ಮಳೆಗಾಲದಲ್ಲಿ ಮಾಡಿ ಸವಿಯಿರಿ ಆಲೂಗಡ್ಡೆ ಮಿಕ್ಸ್ಚರ್

ಮಾಡುವ ವಿಧಾನ :

ಸಿಪ್ಪೆ ತೆಗೆದ ಆಲೂಗಡ್ಡೆಯನ್ನ ಉದ್ದಕೆ ( ಫ್ರೆಂಚ್​ ಫ್ರೈಸ್​) ತುರಿದುಕೊಳ್ಳಿ. ತುರಿದ ಆಲೂಗಡ್ಡೆಯನ್ನ ಕೂಡಲೇ ನೀರಿನಲ್ಲಿ ಹಾಕಿಕೊಳ್ಳಿ. ನೀರಿನ ಬಣ್ಣ ಬೆಳ್ಳಗೆ ಆಗೋದು ನಿಲ್ಲುವವರೆಗೂ ತೊಳೆದುಕೊಳ್ಳಿ. ಬಳಿಕ ಇದನ್ನ ಬಟ್ಟೆಯ ಮೇಲೆ ಹರಡಿಕೊಳ್ಳಿ. ತೇವಾಂಶ ಕಡಿಮೆಯಾಗುವವರೆಗೂ ಆರಲು ಬಿಟ್ಟು ಮೇಲಿನಿಂದ ಇನ್ನೊಂದು ಬಟ್ಟೆಯನ್ನ ಮುಚ್ಚಿ. 5 ನಿಮಿಷ ಬಳಿಕ ತೇವಾಂಶ ಆರಿ ಹೋಗಲಿದೆ.

ಕಾದ ಎಣ್ಣೆಗೆ ತುರಿದ ಆಲೂಗಡ್ಡೆಯನ್ನ ಹೊಂಬಣ್ಣ ಬರುವವರೆಗೂ ಕರಿಯಿರಿ. ಇದೀಗ ಇನ್ನೊಂದು ಪಾತ್ರೆಯಲ್ಲಿ ಒಂದು ಕಪ್​​ ಎಣ್ಣೆಯನ್ನ ಹಾಕಿ ಅದರಲ್ಲಿ ಶೇಂಗಾ, ಗೋಡಂಬಿ, ಕಡಲೆ , ಬಾದಾಮಿ ಹಾಕಿ ಕರಿದುಕೊಳ್ಳಿ. ಇದನ್ನ ಆಲೂಗಡ್ಡೆ ಚಿಪ್ಸ್​​ಗೆ ಸೇರಿಸಿ. ಅದೇ ಎಣ್ಣೆಗೆ ಇದೀಗ ಹಸಿ ಮೆಣಸು, ಬೆಳ್ಳುಳ್ಳಿ, ಕರಿಬೇವಿನಸೊಪ್ಪು ಹಾಕಿ ಕರಿದು ಇದನ್ನೂ ಆಲೂ ಚಿಪ್ಸ್​​ಗೆ ಹಾಕಿ. ಅರಿಶಿಣ, ಖಾರದಪುಡಿ , ಚಿಟಿಕೆ ಇಂಗು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನ ಹಾಕಿ ಎಲ್ಲವನ್ನ ಚೆನ್ನಾಗಿ ಕಲಿಸಿ. ಇದೀಗ ನಿಮ್ಮ ಮಿಕ್ಸ್ಚರ್​ ಸವಿಯಲು ಸಿದ್ಧ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read