ಮನೆಯಂಗಳದಲ್ಲಿ ಬದನೆಕಾಯಿ ಗಿಡ ಸುಲಭವಾಗಿ ಬೆಳೆಸಿ

ಬದನೆಕಾಯಿ ಆರೋಗ್ಯಕ್ಕೆ ಉತ್ತಮ ನಿಜ. ಆದರೆ ಮಾರುಕಟ್ಟೆಯಲ್ಲಿ ಸಿಗುವಂತಹ ಬದನೆಕಾಯಿ ರಾಸಾಯನಿಕದಿಂದ ತುಂಬಿರುವುದರಿಂದ ಅದರಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು. ಹಾಗಾಗಿ ಬದನೆಕಾಯಿಯನ್ನು ನೀವು ಮನೆಯಲ್ಲಿಯೇ ಈ ವಿಧಾನ ಬಳಸಿ ಬೆಳೆಸಿರಿ.

ಬದನೆಕಾಯಿಯನ್ನು ಮಣ್ಣಿನ ಕುಂಡಗಳಲ್ಲಿ ಬೆಳೆಸಬಹುದು. ಮತ್ತು ಸರಿಯಾದ ಬೀಜಗಳನ್ನು ಆರಿಸಬೇಕು. ಮೊದಲಿಗೆ ಮಣ್ಣಯನ್ನು ತೆಗೆದುಕೊಂಡು ಪಾಟ್ ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದರಿಂದ ಮಣ್ಣುು ಮೃದುವಾಗುತ್ತದೆ. ಬಳಿಕ ಆ ಮಣ್ಣನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಇಡಿ.

 ನಂತರ ಮಣ್ಣಿನ ಜೊತೆ ಸಾವಯವ ಗೊಬ್ಬರವನ್ನು ಮಿಕ್ಸ್ ಮಾಡಿ ಬೀಜವನ್ನು ಸುಮಾರು 4 ಇಂಚು ಆಳದಲ್ಲಿ ಹಾಕಬೇಕು. ಇದು ಬೇರನ್ನು ಗಟ್ಟಿಗೊಳಿಸುತ್ತದೆ. ಬಳಿಕ ನೀರನ್ನು ಹಾಕಿ. ಹೀಗೆ ಪ್ರತಿದಿನ ನೀರನ್ನು ಹಾಕಿ ಮತ್ತು ಸೂರ್ಯನ ಕಿರಣ ಕಡಿಮೆ ಬೀಳುವ ಪ್ರದೇಶದಲ್ಲಿ ಇಡಿ. ಕಾಲಕಾಲಕ್ಕೆ ಕೀಟಗಳಿಂದ ರಕ್ಷಿಸಲು ಔಷಧಿ ಸಿಂಪಡಿಸಿ ಮತ್ತು ಕಳೆ ಗಿಡಗಳನ್ನು ತೆಗೆದುಹಾಕಿ. ಹೀಗೆ ಮಾಡಿದರೆ ಸುಮಾರು 3-4 ತಿಂಗಳಿನಲ್ಲಿ ಬದನೆಕಾಯಿ ಬೆಳೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read