ಮದುವೆಯಾಗಿ ಮೂರೂವರೆ ತಿಂಗಳಿಗೆ ‘ಸ್ವರಾ ಭಾಸ್ಕರ್’ ಗರ್ಭಿಣಿ : ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್

ಮದುವೆಯಾದ ಮೂರೂವರೆ ತಿಂಗಳಿಗೆ ನಾನು 4 ತಿಂಗಳ ಗರ್ಭಿಣಿ ಎಂದು ಸ್ವರಾ ಭಾಸ್ಕರ್ (Swara Bhaskar) ಘೋಷಿಸಿ ಫೋಟೋ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಗೆ ಕಾರಣವಾಗಿದೆ.

ಮದುವೆಯಾಗಿ ಮೂರುವರೆ ತಿಂಗಳಿಗೆ ನಾಲ್ಕು ತಿಂಗಳ ಗರ್ಭಿಣಿ ಹೇಗೆ ಎಂದು ಸಖತ್ ಟ್ರೋಲ್ (Troll) ಆಗುತ್ತಿದ್ದಾರೆ. ಅನೇಕ ಟ್ರೋಲರ್‌ಗಳು ಬಾಲಿವುಡ್‌ನಲ್ಲಿ ಮೊದಲು ಮಕ್ಕಳನ್ನು ಪಡೆದು ನಂತರ ಮದುವೆಯಾಗುವುದು ಒಂದು ಟ್ರೆಂಡ್  (trend) ಆಗಿಬಿಟ್ಟಿದೆ ಎಂದು ಕಮೆಂಟ್ ಮಾಡಿದ್ದಾರೆ.

ಸ್ವರಾ ಭಾಸ್ಕರ್ ಈ ವರ್ಷದ ಫೆಬ್ರವರಿಯಲ್ಲಿ ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಅವರನ್ನು ವಿವಾಹವಾದರು. ಮದುವೆಯ ನಂತರ ನಟಿ ಗರ್ಭಿಣಿ ಎಂಬ ವದಂತಿ ಹಬ್ಬಿತ್ತು. ಅದೇ ಸಮಯದಲ್ಲಿ, ನಾನು 4 ತಿಂಗಳ ಗರ್ಭಿಣಿ ಎಂದು ಸ್ವರಾ ಭಾಸ್ಕರ್ ಘೋಷಿಸಿ ಫೋಟೋ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ (social media) ಭಾರಿ ಟ್ರೋಲ್ ಗೆ ಕಾರಣವಾಗಿದೆ.

ಮಗುವಿನ ಬಂಪ್ ಅನ್ನು ಪ್ರದರ್ಶಿಸಿದ ನಂತರ ಜನರು ನಟಿಯನ್ನು ಟ್ರೋಲ್ ಮಾಡುತ್ತಿದ್ದಾರೆ. ಗರ್ಭಾವಸ್ಥೆಯಲ್ಲಿ ಸುಮಾರು 5 ತಿಂಗಳ ವಯಸ್ಸಿನಲ್ಲಿ ಮಾತ್ರ ಅಂತಹ ದೊಡ್ಡ ಹೊಟ್ಟೆಯು ಗೋಚರಿಸುತ್ತದೆ. ಹೀಗಿರುವಾಗ ಸ್ವರಾ ಭಾಸ್ಕರ್ ಅವರ ಬೇಬಿ ಬಂಪ್ ನೋಡಿ ಟ್ರೋಲರ್ ಗಳು ಕಿಚಾಯಿಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read