ಮನೆ ಅಥವಾ ಕಚೇರಿಯಲ್ಲಿನ ಕಿಟಕಿಯನ್ನು ಈ ದಿಕ್ಕಿನಲ್ಲಿ ನಿರ್ಮಿಸಬೇಡಿ

ಸನಾತನ ಧರ್ಮಗಳಲ್ಲಿ ವಾಸ್ತು ಶಾಸ್ತ್ರಕ್ಕೆ ತುಂಬಾನೇ ಮಹತ್ವವಿದೆ. ಮನೆಯಲ್ಲಿರುವ ಪ್ರತಿಯೊಂದು ವಸ್ತುವಿಗೂ ವಾಸ್ತುಶಾಸ್ತ್ರದ ಪ್ರಕಾರ ನಿರ್ದಿಷ್ಟವಾದ ದಿಕ್ಕುಗಳು ಇರುತ್ತದೆ, ಮನೆಯ ನಿರ್ಮಾಣ ಮಾಡುವ ವೇಳೆಯಲ್ಲಿ ಹೇಗೆ ನೀವು ವಾಸ್ತುವನ್ನು ನೋಡುತ್ತಿರೋ ಅದೇ ರೀತಿ ಮನೆಯ ಪ್ರತಿಯೊಂದು ವಸ್ತುಗಳ ವಿಚಾರದಲ್ಲಿಯೂ ನೀವು ವಾಸ್ತುವಿನ ಬಗ್ಗೆ ಎಚ್ಚರ ವಹಿಸಲೇಬೇಕು.

ಇಲ್ಲವಾದಲ್ಲಿ ಇದು ನಿಮ್ಮ ಕುಟುಂಬ ಸದಸ್ಯರ ಆರೋಗ್ಯ, ಯಶಸ್ಸಿನ ಮೇಲೆ ಪರಿಣಾಮ ಬೀರಬಲ್ಲದು. ವಾಸ್ತುಶಾಸ್ತ್ರದ ಪ್ರಕಾರ ಕಿಟಕಿಗಳಿಗೆ ನಿರ್ದಿಷ್ಟವಾದ ದಿಕ್ಕುಗಳು ಇರುತ್ತದೆ. ಈ ದಿಕ್ಕುಗಳಲ್ಲಿ ನೀವು ಕಿಟಕಿಗಳನ್ನು ನಿರ್ಮಿಸಿದಲ್ಲಿ ಮಾತ್ರ ನಿಮಗೆ ಅದೃಷ್ಟದ ಬಾಗಿಲು ತೆರೆಯುತ್ತದೆ. ಆದರೆ ತಪ್ಪಾದ ದಿಕ್ಕಿನಲ್ಲಿ ನಿರ್ಮಿಸುವ ಕಿಟಕಿಗಳು ನಿಮ್ಮ ಜೀವನಕ್ಕೆ ದುರಾದೃಷ್ಟ ತರಬಹುದು.

ಹಾಗಾದರೆ ವಾಸ್ತು ಪ್ರಕಾರ ಯಾವ ದಿಕ್ಕು ಕಿಟಕಿ ನಿರ್ಮಾಣಕ್ಕೆ ಒಳ್ಳೆಯದು..?

ವಾಸ್ತುಶಾಸ್ತ್ರದ ಪ್ರಕಾರ ಪಶ್ಚಿಮ, ಪೂರ್ವ ಹಾಗೂ ಉತ್ತರದ ದಿಕ್ಕುಗಳಲ್ಲಿ ಕಿಟಕಿ ನಿರ್ಮಾಣ ಮಾಡುವುದು ಕಚೇರಿ ಹಾಗೂ ಮನೆಗಳಿಗೆ ಹೆಚ್ಚು ಶುಭಕರ ಎಂದು ಪರಿಗಣಿಸಲಾಗುತ್ತದೆ. ಉತ್ತರ ದಿಕ್ಕಿನಲ್ಲಿ ಕಿಟಕಿಯಿದ್ದರೆ ಮನೆಯಲ್ಲಿ ಸಂತೋಷ ಹಾಗೂ ಸಮೃದ್ಧಿ ಇರುತ್ತದೆ. ಅಲ್ಲದೇ ಸಂಪತ್ತು ಕೂಡ ಹೆಚ್ಚುತ್ತದೆ . ಉತ್ತರ ದಿಕ್ಕನ್ನು ಹಣದ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ದಿಕ್ಕಿನಲ್ಲಿ ಕಿಟಕಿಗಳು ನಿರ್ಮಾಣ ಮಾಡುವುದು ಹೆಚ್ಚು ಶುಭಕರ.

ಇನ್ನು ಕಿಟಕಿಗಳು ತೆರೆದಿಡುವುದು ಹೆಚ್ಚು ಒಳ್ಳೆಯದು ಎಂದು ಹೇಳುತ್ತೆ ವಾಸ್ತುಶಾಸ್ತ್ರ. ಮನೆ ಅಥವಾ ಕಚೇರಿಗಳನ್ನು ನಿರ್ಮಿಸುವ ವೇಳೆಯಲ್ಲಿ ಉತ್ತರ ದಿಕ್ಕಿನಲ್ಲಿ ಕಿಟಕಿ ಇಡುವುದನ್ನು ಮರೆಯಬೇಡಿ. ವಾಸ್ತುಶಾಸ್ತ್ರದ ಪ್ರಕಾರ ಪಶ್ಚಿಮ ದಿಕ್ಕು ಯಮನ ದಿಕ್ಕಾಗಿದೆ. ಈ ದಿಕ್ಕಿನಲ್ಲಿ ಕಿಟಕಿ ನಿರ್ಮಿಸಿದರೆ ರೋಗ, ದುಃಖ ಹಾಗೂ ಸಂಕಟಗಳೇ ಹೆಚ್ಚಾಗುತ್ತೆ. ದಕ್ಷಿಣ ದಿಕ್ಕಿನಲ್ಲಿ ಕಿಟಕಿ ನಿರ್ಮಿಸಿದರೆ ಅನಗತ್ಯವಾಗಿ ಕಿಟಕಿ ಬಾಗಿಲನ್ನು ತೆರೆಯಬೇಡಿ. ಕಿಟಕಿಗಳಿಗೆ ದಪ್ಪವಾದ ಪರದೆಗಳನ್ನು ಹಾಕಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read