗಾಂಗ ಚಿತ್ರೀಕರಣ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈತನ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೌದು, ಮಂಡ್ಯದ ಡಿಂಕಾ ಗ್ರಾಮದ ಮಂಜು ಎಂಬಾತ ಈ ಕೃತ್ಯ ಎಸಗಿದ್ದಾನೆ. ಸುಂಕದಕಟ್ಟೆಯ ಮಹಿಳೆಯೊಬ್ಬರ ಪರಿಚಯ ಮಾಡಿಕೊಂಡ ಈತ ಸಲುಗೆ ಬೆಳೆಸಿಕೊಂಡಿದ್ದಾನೆ. ಆಕೆ ಕೆಲಸ ಮಾಡುವ ಜಾಗವನ್ನು ತಿಳಿದುಕೊಂಡಿದ್ದಾನೆ. ಸಲುಗೆ ಬೆಳೆದ ನಂತರ ಆಕೆ ಈತನನ್ನು ನಂಬಿದ್ದಾಳೆ. ಒಂದು ದಿನ ಇನ್ನೊಬ್ಬ ಮಹಿಳೆಯ ಜೊತೆ ಸಂತ್ರಸ್ತೆ ಕೆಲಸ ಮಾಡುವ ಜಾಗಕ್ಕೆ ಹೋಗಿ ಬರ್ತಡೇ ಇದೆ ಬನ್ನಿ ಎಂದು ಆಹ್ವಾನ ಮಾಡಿದ್ದಾರೆ. ಈತ ಪರಿಚಯಸ್ಥ ಹಾಗೂ ಮಹಿಳೆ ಜೊತೆಗೆ ಇದ್ದಿದ್ದರಿಂದ ನಂಬಿದ ಆಕೆ ಬರ್ತಡೇಗೆ ಹೋಗಿದ್ದಾಳೆ.

ಈ ವೇಳೆ ಜ್ಯೂಸ್ ನಲ್ಲಿ ಮತ್ತು ಬರೋ ಔಷಧ ಬೆರೆಸಿ ಕೊಟ್ಟಿದ್ದಾನೆ ಆರೋಪಿ. ಇದೇ ವೇಳೆ ಆಕೆಯ ಖಾಸಗಿ ಅಂಗಾಂಗ ಚಿತ್ರೀಕರಣ ಮಾಡಿದ್ದಾನೆ. ನಂತರ ಆಕೆಗೆ ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ್ದಾನೆ. ನನ್ನ ಜೊತೆ ಸ್ಟೈಲ್ ಆಗಿ ಮಾತನಾಡದೇ ಇದ್ದರೆ, ಫೋಸ್ ಕೊಡದೇ ಇದ್ದರೆ ನಿನ್ನ ಗಂಡನಿಗೆ ವಿಡಿಯೋ ಸೆಂಡ್ ಮಾಡ್ತೀನಿ ಅಂತ ಹೆದರಿಸಿದ್ದಾನೆ. ಇನ್ನು ಪೊಲೀಸರಿಗೆ ಈ ವಿಚಾರ ಹೇಳಿದ್ರೆ ಚಾಕುವಿನಿಂದ ಚುಚ್ಚುತ್ತೇನೆ ಅಂತೆ ಬೆದರಿಕೆ ಹಾಕಿದ್ದಾನೆ. ಇದರಿಂದ ಬೇಸತ್ತ ಮಹಿಳೆ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read