ಮನೆಯಲ್ಲಿ ನಾಯಿ ಸಾಕಿದ್ದರೆ ಅಪ್ಪಿತಪ್ಪಿಯೂ ಈ 4 ಗಿಡಗಳನ್ನು ನೆಡಬೇಡಿ…!

ಮನೆಯ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ನೈಸರ್ಗಿಕ ಕಂಪನ್ನು ಸೃಷ್ಟಿಸಲು ಎಲ್ಲರೂ ಇಂಡೋರ್‌ ಪ್ಲಾಂಟ್‌ಗಳನ್ನು ನೆಡುತ್ತಾರೆ. ಮನೆಯ ಬಾಲ್ಕನಿಯಲ್ಲಿ, ಟೆರೆಸ್‌ ಮೇಲೆ ಕೂಡ ತರಹೇವಾರಿ ಗಿಡಗಳನ್ನು ಹಾಕುವುದು ಈಗಿನ ಟ್ರೆಂಡ್‌ ಕೂಡ. ಇದು ಒಳಾಂಗಣ ಗಾಳಿಯನ್ನು ಶುದ್ಧೀಕರಿಸುತ್ತದೆ. ಹಸಿರು ಸಸ್ಯಗಳ ಸುತ್ತಲೂ ಇರುವುದರಿಂದ ನಮ್ಮಲ್ಲಿ ಒತ್ತಡ ಕಡಿಮೆಯಾಗುತ್ತದೆ.

ಆದರೆ ಮನೆಯಲ್ಲಿ ನಾಯಿಗಳಿದ್ದರೆ ಕೆಲವು ಸಸ್ಯಗಳನ್ನು ಆಯ್ಕೆಮಾಡುವಾಗ ತುಂಬಾ ಜಾಗರೂಕರಾಗಿರಬೇಕು. ಏಕೆಂದರೆ ತುಂಬಾ ಸುಂದರವಾಗಿ ಕಾಣುವ ಕೆಲವು ಸಸ್ಯಗಳು ನಾಯಿಗಳ ಪಾಲಿಗೆ ವಿಷವಾಗಬಹುದು. ಸಾಕು ಪ್ರಾಣಿಗಳು ಈ ಗಿಡಗಳಿಂದಾಗಿ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಗಳಿವೆ.

ಲೋಳೆಸರ

ಅಲೋವೆರಾ ಒಂದು ಔಷಧೀಯ ಸಸ್ಯ. ಇದು ಮಾನವನ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅನೇಕ ಪೋಷಕಾಂಶಗಳ ಹೊರತಾಗಿಯೂ ಅಲೋವೆರಾ ನಾಯಿಗಳಿಗೆ ವಿಷಕಾರಿಯಾದ ಸಪೋನಿನ್ ಮತ್ತು ಆಂಥ್ರಾಕ್ವಿನೋನ್ ಎಂಬ ಎರಡು ಘಟಕಗಳನ್ನು ಒಳಗೊಂಡಿದೆ. ನಾಯಿ ಅಲೋವೆರಾವನ್ನು ಅಗಿದು ತಿಂದರೆ ಅನಾರೋಗ್ಯಕ್ಕೆ ತುತ್ತಾಗುವ ಅಪಾಯವಿರುತ್ತದೆ.

ತುಲಿಪ್‌

ವರ್ಣರಂಜಿತ ತುಲಿಪ್ ಹೂವುಗಳು ನಮ್ಮ ಉದ್ಯಾನವನದ ಅಂದವನ್ನು ಹೆಚ್ಚಿಸುತ್ತವೆ. ಆದರೆ ಇದನ್ನು ಕೋಣೆಯ ಮೂಲೆಯಲ್ಲಿ ಇಡುವುದು ಸೂಕ್ತ. ಮನೆಯಲ್ಲಿ ಸಾಕು ನಾಯಿ ಇದ್ದರೆ ಅದು ಗಿಡದಿಂದ ದೂರ ಇರುವಂತೆ ನೋಡಿಕೊಳ್ಳಿ. ಏಕೆಂದರೆ ಇದು ಸಪೋನಿನ್ ಅನ್ನು ಹೊಂದಿರುತ್ತದೆ, ಇದರಿಂದಾಗಿ ನಾಯಿಗಳು ಈ ಎಲೆಗಳನ್ನು ತಿಂದ ನಂತರ ವಾಂತಿ ಮಾಡಲು ಪ್ರಾರಂಭಿಸುತ್ತವೆ ಮತ್ತು ಅವುಗಳಿಗೆ ತಲೆಸುತ್ತು ಬರುತ್ತದೆ.

ದಾಸವಾಳ

ಸುಂದರವಾದ ದಾಸವಾಳದ ಹೂವುಗಳನ್ನು ಪೂಜೆಗೆ ಬಳಸಲಾಗುತ್ತದೆ. ದಾಸವಾಳದ ಸೇವನೆ ಕೂಡ ಆರೋಗ್ಯಕ್ಕೆ ಒಳ್ಳೆಯದು. ಆದರೆ ಇದು ನಾಯಿಗಳಿಗೆ ವಿಷಕಾರಿ. ದಾಸವಾಳದಲ್ಲಿ ಟುಲಿಪಾಲಿನ್ ಎ ಮತ್ತು ಬಿ ಇರುತ್ತದೆ, ಈ ಅಂಶಗಳು ನಾಯಿಗಳಿಗೆ ವಿಷಕಾರಿಯಾಗಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read