ಮನಸ್ಸಿನ ಮೇಲೆ ಪ್ರಭಾವ ಬೀರುತ್ತೆ ನೀವು ಧರಿಸುವ ಮುತ್ತು

ಮುತ್ತು ಪ್ರಾಥಮಿಕವಾಗಿ ರತ್ನವಲ್ಲ. ಆದ್ರೆ ಜೈವಿಕ ರಚನೆಯಾಗಿದೆ. ಇದನ್ನು ನವರತ್ನಗಳ ಪಟ್ಟಿಗೆ ಸೇರಿಸಲಾಗುತ್ತದೆ. ಇದು ಮುಖ್ಯವಾಗಿ ಚಂದ್ರನಿಗೆ ಸಂಬಂಧ ಹೊಂದಿದೆ. ಕೆಲವೊಮ್ಮೆ ಔಷಧಿ ರೂಪದಲ್ಲಿಯೂ ಇದನ್ನು ಬಳಕೆ ಮಾಡಲಾಗುತ್ತದೆ. ಚಂದ್ರನಂತೆ ಇದು ಕೂಡ ಶಾಂತ, ಸುಂದರ ಹಾಗೂ ಮೃದುವಾಗಿರುತ್ತದೆ. ಇದು ಮನಸ್ಸು ಹಾಗೂ ದೇಹದ ಮೇಲೆ ಪ್ರಭಾವ ಬೀರುತ್ತದೆ. ಮುತ್ತಿನ ಪರಿಣಾಮ ಯಾವಾಗ್ಲೂ ಬಲವಾಗಿರುವುದಿಲ್ಲ.

ಮುತ್ತನ್ನು ಧರಿಸುವುದ್ರಿಂದ ಸಾಕಷ್ಟು ಲಾಭವಿದೆ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ. ಹೆದರಿಕೆಯನ್ನು ದೂರ ಮಾಡಿ, ಸುಖ ನಿದ್ರೆಗೆ ದಾರಿ ಮಾಡಿಕೊಡುತ್ತದೆ. ಹಾರ್ಮೋನ್ ಸಮತೋಲನದಲ್ಲಿರಲು ನೆರವಾಗುತ್ತದೆ. ಕೆಲವೊಮ್ಮೆ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ.

ಮುತ್ತನ್ನು ಧರಿಸುವ ಮೊದಲು ಕೆಲವೊಂದು ಮುನ್ನೆಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ. ಅದು ನಿಧಾನವಾಗಿ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ನಿಧಾನವಾಗಿ ಖಿನ್ನತೆ ಹಾಗೂ ಒತ್ತಡವನ್ನು ಹೆಚ್ಚಿಸುವ ಸಾಧ್ಯತೆಯಿರುತ್ತದೆ. ಆತಂಕ, ಚಡಪಡಿಕೆ, ಕಿರಿಕಿರಿಯನ್ನು ಹೆಚ್ಚಿಸಬಹುದು. ಯಾವುದೇ ಕಾರಣವಿಲ್ಲದೆ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ.

ಎಲ್ಲರೂ ಮುತ್ತಿನ ಧಾರಣೆ ಮಾಡುವುದು ಸೂಕ್ತವಲ್ಲ. ಮೇಷ, ಕರ್ಕ, ವೃಶ್ಚಿಕ ಮತ್ತು ಮೀನ ರಾಶಿಯವರು ಮುತ್ತನ್ನು ಧರಿಸುವುದು ಉತ್ತಮ. ವೃಷಭ, ಮಿಥುನ, ಕನ್ಯಾ, ಮಕರ ಮತ್ತು ಕುಂಭ ರಾಶಿಯವರು ಮುತ್ತನ್ನು ಧರಿಸಬಾರದು. ಕೋಪವುಳ್ಳ ವ್ಯಕ್ತಿಗಳು ಮುತ್ತಿನ ಧಾರಣೆ ಮಾಡಬಾರದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read