ಮನಸ್ಸನ್ನು ಖುಷಿಯಾಗಿಟ್ಟುಕೊಳ್ಳುವುದು ಹೇಗೆ..…?

ಕೆಲವೊಮ್ಮೆ ಸುಖಾಸುಮ್ಮನೇ ಮನಸ್ಸಿಗೆ ಕಿರಿಕಿರಿ ಆಗುತ್ತಿರುತ್ತದೆ. ಏನು ಮಾಡುವುದಕ್ಕೂ ಆಸಕ್ತಿನೇ ಇರಲ್ಲ. ಚಿಕ್ಕ ಪುಟ್ಟ ವಿಷಯಕ್ಕೂ ಸಿಟ್ಟು ಬರುವುದು, ಯಾವುದೇ ಕೆಲಸದ ಮೇಲೂ ಏಕಾಗ್ರತೆ ಇಲ್ಲದೇ ಇರುವುದು ಆಗುತ್ತದೆ. ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆಯೇ ಪರಿಣಾಮ ಬೀರುತ್ತದೆ.

ಮೊದಲಿಗೆ ಕಿರಿಕಿರಿಗೆ ಕಾರಣವೇನು ಎಂಬುದನ್ನು ಹುಡುಕಿಕೊಳ್ಳಿ. ಇದರಿಂದ ಅರ್ಧ ಸಮಸ್ಯೆ ಕ್ಲೀಯರ್ ಆಗುತ್ತದೆ. ಮನಸ್ಸನ್ನು ತುಂಬಾ ಸೂಕ್ಷ್ಮವಾಗಿ ಇಟ್ಟುಕೊಳ್ಳುವುದಕ್ಕೆ ಹೋಗಬೇಡಿ. ಇದರಿಂದ ಚಿಕ್ಕ ಪುಟ್ಟ ವಿಷಯನೂ ಹರ್ಟ್ ಮಾಡುತ್ತದೆ.

ನಿಮಗೆ ಇಷ್ಟವಿಲ್ಲದೇ ಇರುವ ಕೆಲಸ, ಇಷ್ಟವಿಲ್ಲದೇ ಇರುವ ವ್ಯಕ್ತಿಗಳಿಂದ ಆದಷ್ಟು ದೂರ ಇರುವುದಕ್ಕೆ ಪ್ರಯತ್ನಿಸಿ. ನಿಮಗೆ ಯಾವುದು ಹೆಚ್ಚು ಖುಷಿ ಕೊಡುತ್ತದೇಯೋ ಅದನ್ನೇ ಮಾಡಿ. ಹಾಗೇ ಯಾರ ಜತೆ ಇದ್ದರೆ ನಿಮಗೆ ತುಂಬಾ ಕಂಫರ್ಟ್ ಫೀಲ್ ಆಗುತ್ತದೆಯೋ ಅವರ ಸಾನಿಧ್ಯದಲ್ಲಿ ಹೆಚ್ಚು ಸಮಯ ಕಳೆಯುವುದಕ್ಕೆ ಪ್ರಯತ್ನಿಸಿ.

ಇನ್ನು ಎಲ್ಲಾ ಸಮಸ್ಯೆಗಳನ್ನು ತಂದು ಗುಡ್ಡೆ ಹಾಕಿಕೊಳ್ಳುವುದನ್ನು ಬಿಟ್ಟು ಬಿಡಿ. ಎಲ್ಲವೂ ಅದೇ ಕ್ಷಣದಲ್ಲಿ ಆಗಬೇಕು ಎಂಬ ಮನಸ್ಥಿತಿಯಿಂದಲೂ ಹೊರಗೆ ಬನ್ನಿ. ಆಗ ಮನಸ್ಸು ಶಾಂತವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read