ಮಧುಮೇಹದ ಅಪಾಯ ಗೊತ್ತಿದ್ದರೂ ಸಕ್ಕರೆ ತಿನ್ನಬೇಕೆಂಬ ಕಡುಬಯಕೆ ಯಾಕೆ ಗೊತ್ತಾ……? ಇಲ್ಲಿದೆ ನೀವು ತಿಳಿಯಲೇಬೇಕಾದ ಸಂಗತಿ!

ಸಿಹಿ ತಿನಿಸುಗಳನ್ನು ತಿನ್ನಬೇಕೆಂಬ ಬಯಕೆ ಎಲ್ಲರಲ್ಲೂ ಸಾಮಾನ್ಯ. ಅದರಲ್ಲೂ ಸಕ್ಕರೆಯಲ್ಲಿ ಮಾಡಿದ ಸಿಹಿ ತಿನಿಸುಗಳು ನಮ್ಮನ್ನು ಹೆಚ್ಚು ಆಕರ್ಷಿಸುತ್ತವೆ. ಊಟದ ಬಳಿಕ ಏನಾದರೂ ಸಿಹಿ ತಿನ್ನಬೇಕೆಂಬ ಕಡುಬಯಕೆಯಾಗುತ್ತದೆ. ಈ ಬಯಕೆಯನ್ನು ನಿಯಂತ್ರಿಸುವುದು ಮತ್ತು ನಿರ್ವಹಿಸುವುದು ಬಹಳ ಕಷ್ಟ.

ಹೆಚ್ಚು ಸಕ್ಕರೆ ತಿನ್ನುವುದು ಬೊಜ್ಜು, ಮಧುಮೇಹ ಮತ್ತು ಹೃದಯ ಕಾಯಿಲೆಯಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಎಂಬುದು ನಮಗೆ ತಿಳಿದಿದೆ. ಆದರೂ ನಮ್ಮ ಅಭ್ಯಾಸಗಳನ್ನು ನಿಯಂತ್ರಿಸಲಾಗುವುದಿಲ್ಲ. ಅಷ್ಟಕ್ಕೂ ನಮಗೆ ಸಕ್ಕರೆ ತಿನ್ನಬೇಕೆಂಬ ಹಂಬಲ ಏಕೆ ಎಂದು ತಿಳಿಯೋಣ.

 ಸಕ್ಕರೆಯ ಕಡುಬಯಕೆಗೆ ಕಾರಣ

ರಕ್ತದಲ್ಲಿ ಸಕ್ಕರೆಯ ಅಸಮತೋಲನಸಕ್ಕರೆ ಭರಿತ ಆಹಾರಗಳು ಅಥವಾ ಪಾನೀಯಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ತ್ವರಿತವಾಗಿ ಹೆಚ್ಚಾಗುತ್ತದೆ. ನಂತರ ಅದು ಶೀಘ್ರವಾಗಿ ಕಡಿಮೆಯಾಗುತ್ತದೆ. ಈ ಕುಸಿತದಿಂದಾಗಿ ದೇಹವು ಯಾವಾಗಲೂ ಸಕ್ಕರೆ ಮಟ್ಟವನ್ನು ಮರಳಿ ತರಲು ಕಡುಬಯಕೆಗಳನ್ನು ಉಂಟುಮಾಡುತ್ತದೆ.

ಭಾವನಾತ್ಮಕ ಆಹಾರ ಅನೇಕರು ಸಿಹಿ ತಿನಿಸುಗಳ ಜೊತೆಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಇದು ಮನಸ್ಸಿಗೆ ಸಮಾಧಾನ ನೀಡುತ್ತದೆ ಮತ್ತು ಒತ್ತಡವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಸಿಹಿ ತಿಂಡಿಗಳ ಅತ್ಯುತ್ತಮ ರುಚಿಯು ದೇಹದಲ್ಲಿ ಡೋಪಮೈನ್ ಅನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ನಕಾರಾತ್ಮಕ ಭಾವನೆಗಳಿಂದ ತಾತ್ಕಾಲಿಕ ಪರಿಹಾರವನ್ನು ನೀಡುತ್ತದೆ.

ಸಿಹಿ ತಿನಿಸುಗಳ ಚಟನಿಯಮಿತವಾಗಿ ಸಕ್ಕರೆಯನ್ನು ಸೇವಿಸುವ ಜನರು ಸಿಹಿತಿಂಡಿಗಳಿಗೆ ಅಡಿಕ್ಟ್‌ ಆಗಿಬಿಡುತ್ತಾರೆ. ಅವರ ಸಕ್ಕರೆಯ ಕಡುಬಯಕೆಗಳು ಹೆಚ್ಚಾಗುವುದರಿಂದ ಅದನ್ನು ತ್ಯಜಿಸಲು ಕಷ್ಟವಾಗುತ್ತದೆ. ಈ ಅಭ್ಯಾಸವನ್ನು ನೀವು ಎಷ್ಟು ನಿಯಂತ್ರಿಸುತ್ತೀರೋ ಅಷ್ಟು ಆರೋಗ್ಯಕ್ಕೆ ಒಳ್ಳೆಯದು.

ಪೌಷ್ಟಿಕಾಂಶದ ಕೊರತೆಮೆಗ್ನೀಸಿಯಮ್, ಸತು ಅಥವಾ ಕ್ರೋಮಿಯಂನಂತಹ ಕೆಲವು ಪೋಷಕಾಂಶಗಳ ಕೊರತೆ ಕೂಡ  ಸಕ್ಕರೆಯ ಕಡುಬಯಕೆಗೆ ಕಾರಣವಾಗಬಹುದು. ಈ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ ಮತ್ತು ಸಕ್ಕರೆಯ ಕಡುಬಯಕೆಗಳನ್ನು ಕಡಿಮೆ ಮಾಡುತ್ತವೆ.

ಊಟವನ್ನೇ ಬಿಟ್ಟುಬಿಡುವುದು ಕೆಲಸದ ಒತ್ತಡದಿಂದಾಗಿ ಅನೇಕರಿಗೆ ತಿಂಡಿ ತಿನ್ನಲು ಸಮಯ ಸಿಗುತ್ತಿಲ್ಲ. ಕೆಲವರು ಆಫೀಸಿನಲ್ಲಿ ಬ್ಯುಸಿ ಎಂಬ ಕಾರಣಕ್ಕೆ ಮಧ್ಯಾಹ್ನದ ಊಟವನ್ನು ಬಿಡುತ್ತಾರೆ. ಇನ್ನೂ ಅನೇಕರು ಸುಸ್ತಾದ ಕಾರಣ ರಾತ್ರಿ ಬೇಗನೆ ಮಲಗುತ್ತಾರೆ. ಮೂರು ಹೊತ್ತಿನ ಊಟವೂ ನಮಗೆ ಮುಖ್ಯ ಯಾವುದಾದರೂ ಒಂದನ್ನು ತ್ಯಜಿಸಿದರೂ ಸಿಹಿ ತಿನ್ನಬೇಕೆಂಬ ಕಡು ಬಯಕೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read