ಹಾಸನ: ಮಹಿಳೆಯೊಬ್ಬರು ಜನರಿಗೆ ಬರೋಬ್ಬರಿ ಮೂರು ಕೋಟಿ ರೂಪಾಯಿ ಹಣವನ್ನು ವಂಚಿಸಿದ್ದು, ಆರೋಪಿಯನ್ನು ಹಿಡಿದ ಮೋಸಹೋದ ಜನರು ನಡುರಸ್ತೆಯಲ್ಲಿಯೇ ಆಕೆಯ ಜಡೆಯನ್ನು ಹಿಡಿದು ಎಳೆದಾಡಿ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ನಡೆದಿದೆ.
ಹಾಸನದಲ್ಲಿ ಈ ಘಟನೆ ನಡೆದಿದೆ. ಹಾಸನದಲ್ಲಿ ಟೈಲರ್ ಶಾಪ್ ಇಟ್ಟುಕೊಂಡಿದ್ದ ಹೇಮಾವತಿ ಎಂಬ ಮಹಿಳೆ ಬಣ್ಣ ಬಣ್ಣದ ಮಾತುಗಳನ್ನಾಡಿ ಜನರನ್ನು ನಂಬಿಸಿ ಲಕ್ಷ ಲಕ್ಷ ಹಣ ಪಡೆದಿದ್ದಾರೆ. ಈಕೆಯ ಮಾತಿಗೆ ಮರುಳಾದ ಜನರು ಒಬ್ಬೊಬ್ಬುರು 45 ಸಾವಿರ, 50 ಸಾವಿರ ಹೀಗೆ ಹಣ ಕೊಟ್ಟಿದ್ದಾರೆ. ಚೀಟಿ ವ್ಯವಹಾರ ಎಂದೆಲ್ಲ ಹೇಳಿ ನಂಬಿಸಿ ಹಣ ಪಡೆದ ಮಹಿಳೆ ಬರೋಬ್ಬರಿ 3 ಕೋಟಿ ರೂಪಾಯಿ ವಂಚಿಸಿದ್ದಾಳೆ.
ವಂಚಕಿ ಮಹಿಳೆ ಹೇಮಾವತಿಗೆ ಆಕೆಯ ಪತಿ ವಿರೂಪಾಕ್ಷ ಕೂಡ ಸಾಥ್ ನೀಡಿದ್ದಾನೆ. ಇಂದು ಬೆಳಿಗ್ಗೆ ಟೈಲರ್ ಶಾಪ್ ಬಳಿ ಜಮಾವಣೆಗೊಂಡ ಹಣ ಕಳೆದುಕೊಂಡಿದ್ದ ಮಹಿಳೆಯರು, ಜನರು, ಹೇಮಾತಿಯನ್ನು ಹಿಡುದು ರಸ್ತೆಗೆ ಎಳೆದು ತಂದಿದ್ದಾರೆ. ತಮ್ಮ ಹಣ ವಾಪಾಸ್ ಕೊಡುವಂತೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
