ಮಲ್ಲೇಶ್ವರದ ಸಿಟಿಆರ್ ನಲ್ಲಿ ಮಸಾಲೆ ದೋಸೆ ಸವಿದ ಜೆ.ಪಿ. ನಡ್ಡಾ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶುಕ್ರವಾರ ಬೆಳಿಗ್ಗೆ ಮಲ್ಲೇಶ್ವರದ ಹೆಸರಾಂತ ಸಿಟಿಆರ್ ಹೋಟೆಲಿನಲ್ಲಿ ಜನಸಾಮಾನ್ಯರ ಜತೆ ಬೆರೆತು, ತಮ್ಮ ಪಕ್ಷದ ಸಂಗಾತಿಗಳೊಂದಿಗೆ ಮಸಾಲೆ ದೋಸೆ ಸವಿದರು.

ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಮತ್ತು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ, ಸಂಸದ ತೇಜಸ್ವಿ ಸೂರ್ಯ, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ಮಂಡಲ ಮುಖ್ಯಸ್ಥೆ ಕಾವೇರಿ ಕೇದಾರನಾಥ್ ಮುಂತಾದವರು ನಡ್ಡಾ ಅವರಿಗೆ ‘ಕಂಪನಿ’ ಕೊಟ್ಟರು.

ಇದಕ್ಕೂ ಮೊದಲು ಹೋಟೆಲಿಗೆ ಆಗಮಿಸಿದ ನಡ್ಡಾ ಅವರನ್ನು ಸಿಟಿಆರ್ ಸಿಬ್ಬಂದಿ ಹೂಗುಚ್ಛ ನೀಡಿ ಬರಮಾಡಿಕೊಂಡರು. ಆಗ ಕಾರ್ಯಕರ್ತರು ಮತ್ತು ಅಭಿಮಾನಿಗಳು ನಡ್ಡಾ ಮತ್ತು ಅಶ್ವತ್ಥ ನಾರಾಯಣ ಅವರಿಗೆ ಜೈಕಾರ ಕೂಗಿ, ಸಂಭ್ರಮದ ವಾತಾವರಣ ಸೃಷ್ಟಿಸಿದರು.

ಹೋಟೆಲಿನಲ್ಲಿ ಇದ್ದ ಗ್ರಾಹಕರ ಬಳಿಗೆ ಹೋಗಿ, ಅವರನ್ನೆಲ್ಲ ಮಾತನಾಡಿಸಿದ ನಡ್ಡಾ, ಅವರ ಮಾತುಗಳನ್ನು ಆಲಿಸಿದರು. ಲೋಕಾಭಿರಾಮವಾಗಿ ಕೆಲಹೊತ್ತು ಕಳೆದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read