ಮಳೆಗಾಲದಲ್ಲಿ ಕಾಡುವ ಒಣಕೆಮ್ಮಿಗೆ ಇಲ್ಲಿದೆ ಮನೆಮದ್ದು

ಕೆಮ್ಮು ಸಾಮಾನ್ಯ ಸಮಸ್ಯೆಯಾಗಿದ್ದರೂ ಮಳೆಗಾಲದಲ್ಲಿ ತೀವ್ರ ತೊಂದರೆ ಉಂಟುಮಾಡುತ್ತದೆ. ಮಳೆಗಾಲದಲ್ಲಿ ವೈರಲ್ ಜ್ವರದ ಜೊತೆಗೆ ಒಣ ಕೆಮ್ಮು ಕಾಡಲಾರಂಭಿಸುತ್ತದೆ. ಕೆಲವೊಮ್ಮೆ ಕೆಮ್ಮು ಗಂಭೀರ ಸ್ವರೂಪವನ್ನು ತೆಗೆದುಕೊಳ್ಳುತ್ತದೆ. ಇದನ್ನು ನಿವಾರಿಸಲು ಸಾಮಾನ್ಯವಾಗಿ ಎಲ್ಲರೂ ಸಿರಪ್‌ ಅಥವಾ ಮಾತ್ರೆಗಳ ಮೊರೆಹೋಗುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಔಷಧಗಳನ್ನು ಸೇವಿಸುವ ಬದಲು ಕೆಮ್ಮಿನ ನಿವಾರಣೆಗೆ ಕೆಲವು ಪರಿಣಾಮಕಾರಿ ಮನೆಮದ್ದುಗಳನ್ನು ಪ್ರಯತ್ನಿಸಿ.

ಕೆಮ್ಮಿಗೆ ತುಳಸಿ ಎಲೆಗಳಿಂದ ಪರಿಹಾರ ಕಂಡುಕೊಳ್ಳಬಹುದು. ನಾಲ್ಕಾರು ತುಳಸಿ ಎಲೆಗಳನ್ನು ತೆಗೆದುಕೊಂಡು ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಈ ಎಲೆಗಳನ್ನು ಒಂದು ಕಪ್ ನೀರಿನಲ್ಲಿ ಕುದಿಸಿ. ನೀರು ಅರ್ಧದಷ್ಟಾದ ಬಳಿಕ ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ. ತುಳಸಿ ಚಹಾ ಕೆಮ್ಮನ್ನು ನಿವಾರಿಸುತ್ತದೆ.

ಕೆಮ್ಮು ಹಲವು ದಿನಗಳಿಂದ ವಾಸಿಯಾಗದಿದ್ದರೆ, ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಮಚ ಅರಿಶಿನವನ್ನು ಬೆರೆಸಿ ಕುದಿಸಿ. ರಾತ್ರಿ ಮಲಗುವ ಮುನ್ನ ಕುಡಿಯಿರಿ. ಈ ಮನೆಮದ್ದಿನಿಂದ  ಶೀಘ್ರ ಪರಿಹಾರ ಸಿಗುತ್ತದೆ. ಇದು ಜ್ವರದ ರೋಗಲಕ್ಷಣಗಳನ್ನು ಸಹ ನಿವಾರಿಸಬಲ್ಲದು.

ಕೆಮ್ಮು ದೀರ್ಘಕಾಲದವರೆಗೆ ಗುಣವಾಗದಿದ್ದರೆ, ಒಂದು ಚಮಚ ಲೈಕೋರೈಸ್ ರೂಟ್ ಅನ್ನು ಪುಡಿಮಾಡಿ. ನಂತರ ಅದನ್ನು ಒಂದು ಕಪ್ ನೀರಿನಲ್ಲಿ ಕುದಿಸಿ. ನೀರು ಅರ್ಧದಷ್ಟಾದಾಗ  ಅದನ್ನು ತಣ್ಣಗಾಗಲು ಬಿಡಿ ಮತ್ತು ನಂತರ ಅದನ್ನು ಫಿಲ್ಟರ್ ಮಾಡಿಕೊಂಡು ದಿನಕ್ಕೆ ಎರಡು ಬಾರಿ ಕುಡಿಯಿರಿ.

ಕೆಮ್ಮಿನಿಂದ ಪರಿಹಾರವನ್ನು ಪಡೆಯಲು, ತಾಜಾ ಶುಂಠಿಯನ್ನೂ ಬಳಸಬಹುದು. ಶುಂಠಿಯನ್ನು ಜಜ್ಜಿ ರಸ ತೆಗೆಯಿರಿ. ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿಕೊಂಡು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕುಡಿಯಿರಿ. 2 ರಿಂದ 3 ದಿನಗಳಲ್ಲಿ ಕೆಮ್ಮಿನಿಂದ ಪರಿಹಾರ ಸಿಗುತ್ತದೆ.

ಒಂದು ಲೋಟ ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪನ್ನು ಮಿಶ್ರಣ ಮಾಡಿ. ದಿನಕ್ಕೆ ಎರಡು ಬಾರಿ ಉಪ್ಪು ನೀರಿನಿಂದ ಗಾರ್ಗಲ್‌ ಇದರಿಂದ ಗಂಟಲು ನೋವು ಮತ್ತು ಕೆಮ್ಮು ಗುಣವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read