ಮನೆಯಲ್ಲಿ ಸುಖ – ಸಂತೋಷ ನೆಲೆಸಲು ಮಾಡಿ ಈ ಕೆಲಸ

ಲಕ್ಷ್ಮಿ ಕೃಪೆಗೆ ಪಾತ್ರರಾದವರ ಮನೆಯಲ್ಲಿ ಸಂಪತ್ತಿನ ಜೊತೆಗೆ ಸುಖ, ಸಂತೋಷಕ್ಕೆ ಎಂದೂ ಕೊರತೆಯುಂಟಾಗುವುದಿಲ್ಲ. ಹಾಗಾಗಿಯೇ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳಲು ಭಕ್ತರು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಪುರಾಣ, ಗ್ರಂಥಗಳಲ್ಲಿ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳಲು ಸಾಕಷ್ಟು ಉಪಾಯಗಳನ್ನು ಹೇಳಲಾಗಿದೆ. ಜೊತೆಗೆ ಯಾವ ಕೆಲಸ ಮಾಡಿದ್ರೆ ಲಕ್ಷ್ಮಿ ಮುನಿಸಿಕೊಳ್ತಾಳೆಂಬುದನ್ನು ವಿಸ್ತಾರವಾಗಿ ತಿಳಿಸಲಾಗಿದೆ.

ಕೆಲವೊಂದು ಕೆಲಸ ಮಾಡುವ ವ್ಯಕ್ತಿ ಎಷ್ಟು ಕಷ್ಟಪಟ್ಟರೂ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಯಾವ ಯಾವ ಕೆಲಸ ಮಾಡಿದ್ರೆ ಮಹಾಲಕ್ಷ್ಮಿ ಮುನಿಸಿಕೊಳ್ತಾಳೆ ಎಂಬುದನ್ನು ಗರುಡ ಪುರಾಣದಲ್ಲಿ ಹೇಳಲಾಗಿದೆ.

ಆರೋಗ್ಯ ವೃದ್ಧಿ ಹಾಗೂ ಸೌಂದರ್ಯ ಹೆಚ್ಚಿಸಿಕೊಳ್ಳಲು ಪ್ರತಿದಿನ ಸ್ನಾನ ಮಾಡುವ ಅಗತ್ಯವಿದೆ. ಹಾಗೆ ಪ್ರತಿದಿನ ಬಾಯಿಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಸೌಂದರ್ಯವೃದ್ಧಿ ಜೊತೆಗೆ ಲಕ್ಷ್ಮಿಯನ್ನು ಒಲಿಸಿಕೊಳ್ಳಬಹುದು. ಸೂರ್ಯೋದಯಕ್ಕಿಂತ ಮೊದಲು ನಕ್ಷತ್ರಗಳ ಎದುರು ಸ್ನಾನ ಮಾಡುವುದರಿಂದ ಆಲಸ್ಯ ಹೋಗುತ್ತದೆ. ಕಷ್ಟ ಹಾಗೂ ದುಷ್ಟಶಕ್ತಿಗಳು ಕೂಡ ಓಡಿ ಹೋಗುತ್ತವೆ. ಸ್ನಾನ ಮಾಡುವಾಗ ದೇವರ ಸ್ಮರಣೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ.

ಉತ್ತಮ ಆರೋಗ್ಯಕ್ಕೆ ನಿದ್ರೆ ಬಹಳ ಮುಖ್ಯ. ಆಧುನಿಕ ಜೀವನ ಶೈಲಿಯಲ್ಲಿ ಕೆಲಸಕ್ಕೆ ಹೆಚ್ಚು ಮಹತ್ವ ಕೊಡುವ ಜನ ನಿದ್ರೆ ಮರೆಯುತ್ತಿದ್ದಾರೆ. ಆದ್ರೆ ಪ್ರತಿದಿನ 7-9 ತಾಸು ವ್ಯಕ್ತಿಯೊಬ್ಬ ನಿದ್ರೆ ಮಾಡಬೇಕು. ಕಡಿಮೆ ನಿದ್ರೆ ಮಾಡುವ ವ್ಯಕ್ತಿಗೆ ಆರೋಗ್ಯ ಸಮಸ್ಯೆ ಕಾಡುತ್ತದೆ. ಶಾಸ್ತ್ರಗಳ ಪ್ರಕಾರ ಬೇಗ ಮಲಗಿ ಬೇಗ ಏಳಬೇಕು. ಅನಾರೋಗ್ಯಕ್ಕೊಳಗಾದ ವ್ಯಕ್ತಿಗಳು ಮಾತ್ರ ಹಗಲಿನಲ್ಲಿ ನಿದ್ರೆ ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಸತ್ಯ ಹೇಳುವುದು ಬಹಳ ಮುಖ್ಯ. ಸತ್ಯವೆಂದೂ ಕಹಿಯಾಗಿರುತ್ತದೆ. ಆದ್ರೆ ಅದರಿಂದ ಸಿಗುವ ಫಲ ಸಿಹಿ. ಮಾತಿನ ಬಗ್ಗೆ ಗಮನವಿರಬೇಕು. ಸದಾ ಸತ್ಯವನ್ನು ನುಡಿಯಬೇಕು.

ಸೂರ್ಯೋದಯಕ್ಕಿಂತ ಮೊದಲು ಏಳುವುದು ಬಹಳ ಒಳ್ಳೆಯದು. ಆರೋಗ್ಯ ಹಾಗೂ ಸಮೃದ್ಧಿಯ ವೃದ್ಧಿಯಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read