ಮನೆ ಮಂದಿಯೆಲ್ಲಾ ಒಟ್ಟಿಗೆ ಊಟ ಮಾಡುವುದರಿಂದ ಒತ್ತಡ ಮಾಯ….!

ಇಂದು ಕೂಡು ಕುಟುಂಬ ವ್ಯವಸ್ಥೆ ಬದಲಾದ ಬಳಿಕ ಎಲ್ಲರೂ ಜೊತೆಯಾಗಿ ಕುಳಿತು ಊಟ ಮಾಡುವುದು ಹಬ್ಬ ಹರಿದಿನಗಳಿಗೆ ಮಾತ್ರ ಮೀಸಲಾಗಿದೆ. ದುಡಿಯಲು ಹೋಗುವ ವರ್ಗ ಗಬಗಬನೆ ತಿಂದು ಕೆಲಸಕ್ಕೆ ಹೊರಟರೆ, ಮಕ್ಕಳು ಅವರಿಗಿಷ್ಟ ಬಂದ ಸಮಯಕ್ಕೆ ತಟ್ಟೆಯನ್ನು ಕೈಯಲ್ಲೇ ಹಿಡಿದು ಇನ್ನೊಂದು ಕೈಯಲ್ಲಿ ರಿಮೋಟ್ ಇಲ್ಲವೇ ಮೊಬೈಲ್ ಹಿಡಿದು ಊಟ ಮುಗಿಸುತ್ತಾರೆ.

ಹೀಗಿರುವಾಗ ಎಲ್ಲರೂ ಜೊತೆಯಾಗಿ ಕುಳಿತು ತಿನ್ನುವ ವ್ಯವಧಾನ ಯಾರಿಗಿರುತ್ತದೆ. ಆದರೆ ಒಂದುಗೂಡಿ ಊಟ ತಿಂಡಿ ಜೊತೆಯಾಗಿ ತಿನ್ನುವುದರಿಂದ ಕುಟುಂಬ ಸದಸ್ಯರ ನಡುವಿನ ಬಾಂಧವ್ಯ ಹೆಚ್ಚುತ್ತದೆ ಮತ್ತು ಅವರ ನಡುವಿನ ಸಂವಹನ ಅಭಿವೃದ್ಧಿಗೊಳ್ಳುತ್ತದೆ ಎನ್ನುತ್ತಾರೆ ತಜ್ಞರು.

ಊಟಕ್ಕೆ ಕೂತಾಗ ಮಕ್ಕಳೊಂದಿಗಾಗಲಿ, ಮನೆಯ ಇತರರೊಂದಿಗಾಗಲಿ ಒಳ್ಳೆಯ ಮಾತುಗಳನ್ನೇ ಆಡಿ, ಮಕ್ಕಳು ವಿಪರೀತ ದಪ್ಪ ಆಗುತ್ತಾರೆ ಎಂಬ ಕಾರಣಕ್ಕೆ ಅವರ ಊಟಕ್ಕೆ ಮಿತಿ ಹೇರದಿರಿ.

ಊಟ ಮಾಡುವಷ್ಟು ಹೊತ್ತು ಟಿವಿ ಮೊಬೈಲ್ ನಿಂದ ದೂರವಿರಿ. ಊಟದ ನಡುವಿನಲ್ಲಿ ಹರಟೆ, ಹಾಸ್ಯ ನಗುವಿಗೆ ಜಾಗವಿರಲಿ. ಇದರಿಂದ ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆ ಎಂಬುದನ್ನು ಮರೆಯದಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read