ಮನೆಯಿಂದ ಕೆಲಸ ಮಾಡುವಾಗ ಈ ವಾಸ್ತು ಟಿಪ್ಸ್ ಬಳಸಿ

ಕೊರೊನಾ ನಂತ್ರ ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ಅವಕಾಶ ನೀಡಿವೆ. ಮನೆಯಿಂದ ಕೆಲಸ ಮಾಡುವ ಸಮಯದಲ್ಲಿ, ಹೆಚ್ಚಿನ ಜನರು ಬೆಡ್ ರೂಮ್, ಬಾಲ್ಕನಿ ಅಥವಾ ಡೈನಿಂಗ್ ಟೇಬಲನ್ನು ಕೆಲಸದ ಸ್ಥಳ ಮಾಡಿಕೊಂಡಿದ್ದಾರೆ. ಅವರ ಕೆಲಸದ ಸ್ಥಳ ವಾಸ್ತು ದೋಷಕ್ಕೆ ಕಾರಣವಾಗಬಹುದು. ಇದರಿಂದ ಕೆಲಸದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಾಗಿ ಮನೆಯಲ್ಲಿ ಕೆಲಸ ಮಾಡುತ್ತಿದ್ದರೂ ವಾಸ್ತುವಿಗೆ ಗಮನ ಹರಿಸಿ.

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪಶ್ಚಿಮ ಅಥವಾ ನೈಋತ್ಯ ಮೂಲೆಯಲ್ಲಿ ಕೆಲಸ ಮಾಡುವುದು ಒಳ್ಳೆಯದು. ಇಲ್ಲಿ ಕುಳಿತು ಕೆಲಸ ಮಾಡುವ ಮೂಲಕ ನೀವು ಆರ್ಥಿಕ ಅಭಿವೃದ್ಧಿ ಕಾಣಬಹುದು.

ನೈರುತ್ಯ ದಿಕ್ಕಿನಲ್ಲಿ ನಿಮ್ಮ ಕೆಲಸದ ಟೇಬಲ್ ಇರುವಂತೆ ನೋಡಿಕೊಳ್ಳಿ. ಕುರ್ಚಿ ಹಾಗೂ ಟೇಬಲ್ ಬಗ್ಗೆಯೂ ಗಮನ ನೀಡಿ. ನಿಮ್ಮ ಕೆಲಸಕ್ಕೆ ಅಡ್ಡಿಯಾಗುವ ಟೇಬಲ್ ಬಳಕೆ ಮಾಡಬೇಡಿ. ಇದ್ರಿಂದ ಸರಿಯಾಗಿ ಕೆಲಸ ಮಾಡಲಾಗುವುದಿಲ್ಲ. ಕಿರಿಕಿರಿ ಅನುಭವಿಸಬೇಕಾಗುತ್ತದೆ.

ಕೆಲಸಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಪಶ್ಚಿಮ ಅಥವಾ ನೈಋತ್ಯ ದಿಕ್ಕಿನಲ್ಲಿ ಇರಿಸಿ. ವಾರ್ಡ್‌ರೋಬ್‌ಗಳು ಅಥವಾ ಡ್ರಾಯರ್‌ಗಳನ್ನು ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ತೆರೆಯುವಂತೆ ನೋಡಿಕೊಳ್ಳಿ. ಯಾವುದೇ ಕೋಣೆಯ ಬಾಗಿಲು, ಕಿಟಕಿ ಅಥವಾ ಬಾಲ್ಕನಿಯಲ್ಲಿ ಕುಳಿತುಕೊಳ್ಳಬೇಡಿ. ಲ್ಯಾಪ್ ಟಾಪ್ ಅಥವಾ ಟ್ಯಾಬ್ ಬಳಸುತ್ತಿದ್ದರೆ ಅದನ್ನು ಆಗ್ನೇಯ ದಿಕ್ಕಿನಲ್ಲಿಟ್ಟು ಕೆಲಸ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read